ETV Bharat / entertainment

ನಟಿ ಬಿ ಸರೋಜಾದೇವಿ ನಿವಾಸಕ್ಕೆ ಭೇಟಿ ಕೊಟ್ಟ ತಾರೆಯರು... - b sarojadevi movies

ನಟಿ ಬಿ ಸರೋಜಾದೇವಿ ಹುಟ್ಟುಹಬ್ಬ ಹಿನ್ನೆಲೆ ಅವರ ನಿವಾಸಕ್ಕೆ ನಟಿಯರಾದ ತಾರ, ಶ್ರುತಿ ಹಾಗೂ ಹರಿಣಿ ಸರ್ ಪ್ರೈಸ್ ಭೇಟಿ ನೀಡಿ ಹುಟ್ಟುಹಬ್ಬಕ್ಕೆ ಶುಭ ಕೋರಿದರು.

sandalwood actress visits actress b sarojadevi house
ನಟಿ ಬಿ ಸರೋಜಾದೇವಿ ಹುಟ್ಟುಹಬ್ಬ
author img

By

Published : Jan 7, 2023, 7:55 PM IST

ಸ್ಯಾಂಡಲ್​​ವುಡ್​ ಅಲ್ಲದೇ ಬಹುಭಾಷಾ ಸ್ಟಾರ್ ನಟರ ಜೊತೆ ಸ್ಕ್ರೀನ್ ಹಂಚಿಕೊಂಡ ಅಪ್ಪಟ ಕನ್ನಡ ನಟಿ ಬಿ ಸರೋಜಾದೇವಿ. ಅಭಿನಯ ಸರಸ್ವತಿ ಎಂದು ಕರೆಸಿಕೊಂಡಿದ್ದ ಬಿ ಸರೋಜಾದೇವಿ ಇಂದು ಹುಟ್ಟು ಹಬ್ಬದ ಆಚರಿಸಿಕೊಂಡರು. ಈ ವೇಳೆ ಅವರ ಹುಟ್ಟುಹಬ್ಬಕ್ಕೆ ಕುಟುಂಬಸ್ಥರು, ಚಿತ್ರರಂಗದವರು ಸೇರಿದಂತೆ ಅಭಿಮಾನಿಗಳು ಶುಭ ಕೋರಿದ್ದಾರೆ. ಜನವರಿ 7, 1938ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಇವರು ಇಂದು 85ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಟಿಯರಾದ ತಾರ, ಶ್ರುತಿ ಹಾಗೂ ಹರಿಣಿ ಮಲ್ಲೇಶ್ವರಂನಲ್ಲಿರೋ ಸರೋಜಾದೇವಿಯವರ ನಿವಾಸಕ್ಕೆ ಸರ್ ಪ್ರೈಸ್ ಭೇಟಿ ನೀಡಿ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದರು.

sandalwood actress visits actress b sarojadevi house
ಬಿ ಸರೋಜಾದೇವಿ ಚಿತ್ರಗಳು...

ಬಿ ಸರೋಜಾದೇವಿ ಸಿನಿ ಜರ್ನಿ: ಕನ್ನಡ ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ತನ್ನದೇ ಛಾಪು ಮೂಡಿಸಿರುವ ಬಿ ಸರೋಜಾದೇವಿ ನಮ್ಮ ನಾಡು ಕಂಡ ಅಪ್ರತಿಮ ಸುಂದರಿ. ಕಿತ್ತೂರು ಚೆನ್ನಮ್ಮನಾಗಿ ಬೆಳ್ಳಿ ತೆರೆ ಮೇಲೆ ವಿಜೃಂಭಿಸಿದ ಬಿ ಸರೋಜಾದೇವಿ ಅವರ ಸಿನಿಮಾ ಜರ್ನಿ ಕೂಡ ಬಹಳ ರೋಚಕವಾಗಿದೆ.

ಬಿ ಸರೋಜಾದೇವಿ ಚಿತ್ರಗಳು..

ಕನ್ನಡ ಚಿತ್ರರಂಗ ಪ್ರವೇಶ: ಸರೋಜಾದೇವಿ ಎಂದರೆ ನಮಗೆ ನೆನಪಿಗೆ ಬರುವುದು ಅದ್ಭುತ ನಟನೆ ಮತ್ತು ಮುದ್ದಾದ ಮುಖ. ದಕ್ಷಿಣ ಭಾರತ ಕಂಡ ಅದ್ಭುತ ನಾಯಕ ನಟಿ. ತಮ್ಮ ನಟನಾ ಕೌಶಲ್ಯದಿಂದ ಇಡೀ ಮನೆ ಮನಗಳಲ್ಲಿ ಹೆಸರು ಮಾಡಿದ ಪ್ರತಿಭಾವಂತೆ. ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡ ಸ್ಟಾರ್ ನಟಿ. ಇವರ ತಂದೆ ಭೈರಪ್ಪ, ವೃತ್ತಿಯಲ್ಲಿ ಪೊಲೀಸ್ ಅಧಿಕಾರಿ. ತಾಯಿ ರುದ್ರಮ್ಮ, ಗೃಹಿಣಿ. ಈ ದಂಪತಿಯ 4ನೇ ಮಗಳೇ ಬಿ ಸರೋಜಾದೇವಿ.

ಬಿ ಸರೋಜಾದೇವಿ ಅವರೊಂದಿಗೆ ಅಪ್ಪು

ಸರೋಜಾದೇವಿ ಅವರಿಗೆ ನೃತ್ಯದ ಮೇಲೆ ಅಷ್ಟು ಆಸಕ್ತಿ ಇಲ್ಲವಾದರೂ ಅವರ ಅಮ್ಮನ ಕೋರಿಕೆಯ ಮೇರೆ ನೃತ್ಯ ಕಲಿಯುತ್ತಾರೆ. 17ರ ವಯಸ್ಸಿನಲ್ಲೇ ಸರೋಜಾದೇವಿಗೆ ಸಾಕಷ್ಟು ಸಿನಿಮಾಗಳ ಅವಕಾಶಗಳು ಬರಲು ಆರಂಭವಾಗಿತ್ತು. ಮಹಾಕವಿ ಕಾಳಿದಾಸ ಚಿತ್ರದ ಮೂಲಕ 1955ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಸರೋಜಾದೇವಿ ತಮ್ಮ ಅಭಿನಯ ಕೌಲಶ್ಯದಿಂದ ಬಹುಬೇಗ ಚತುರ್ಭಾಷಾ ತಾರೆಯಾಗಿ ಮಿಂಚಿದರು.

ಅಭಿನಯ ಸರಸ್ವತಿ: ಇವರು ಮಾಡಿರುವ ಕನ್ನಡ ಚಿತ್ರಗಳ ಪಟ್ಟಿ ತುಂಬಾ ದೊಡ್ಡದು. ಮಹಾಕವಿ ಕಾಳಿದಾಸ, ಚಿಂತಾಮಣಿ, ಸ್ಕೂಲ್ ಮಾಸ್ಟರ್, ಜಗಜ್ಯೋತಿ ಬಸವೇಶ್ವರ, ಕಿತ್ತೂರು ರಾಣಿ ಚೆನ್ನಮ್ಮ, ಅಮರಶಿಲ್ಪಿ ಜಕಣಾಚಾರಿ ಹೀಗೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗ ಇವರಿಗೆ ಅಭಿನಯ ಸರಸ್ವತಿ ಎಂದು ಬಿರುದು ನೀಡಿತ್ತು. ಇನ್ನು ಯಾವ ಸಿನಿಮಾದಲ್ಲೂ ಸ್ವಿಮ್ಮಿಂಗ್ ಡ್ರೆಸ್, ತುಂಡುಡುಗೆಯನ್ನು ಬಿ ಸರೋಜಾದೇವಿ ಅವರು ಹಾಕಿ ಅಭಿನಯಿಸಿಲ್ಲ.

ಡಾ. ರಾಜ್ ಕುಮಾರ್ ಜೊತೆ ಸಾಲು ಸಾಲು ಸಿನಿಮಾಗಳಲ್ಲಿ ಬಿ ಸರೋಜಾದೇವಿ ಅಭಿನಯಿಸುವ ಮೂಲಕ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಚಿತ್ರರಂಗದಲ್ಲಿ ನಂಬರ್ 1 ನಟಿ ಅಂತ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಸರೋಜಾದೇವಿ ಶ್ರೀಹರ್ಷ ಎಂಬುವರ ಜೊತೆ ಮದುವೆ ಆಗ್ತಾರೆ. ಮದುವೆಯಾದ ಮೇಲೆ ಅವರ ತಾಯಿಯ ಮಾತಿನ ಮೇರೆಗೆ ಚಿತ್ರರಂಗದಿಂದ ದೂರ ಉಳಿಯುತ್ತಾರೆ.

ಆದರೆ, ಪತಿಯ ಪ್ರೋತ್ಸಾಹದಿಂದ ಮತ್ತೆ 1970ರಲ್ಲಿ ಅವರ ಸಿನಿ ಜೀವನ ಮುಂದುವರೆಯುತ್ತದೆ. ಸರೋಜಾದೇವಿಯವರಿಗೆ ಭುವನೇಶ್ವರಿ, ಇಂದಿರಾ ಮತ್ತು ಗೌತಮ್ ರಾಮಚಂದ್ರನ್ ಎಂಬ ಮೂವರು ಮಕ್ಕಳಿದ್ದಾರೆ. 1986ರಲ್ಲಿ ಸರೋಜಾದೇವಿಯವರ ಪತಿ ಮರಣ ಹೊಂದುತ್ತಾರೆ. ತುಂಬಾ ಪ್ರೀತಿ ಮಾಡುತ್ತಿದ್ದ ಪತಿ ಇಲ್ಲದಿರುವುದು ಅವರಿಗೆ ಬಹಳಾನೇ ನೋವು ಕೊಡ್ತು.

ಇದನ್ನೂ ಓದಿ: 'ಬೆಳಕು, ಆದರೆ ಇದು ಬೆಳಕಲ್ಲ 100 ದಿನದ ದರ್ಶನ'...ಶತದಿನ ಪೂರೈಸಿದ ಕಾಂತಾರ

ಆ ಘಟನೆಯಿಂದ ಹೊರಬಂದ ಬಿ ಸರೋಜಾದೇವಿ ಮಕ್ಕಳ ಜೊತೆ ಬೆಂಗಳೂರಿನ ಮಲ್ಲೇಶ್ವರಂ ನಿವಾಸದಲ್ಲಿ ಜೀವನ ನಡೆಸುತ್ತಿದ್ದಾರೆ. ಕಳೆದ ನಾಲ್ಕೈದು ವರ್ಷಗಳಲ್ಲಿ ದಿ. ಪುನೀತ್ ರಾಜ್​ಕುಮಾರ್, ಅರ್ಜುನ್ ಸರ್ಜಾ, ಸುಮಲತಾ ಅಂಬರೀಷ್ ಸೇರಿದಂತೆ ಕನ್ನಡದ ಸಾಕಷ್ಟು ತಾರೆಯರು ಬಿ. ಸರೋಜಾದೇವಿ ಅವರ ನಿವಾಸಕ್ಕೆ ತೆರೆಳಿ ಅವರ ಹುಟ್ಟು ಹಬ್ಬ ಆಚರಣೆ ಮಾಡುತ್ತಿದ್ದರು. ಆದರೆ, ಪುನೀತ್ ರಾಜ್​ಕುಮಾರ್ ಅಗಲಿಕೆಯಿಂದ ಈ ಸಂಸ್ಕೃತಿ ಅಲ್ಲಿಗೆ ನಿಂತಿದೆ. ಇದೀಗ ತಾರ, ಶ್ರುತಿ ಹಾಗು ಹಿರಿಯ ನಟಿ ಹರಿಣಿ ಅವರು ಸರೋಜಾದೇವಿ ನಿವಾಸಕ್ಕೆ ತೆರಳಿ ಹುಟ್ಟು ಹಬ್ಬದ ಶುಭಾಶಯ ಕೋರಿರುವುದು ವಿಶೇಷವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.