ETV Bharat / entertainment

ಪದ್ಮವಿಭೂಷಣ ಪುರಸ್ಕೃತ, ಸಂಗೀತ ಮಾಂತ್ರಿಕ ಪಂಡಿತ್ ಶಿವಕುಮಾರ್​ ಶರ್ಮಾ ನಿಧನ - ಖ್ಯಾತ ಸಂತೂರ್​ ವಾದಕ ಪಂಡಿತ ಶಿವಕುಮಾರ್​ ಶರ್ಮಾ

Pundit Shivakumar Sharma No More : ಖ್ಯಾತ ಸಂತೂರ್​ ವಾದಕ ಪಂಡಿತ ಶಿವಕುಮಾರ್​ ಶರ್ಮಾ ಇಂದು ಬೆಳಗ್ಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು..

Shiv Kumar Sharma dies
Shiv Kumar Sharma dies
author img

By

Published : May 10, 2022, 3:03 PM IST

ಮುಂಬೈ(ಮಹಾರಾಷ್ಟ್ರ) : ಖ್ಯಾತ ಸಂಗೀತ ಮಾಂತ್ರಿಕ, ಸಂತೂರ್​ ವಾದಕ ಪಂಡಿತ್​ ಶಿವಕುಮಾರ್​​ ಶರ್ಮಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಕಳೆದ ಆರು ತಿಂಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಡಯಾಲಿಸಿಸ್​ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇಂದು ಬೆಳಗ್ಗೆ ಹೃದಯಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದಾರೆ.

  • The passing away of Pandit Shiv Kumar Sharmaji marks the end of an era. He was the pioneer of Santoor and his contribution is unparalleled. For me, it’s a personal loss and I will miss him no end. May his soul rest in peace. His music lives on forever! Om Shanti 🙏🙏 pic.twitter.com/GcLSF0lSh2

    — Amjad Ali Khan (@AAKSarod) May 10, 2022 " class="align-text-top noRightClick twitterSection" data=" ">

1938ರಲ್ಲಿ ಜಮ್ಮುವಿನಲ್ಲಿ ಜನಿಸಿದ ಶಿವಕುಮಾರ್​ ಶರ್ಮಾ ಅವರು ಶಾಸ್ತ್ರೀಯ ಸಂಗೀತದಲ್ಲಿ ತಮ್ಮದೇ ಚಾಪು ಮೂಡಿಸಿದ್ದರು. ಸಂತೂರ್​ ವಾದಕರಾಗಿದ್ದ ಇವರು, ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಬಾಲಿವುಡ್​​ನ ಚಾಂದಿನಿ, ಸಿಸಿಲಾ, ಡರ್​​ ಸೇರಿದಂತೆ ಅನೇಕ ಸಿನಿಮಾಗಳಿಗೆ ಸಂಗೀತ ನೀಡಿದ್ದರು.

ಕೇವಲ 13 ವಯಸ್ಸಿನಿಂದಲೂ ಸಂತೂರ್​ ನುಡಿಸುತ್ತಿದ್ದ ಇವರು, 1955ರಲ್ಲಿ ಮುಂಬೈನಲ್ಲಿ ಪ್ರಪ್ರಥಮ ಬಾರಿಗೆ ಸಾರ್ವಜನಿಕವಾಗಿ ಸಂತೂರ್​ ಪ್ರದರ್ಶನ ನೀಡುವ ಮೂಲಕ ಜನಪ್ರಿಯತೆ ಗಳಿಸಿದ್ದರು. ಇವರ ಸಾಧನೆ ಗುರುತಿಸಿ 1991ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಮತ್ತು 2001ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

  • Our cultural world is poorer with the demise of Pandit Shivkumar Sharma Ji. He popularised the Santoor at a global level. His music will continue to enthral the coming generations. I fondly remember my interactions with him. Condolences to his family and admirers. Om Shanti.

    — Narendra Modi (@narendramodi) May 10, 2022 " class="align-text-top noRightClick twitterSection" data=" ">

ಪ್ರಧಾನಿ ಮೋದಿ ಸಂತಾಪ : ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಪಂಡಿತ್​ ಶಿವಕುಮಾರ್​ ಶರ್ಮಾ ಅವರ ಅಗಲಿಕೆ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ. ಅವರ ಸಾವಿನ ನೋವು ಭರಿಸುವ ಶಕ್ತಿಯನ್ನ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದಿದ್ದಾರೆ.

ಇದನ್ನೂ ಓದಿ: ಬಿಡುಗಡೆಗೆ ಮುನ್ನವೇ ಹವಾ ಕ್ರಿಯೆಟ್​ ಮಾಡ್ತಿದೆ 'ಫಿಸಿಕ್ಸ್ ಟೀಚರ್'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.