ಹೈದರಾಬಾದ್: ತಮ್ಮ ಅಮೋಘ ನಟನೆ ಮೂಲಕ ಬಾಲಿವುಡ್ನಲ್ಲಿ ಛಾಪು ಮೂಡಿಸಿರುವ ನಟ ವಿಕ್ಕಿ ಕೌಶಲ್. 'ಮಸಾನ್', 'ರಾಝಿ'ಯಂತಹ ಚಿತ್ರಗಳಲ್ಲಿ ಗಮನಾರ್ಹ ಪಾತ್ರ ನಿರ್ವಹಣೆ ಮಾಡಿದ್ದ ನಟ. ಇದೀಗ 'ಸಾಮ್ ಬಹದ್ದೂರ್' ಚಿತ್ರದ ಮೂಲಕ ಗಮನ ಸೆಳೆಯಲು ಮುಂದಾಗಿದ್ದಾರೆ. ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಮಾಣಿಕ್ ಶಾ ಕಥೆ ಹೊಂದಿರುವ ಸಿನಿಮಾವಾಗಿದೆ. ಈ ಚಿತ್ರವನ್ನು ಮೇಘನಾ ಗುಲ್ಜರ್ ನಿರ್ದೇಶಿಸಿದ್ದಾರೆ. ಈ ಹಿಂದೆ ಗುಲ್ಜರ್ ಅವರ ವಿಕ್ಕಿ ಕೌಶಲ್ ಅಭಿನಯದ ರಾಜಿ ಚಿತ್ರವನ್ನು ನಿರ್ದೇಶಿಸಿದ್ದು, ಇದೀಗ ಎರಡನೇ ಬಾರಿ ಇಬ್ಬರು ಒಟ್ಟಿಗೆ ಕಾರ್ಯ ನಿರ್ವಹಣೆ ಮಾಡಲು ಮುಂದಾಗಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಿರ್ದೇಶಕರು ಈ ಎರಡು ಚಿತ್ರವನ್ನು ಹೋಲಿಕೆ ಮಾಡಿದ್ದಾರೆ.
- " class="align-text-top noRightClick twitterSection" data="">
'ಸ್ಯಾಮ್ ಬಹದ್ದೂರ್' ಮತ್ತು 'ರಾಝಿ' ಎರಡು ವಿಭಿನ್ನ ಚಿತ್ರಗಳಾಗಿದೆ. ನಿರ್ದೇಶಕರು 'ರಾಝಿ'ಯಲ್ಲಿ ಆಲಿಯಾ ಭಟ್ ಅಭಿನಯ ಸೆಹ್ಮತ್ ಪಾತ್ರವನ್ನು ಪೋಷಿಸಿದ್ದರು. ಭಾರತೀಯ ಗೂಢಚಾರಿಣಿ ಪಾಕಿಸ್ತಾನಿ ಅಧಿಕಾರಿ ಮದುವೆಯಾಗುವ ಕಥಾನಕ ಹೊಂದಿತ್ತು ಇದು. ಸೆಹ್ಮತ್ ಬಗ್ಗೆ ನಿರ್ದೇಶಕರಿಗೆ ಸಾಕಷ್ಟು ಅನುಕಂಪ ಇತ್ತು. ಆಕೆಯನ್ನು ಪೋಷಿಸಿದ್ದರು. ಸ್ಯಾಮ್ ಅವರು ಯಾರನ್ನು ನಿಂದಿಸುತ್ತಿರಲಿಲ್ಲ. ತಮ್ಮ ಇಡೀ ಜೀವನದಲ್ಲಿ ಅದನ್ನು ಅವರು ಮಾಡಲಿಲ್ಲ. ಇದನ್ನು ನಾನು ಚಿತ್ರದಲ್ಲೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಸ್ಯಾಮ್ ತಮ್ಮ ದೇಶಕ್ಕಾಗಿ ಶತ್ರಗಳನ್ನು ನಿಂದಿಸದೇ ಹೋರಾಡಿದರು. ಇಲ್ಲದೇ ಹೋದರೆ 93,000 ಕೈದಿಗಳನ್ನು ಯುದ್ಧದ ಸಂರ್ಭದಲ್ಲಿ ಅನುಕಂಪದಿಂದ ಕಾಣುತ್ತಿರಲಿಲ್ಲ. ಈ ಸೇನಾ ನಾಯಕರಿಗೆ ಗೌರವ ಸಲ್ಲಿಸಬೇಕಿದೆ. ಅವರು ಸೈನಿಕರನ್ನು ಮಾನವೀಯತೆ ಮತ್ತು ಗೌರವದಿಂದ ಕಾಣುತ್ತಿದ್ದರು. ದೇಶ ಸೇವೆಗಾಗಿಯೇ ಅವರು ಜೀವನವನ್ನು ಮುಡುಪಾಗಿಟ್ಟಿದ್ದರು ಎಂದು ತಿಳಿಸಿದರು.
- " class="align-text-top noRightClick twitterSection" data="">
ಮಾಣಿಕ್ ಶಾ 1971ರ ಭಾರತ ಪಾಕಿಸ್ತಾನದ ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನಾ ಸಿಬ್ಬಂದಿಗಳ ಮುಖ್ಯಸ್ಥರಾಗಿದ್ದರು. ಫೀಲ್ಡ್ ಮಾರ್ಷಲ್ ರ್ಯಾಂಕ್ ಪಡೆದ ಮೊದಲ ಭಾರತೀಯ ಸೇನಾ ಅಧಿಕಾರಿ ಆಗಿದ್ದಾರೆ. ಚಿತ್ರದಲ್ಲಿ ನಟಿ ಸಾನ್ಯಾ ಮಲ್ಹೋತ್ರಾ ಮಾಣಿಕ್ ಶಾ ಅವರ ಹೆಂಡತಿ ಪಾತ್ರದಲ್ಲಿ ಮಿಂಚಿದ್ದರೆ, ಫಾತೀಮಾ ಸನಾ ಶೇಖ್ ಚಿತ್ರದಲ್ಲಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. ಈ ಚಿತ್ರವೂ ಇದೇ ಡಿಸೆಂಬರ್ 1ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.
ವಿಕ್ಕಿ ಕೌಶಲ್ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್', 'ಸರ್ದಾರ್ ಉಧಮ್ ಸಿಂಗ್', 'ರಾಝಿ' ಅಂತಹ ದೇಶಭಕ್ತಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ನಲ್ಲಿನ ಅಮೋಘ ಅಭಿನಯಕ್ಕಾಗಿ ಅತ್ಯುತ್ತಮ ನಟ ವಿಭಾಗದಲ್ಲಿ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಇದನ್ನೂ ಓದಿ: 'ಆಡುಜೀವಿತಂ'ಗಾಗಿ 30 ಕೆ.ಜಿ ತೂಕ ಇಳಿಸಿದ ಪೃಥ್ವಿರಾಜ್ ಸುಕುಮಾರನ್