ETV Bharat / entertainment

'ಕಿಸಿ ಕಿ ಭಾಯ್​ ಕಿಸಿ ಕಿ ಜಾನ್' ಗಳಿಕೆ ಇಳಿಕೆ​: 6ನೇ ದಿನದ ಕಲೆಕ್ಷನ್ ಎಷ್ಟು?

author img

By

Published : Apr 27, 2023, 1:12 PM IST

'ಕಿಸಿ ಕಿ ಭಾಯ್​ ಕಿಸಿ ಕಿ ಜಾನ್'​ ಚಿತ್ರ ಬಿಡುಗಡೆಯಾದ ಆರನೇ ದಿನಕ್ಕೆ ಸುಮಾರು 4.25 ಕೋಟಿ ರೂ ಗಳಿಸಿದೆ.

Salman Khan
ಕಿಸಿ ಕಿ ಭಾಯ್​ ಕಿಸಿ ಕಿ ಜಾನ್

ಬಾಲಿವುಡ್​ ಸೂಪರ್​ಸ್ಟಾರ್​ ಸಲ್ಮಾನ್​ ಖಾನ್​ ಅವರ 'ಕಿಸಿ ಕಿ ಭಾಯ್​ ಕಿಸಿ ಕಿ ಜಾನ್'​ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ. ಇದು ವರ್ಷದ ಬಹು ನಿರೀಕ್ಷಿತ ಸಿನಿಮಾವಾಗಿದ್ದು, ಕಲೆಕ್ಷನ್​ ವಿಷಯದಲ್ಲಿ ಬುಧವಾರ ಭಾರೀ ಕುಸಿತ ಕಂಡಿದೆ. ಬಿಡುಗಡೆಯಾದ ಆರನೇ ದಿನಕ್ಕೆ ಸುಮಾರು 4.25 ಕೋಟಿ ರೂ ಗಳಿಸಿದೆ. ಹೀಗಾಗಿ ಭಾರತದಲ್ಲಿ ಸಿನಿಮಾದ ಒಟ್ಟು ಗಳಿಕೆಯು ಈವರೆಗೆ 83.25 ಕೋಟಿ ರೂಪಾಯಿಗೆ ಬಂದು ತಲುಪಿದೆ. ಈ ವಾರಾಂತ್ಯದಲ್ಲಿ 100 ಕೋಟಿ ರೂಪಾಯಿ ಕ್ಲಬ್​ ಸೇರುವ ಸಾಧ್ಯತೆಯಿದೆ.

ಏಪ್ರಿಲ್​ 21, ಈದ್​ ಹಬ್ಬದ ದಿನದಂದು ಬಿಡುಗಡೆಯಾದ 'ಕಿಸಿ ಕಿ ಭಾಯ್​ ಕಿಸಿ ಕಿ ಜಾನ್'​ ಚಿತ್ರ ಉತ್ತಮ ಪ್ರದರ್ಶನ ಕಂಡಿತ್ತು. ಅದಾಗ್ಯೂ ಗಮನಾರ್ಹ ಕುಸಿತ ಕಂಡುಬಂದಿದೆ. ಬೇರೆ ಯಾವುದೇ ಸಿನಿಮಾಗಳು ಸದ್ಯ ಥಿಯೇಟರ್​ನಲ್ಲಿ ಸದ್ದು ಮಾಡುತ್ತಿಲ್ಲ. ಹೀಗಾಗಿ 'ಕಿಸಿ ಕಿ ಭಾಯ್​ ಕಿಸಿ ಕಿ ಜಾನ್' ಎರಡನೇ ವಾರದಲ್ಲೂ ಅತ್ಯಂತ ಜನಪ್ರಿಯ ಹಿಂದಿ ಸಿನಿಮಾವಾಗಿ ಮುಂದುವರೆಯುತ್ತದೆ.

ಹೀಗಾಗಿ ಸಲ್ಮಾನ್​ ಮುಖ್ಯಭೂಮಿಕೆಯ ಚಿತ್ರವು ಈ ವಾರದಲ್ಲಿ ಉತ್ತಮ ಗಳಿಕೆ ಕಾಣಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. 'ಕಿಸಿ ಕಿ ಭಾಯ್​ ಕಿಸಿ ಕಿ ಜಾನ್' ಕಳೆದ ಶುಕ್ರವಾರ ಬಿಡುಗಡೆಯಾಗಿದ್ದು, ಮೊದಲ ವಾರದಲ್ಲಿ 87.50 ರಿಂದ 88 ಕೋಟಿ ರೂ. ವರೆಗೆ ಗಳಿಸುವ ನಿರೀಕ್ಷೆಯಿದೆ. ಚಿತ್ರವು ರೇಸ್‌ನಲ್ಲಿ ಉಳಿಯಲು ಎರಡನೇ ವಾರಾಂತ್ಯದಲ್ಲಿ ಹೆಚ್ಚಿನ ಗಮನಾರ್ಹ ವಹಿಸಬೇಕಾಗುತ್ತದೆ. ಆದರೂ ಭಾರತದಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್​ ದಾಟುವುದು ನಿಶ್ಚಯವಾಗಿದೆ.

ಇದನ್ನೂ ಓದಿ: ನಟಿ ಸಮಂತಾಳ ಸಮಾಜಮುಖಿ ಕಾರ್ಯ ಮೆಚ್ಚಿ ದೇವಾಲಯ ಕಟ್ಟಿಸಿದ ಅಭಿಮಾನಿ

ಆದರೆ ಈ ಹಂತದ ನಂತರ ಚಿತ್ರ ಎಷ್ಟು ಕಲೆಕ್ಷನ್​ ಮಾಡುತ್ತದೆ ಎಂಬುದು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಿನಿಮಾವು ಉತ್ತಮ ಪ್ರದರ್ಶನ ನೀಡಿದರೆ, 'ತೂ ಜೂಟಿ ಮೇ ಮಕ್ಕರ್​' ಸಿನಿಮಾವನ್ನು ಹಿಂದಿಕ್ಕಿ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯ ಹಿಂದಿ ಚಿತ್ರವಾಗಬಹುದು. ಆದರೆ ಅದು ಸಾಧ್ಯವಾಗದೇ ಇದ್ದಲ್ಲಿ, 'ತೂ ಜೂಟಿ ಮೇ ಮಕ್ಕರ್'​ ಚಿತ್ರವು ಎರಡನೇ ಸ್ಥಾನದಲ್ಲಿ ಉಳಿಯಲಿದೆ. ನಾವು ಜಾಗತಿಕವಾಗಿ ನೋಡುವುದಾದರೆ ಸಲ್ಲು ಚಿತ್ರವು ರಣಬೀರ್​ ಮತ್ತು ಶ್ರದ್ಧಾ ಸಿನಿಮಾಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.

ಇನ್ನೂ 'ಕಿಸಿ ಕಿ ಭಾಯ್​ ಕಿಸಿ ಕಿ ಜಾನ್'​ ಚಿತ್ರದಲ್ಲಿ ಸಲ್ಮಾನ್ ಖಾನ್​​ ಮತ್ತು ಪೂಜಾ ಹೆಗ್ಡೆ ಜೊತೆಗೆ ವೆಂಕಟೇಶ್​ ದಗ್ಗುಬಾಟಿ, ಶೆಹನಾಜ್​ ಗಿಲ್​, ಪಾಲಕ್​ ತಿವಾರಿ, ರಾಘವ್​ ಜುಯಲ್​, ಸಿದ್ಧಾರ್ಥ್​ ನಿಗಮ್​, ಜಸ್ಸಿ ಗಿಲ್​ ಮತ್ತು ಜಗಪತಿ ಬಾಬು ಅವರಂತಹ ನಟರು ಕಾಣಿಸಿಕೊಂಡಿದ್ದಾರೆ. ಶಹನಾಜ್​ ಗಿಲ್​ ಮತ್ತು ಪಾಲಕ್​ ತಿವಾರಿ ಅವರಿಗಿದು ಚೊಚ್ಚಲ ಹಿಂದಿ ಚಿತ್ರ. ಬಹು ತಾರಾಗಣದ ಸಿನಿಮಾವು 100 ಕ್ಕೂ ಹೆಚ್ಚು ದೇಶಗಳಲ್ಲಿ ತೆರೆ ಕಂಡಿದೆ. ನಮ್ಮ ದೇಶದಲ್ಲಿ 4,500ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಮತ್ತು ವಿದೇಶಗಳಲ್ಲಿ 1,200ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಇದನ್ನೂ ಓದಿ: ಕನಸುಗಾರ ರವಿಚಂದ್ರನ್ ಸುಪುತ್ರನ ಸಿನಿಮಾ ಶೀರ್ಷಿಕೆ ಅನಾವರಣ: ಕ್ಯಾಚಿ ಟೈಟಲ್​ನೊಂದಿಗೆ ಬಂದ ವಿಕ್ರಮ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.