ETV Bharat / entertainment

'ಮಗುವನ್ನು ಹೊಂದುವ ಆಸೆಯಿತ್ತು'.. ಮದುವೆ, ಮಕ್ಕಳ ಬಗ್ಗೆ ಮಾತನಾಡಿದ ಬಾಲಿವುಡ್​​ ಬ್ಯಾಚುಲರ್​​ ಸಲ್ಲು - ಆಪ್ ಕಿ ಅದಾಲತ್‌

ಆಪ್ ಕಿ ಅದಾಲತ್‌ ಶೋನಲ್ಲಿ​ ಸಲ್ಮಾನ್​ ಖಾನ್ ಮಕ್ಕಳನ್ನು ಹೊಂದುವ ಆಸೆಯಿತ್ತು ಎಂದು ತಿಳಿಸಿದ್ದಾರೆ.

Salman Khan
ಸಲ್ಮಾನ್ ಖಾನ್
author img

By

Published : Apr 30, 2023, 11:44 AM IST

ಬಾಲಿವುಡ್​​ ಬ್ಯಾಚುಲರ್​​ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಮಕ್ಕಳ ಮೇಲಿರುವ ಪ್ರೀತಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆಗಾಗ್ಗೆ ತಮ್ಮ ಸಂಬಂಧಿ ಮಕ್ಕಳ ಜೊತೆ ಸಮಯ ಕಳೆಯುತ್ತಾರೆ. ದಬಾಂಗ್ ಸ್ಟಾರ್ ಒಮ್ಮೆ ತಮ್ಮದೇ ಮಗುವನ್ನು ಹೊಂದುವ ಬಗ್ಗೆ ಯೋಚಿಸಿದ್ದರು ಎಂಬ ವಿಷಯ ಬಹಿರಂಗಗೊಂಡಿದೆ.

ಇತ್ತೀಚೆಗೆ, ಆಪ್ ಕಿ ಅದಾಲತ್‌ ಶೋನಲ್ಲಿ ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್​​ ಭಾಗಿಯಾಗಿದ್ದರು. ಅವರ ಮದುವೆಯ ಯೋಜನೆಗಳ ಬಗ್ಗೆ ಪ್ರಶ್ನೆಗಳು ಎದುರಾದವು. ಅದಕ್ಕೆ ಪ್ರತಿಕ್ರಿಯಿಸಿರುವ ಸಲ್ಲು, "ಯೋಜನೆ ಇತ್ತು, ಅದು ಸೊಸೆಗಾಗಿ ಅಲ್ಲ, ಮಗುವಿಗಾಗಿ. ಆದರೆ ಭಾರತೀಯ ಕಾನೂನುಗಳ ಪ್ರಕಾರ, ಅದು ಸಾಧ್ಯವಿಲ್ಲ. ಈಗ ನಾವು ಏನು ಮಾಡಬೇಕು, ಹೇಗೆ ಮಾಡಬೇಕೆಂದು ನೋಡೋಣ'' ಎಂದು ತಿಳಿಸಿದರು.

ಸಲ್ಮಾನ್ ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆ ಮತ್ತು ಅವರೊಂದಿಗೆ ಹೇಗೆ ಆತ್ಮೀಯ ಬಾಂಧವ್ಯ ಹೊಂದುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಅವರು ತಮ್ಮ ಸೋದರಳಿಯ ಅಹಿಲ್ ಶರ್ಮಾನನ್ನು ಹೇಗೆ ಇಷ್ಟಪಡುತ್ತಾರೆ ಮತ್ತು ಆಗಾಗ್ಗೆ ಅವರೊಂದಿಗೆ ಹೇಗೆ ಸಮಯ ಕಳೆಯುತ್ತಾರೆ ಎಂಬುದನ್ನು ನೀವು ನೋಡಿರುತ್ತೀರಿ.

ಕರಣ್ ಜೋಹರ್ ಅವರ ಮದುವೆಯ ಬಗ್ಗೆ ಸಲ್ಮಾನ್ ಪ್ರಶ್ನಿಸಿದ್ದ ದಿನದ ಬಗ್ಗೆ ಕೇಳಿದಾಗ, ಅವರು (ಕರಣ್​) ಈಗ ಎರಡು ಮಕ್ಕಳ ತಂದೆಯಾಗಿದ್ದಾರೆ ಎಂದು ಸಲ್ಮಾನ್ ಪ್ರತಿಕ್ರಿಯಿಸಿದರು. "ಹಾಗಾಗಿ ನಾವು ಆ ಪ್ರಕ್ರಿಯೆಗೆ ಪ್ರಯತ್ನಿಸುತ್ತಿದ್ದೇನೆ. ಆದರೆ, ಆ ಕಾನೂನು ಬದಲಾಗಿರಬಹುದು, ಆದ್ದರಿಂದ ನೋಡೋಣ. ನನಗೆ ಮಕ್ಕಳೆಂದರೆ ಇಷ್ಟ. ನಮಗೆ ಇಡೀ ಜಿಲ್ಲೆ, ಇಡೀ ಗ್ರಾಮವಿದೆ. ಆದರೆ ನನ್ನ ಮಗುವಿನ ತಾಯಿ ನನ್ನ ಹೆಂಡತಿಯಾಗುತ್ತಾಳೆ'' ಎಂದು ತಿಳಿಸಿದ್ದಾರೆ.

ಸಿನಿಮಾ ಕೆಲಸ ಗಮನಿಸುವುದಾದರೆ, ಇತ್ತೀಚೆಗೆ ಆ್ಯಕ್ಷನ್ ಎಂಟರ್‌ಟೈನರ್ ಚಲನಚಿತ್ರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ನಲ್ಲಿ ಕಾಣಿಸಿಕೊಂಡರು. ಇದು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದರೂ, ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಫರ್ಹಾದ್ ಸಾಮ್ಜಿ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಶೆಹನಾಜ್ ಗಿಲ್, ಪಲಕ್ ತಿವಾರಿ, ಸಿದ್ಧಾರ್ಥ್ ನಿಗಮ್, ವೆಂಕಟೇಶ್ ದಗ್ಗುಬಾಟಿ, ಭೂಮಿಕಾ ಚಾವ್ಲಾ, ರಾಘವ್ ಜುಯಲ್ ಮತ್ತು ಜಸ್ಸಿ ಗಿಲ್ ಸೇರಿದಂತೆ ಕೆಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: 'ಐಶ್ವರ್ಯಾ ರೈಗೆ ಸಿನಿಮಾಗಳಲ್ಲಿ ನಟಿಸಲು ಬಿಡಿ': ಅಭಿಮಾನಿ ಮಾತಿಗೆ ಅಭಿಷೇಕ್​ ಉತ್ತರ ಹೀಗಿತ್ತು

ಮುಂದೆ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಟೈಗರ್ 3ನಲ್ಲಿ ನಟಿ ಕತ್ರಿನಾ ಕೈಫ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. 2023ರ ದೀಪಾವಳಿ ಸಂದರ್ಭದಲ್ಲಿ ಸಿನಿಮಾ ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ. ಈ ಬಹುನಿರೀಕ್ಷಿತ ಚಿತ್ರದಲ್ಲಿ ಪಠಾಣ್​ ನಟ ಶಾರುಖ್​ ಖಾನ್​ ನಟಿಸುತ್ತಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಈಗಾಗಲೇ ತೆರೆ ಕಂಡಿರುವ ಟೈಗರ್ ಭಾಗ 1 ಮತ್ತು 2ರಲ್ಲಿ ಕೂಡ ಕತ್ರಿನಾ ಕೈಫ್ ಮತ್ತು ಸಲ್ಮಾನ್​ ಖಾನ್​ ತೆರೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 'ಬುಡಕಟ್ಟು ರಾಣಿ'ಯಾದ ಗಡಂಗ್​​ ರಕ್ಕಮ್ಮ.. ​​ವಿಭಿನ್ನ ಅವತಾರದಲ್ಲಿ ವಿಕ್ರಾಂತ್​ ರೋಣನ ಜ್ಯಾಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.