ETV Bharat / entertainment

ಬಹುನಿರೀಕ್ಷಿತ 'ಟೈಗರ್​ 3' ಬಿಡುಗಡೆಗೆ ಮುಹೂರ್ತ ಫಿಕ್ಸ್​; 'ಜವಾನ್​' ಬಿಡುಗಡೆಯಂದೇ ಟೀಸರ್​ ರಿಲೀಸ್​

author img

By

Published : Jul 24, 2023, 6:45 PM IST

ಬಹುನಿರೀಕ್ಷಿತ 'ಟೈಗರ್​ 3' ಸಿನಿಮಾದ ಟೀಸರ್​ ದಿನಾಂಕ ಮತ್ತು ಬಿಡುಗಡೆಯ ಕುರಿತು ಹೊಸ ಅಪ್​ಡೇಟ್​ ಬಂದಿದೆ.

tiger 3
ಟೈಗರ್ 3

ಶಾರುಖ್​ ಖಾನ್​ ಮತ್ತು ಸಲ್ಮಾನ್​ ಖಾನ್​ ಬಾಲಿವುಡ್​​ನ ಸೂಪರ್​ ಸ್ಟಾರ್​ಗಳು. ಇವರಿಬ್ಬರು 'ಪಠಾಣ್'​ ಚಿತ್ರದಲ್ಲಿ ತೆರೆ ಹಂಚಿಕೊಂಡು ಮೋಡಿ ಮಾಡಿದ್ದರು. ವಿವಾದಗಳಿಂದಲೇ ಬಿಡುಗಡೆಯಾದ ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಈವರೆಗಿನ ಎಲ್ಲಾ ದಾಖಲೆಗಳನ್ನು ಪುಡಿ ಮಾಡಿದ್ದವು. ಅವರು ಮತ್ತೆ ಜೊತೆಯಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಟೈಗರ್​ 3'. ಈ ಸ್ಟಾರ್​ ನಟರ ಕಾಂಬೋವನ್ನು ಮತ್ತೊಮ್ಮೆ ಬೆಳ್ಳಿ ಪರದೆಯಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಇದೀಗ ಚಿತ್ರತಂಡ ಸ್ಟಾರ್​ ನಟರ ಫ್ಯಾನ್ಸ್​ಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಸಲ್ಮಾನ್​ ಅವರ 'ಟೈಗರ್​ 3' ಬಿಡುಗಡೆಯೊಂದಿಗೆ ನಮ್ಮ ದೀಪಾವಳಿಯನ್ನು ವಿಶೇಷವಾಗಿಸಲು ಸಿದ್ಧವಾಗಿದೆ. ಇದೀಗ ಟೀಸರ್​ ದಿನಾಂಕ ಮತ್ತು ಬಿಡುಗಡೆ ಕುರಿತು ಹೊಸ ಅಪ್​ಡೇಟ್​ ಬಂದಿದೆ. ವರದಿಗಳ ಪ್ರಕಾರ, ಟೈಗರ್ 3 ಟೀಸರ್​ ಅನ್ನು ಶಾರುಖ್​ ಖಾನ್​ ಅವರ ಮುಂಬರುವ ಜವಾನ್​ ಚಿತ್ರದ ಜೊತೆಗೆ ಜೋಡಿಸಲಾಗಿದೆ. ಸೆಪ್ಟೆಂಬರ್​ 7, ಜವಾನ್​ ಸಿನಿಮಾ ಬಿಡುಗಡೆಯಂದೇ ಟೈಗರ್ 3 ಟೀಸರ್ ರಿಲೀಸ್​ ಆಗಲಿದೆ.

ಚಲನಚಿತ್ರೋದ್ಯಮದ ಟ್ರ್ಯಾಕರ್ ಮನೋಬಾಲಾ ವಿಜಯಬಾಲನ್ ಇತ್ತೀಚೆಗೆ ಟ್ವಿಟರ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಆಗಸ್ಟ್ 15 ರಂದು ಕ್ಯಾರೆಕ್ಟರ್ ಟೀಸರ್, ಸೆಪ್ಟೆಂಬರ್ 7 ರಂದು ಟೈಗರ್ 3 ಟೀಸರ್ (ಜವಾನ್​ ಬಿಡುಗಡೆಯೊಂದಿಗೆ), ಸೆಪ್ಟೆಂಬರ್ 28 ರಂದು ಟ್ರೈಲರ್ 1, ಅಕ್ಟೋಬರ್ 6 ರಂದು ಮೊದಲ ಹಾಡು, ಅಕ್ಟೋಬರ್​ 16 ರಂದು ಎರಡನೇ ಹಾಡು, ಅಕ್ಟೋಬರ್ 25 ರಂದು ಟ್ರೇಲರ್ 2, ನವೆಂಬರ್ 2 ರಂದು ಶಾರುಖ್ ಖಾನ್ ಪೋಸ್ಟರ್, ನವೆಂಬರ್ 7 ಮತ್ತು 9 ರ ನಡುವೆ ಪ್ರೋಮೋ ಮತ್ತು ನವೆಂಬರ್​ 10 ರಂದು ವಿಶ್ವದಾದ್ಯಂತ ಸಿನಿಮಾ ಬಿಡುಗಡೆಯಾಗಲಿದೆ.

ಟೈಗರ್​ 3 ಸಿನಿಮಾದ ಆ್ಯಕ್ಷನ್ ಸೀನ್​ ಇಡೀ ಭಾರತೀಯ ಚಿತ್ರರಂಗದಲ್ಲಿ ಚಿತ್ರೀಕರಿಸಲಾಗುವ ಅತ್ಯಂತ ದುಬಾರಿ ಸೀನ್​​ ಆಗಲಿದೆ ಎಂದು ವದಂತಿಗಳಿವೆ. ಈವರೆಗೆ ಇಷ್ಟು ದೊಡ್ಡ ಮಟ್ಟದಲ್ಲಿ ಸೀನ್​ ನಿರ್ಮಾಣಗೊಂಡಿಲ್ಲ. ಈ ಹಿನ್ನೆಲೆ ಅಪಾರ ಸಂಖ್ಯೆಯ ಅಭಿಮಾನಿಗಳು ಸಿನಿಮಾ ಬಿಡುಗಡೆಯನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ. ಸಲ್ಮಾನ್​​ ಎದುರಾಳಿಯಾಗಿ ಇಮ್ರಾನ್ ಹಶ್ಮಿ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಸಲ್ಮಾನ್​ ವಿರುದ್ಧ ಹೋರಾಡುವ ಐಎಸ್‌ಐ ಏಜೆಂಟ್ ಜೋಯಾ ಪಾತ್ರದಲ್ಲಿ ಕತ್ರಿನಾ ಕೈಫ್ ನಟಿಸುತ್ತಿದ್ದಾರೆ. ಈ ಮೊದಲು ತೆರೆಕಂಡಿರುವ ಟೈಗರ್​ 1 ಮತ್ತು 2 ಚಿತ್ರದಲ್ಲೂ ಸಲ್ಮಾನ್​ ಮತ್ತು ಕತ್ರಿನಾ ಸ್ಕ್ರೀನ್​ ಶೇರ್ ಮಾಡಿದ್ದಾರೆ.

ಟೈಗರ್ 3 ಆಕ್ಷನ್ ಚಿತ್ರದ ಮೂರನೇ ಭಾಗವಾಗಿದೆ. ಇದರ ಮೊದಲ ಅಧ್ಯಾಯವು 'ಏಕ್ ಥಾ ಟೈಗರ್ ಥಾ' 2012 ರಲ್ಲಿ ಬಿಡುಗಡೆಯಾಯಿತು. ಕಬೀರ್ ಖಾನ್ ನಿರ್ದೇಶಿಸಿದ್ದರು. ಇದರ ನಂತರ 2017 ರಲ್ಲಿ ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ 'ಟೈಗರ್ ಜಿಂದಾ ಹೈ' ರಿಲೀಸ್​ ಆಯಿತು.ಇದೀಗ ಟೈಗರ್​ 3ಯನ್ನು ಮನೀಶ್ ಶರ್ಮಾ ನಿರ್ದೇಶಿಸುತ್ತಿದ್ದಾರೆ.

ಇದನ್ನೂ ಓದಿ: ಟೈಗರ್​ 3 ಶೂಟಿಂಗ್​: ಭರ್ಜರಿ ಆ್ಯಕ್ಷನ್​ ಸೀನ್​ ಪೂರ್ಣ, ಸಲ್ಲು - ಶಾರುಖ್​​ ವಿಡಿಯೋ ಲೀಕ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.