ETV Bharat / entertainment

ಟೈಗರ್ 3: ಕತ್ರಿನಾ ಕೈಫ್ ಸ್ಟೈಲಿಶ್ ಫೋಟೋ ಹಂಚಿಕೊಂಡ ಸಲ್ಮಾನ್​ ಖಾನ್ - ಟೈಗರ್ 3

ಸಲ್ಮಾನ್ ಖಾನ್ ತಮ್ಮ ಮುಂದಿನ 'ಟೈಗರ್ 3' ಚಿತ್ರದಿಂದ ಕತ್ರಿನಾ ಕೈಫ್ ಅವರ ಸ್ಟೈಲಿಶ್ ಫೋಟೋ ಶೇರ್ ಮಾಡಿದ್ದಾರೆ.

Salman Khan Katrina Kaif
ಸಲ್ಮಾನ್​ ಖಾನ್ ಕತ್ರಿನಾ ಕೈಫ್
author img

By ETV Bharat Karnataka Team

Published : Oct 21, 2023, 3:58 PM IST

ಬಾಲಿವುಡ್ ಬಹುಬೇಡಿಕೆ ತಾರೆಯರಾದ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಮುಖ್ಯಭೂಮಿಕೆಯ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ವಿಭಿನ್ನವಾಗಿ ಪ್ರಚಾರ ಪ್ರಾರಂಭಿಸಿದೆ. ಮನೀಶ್ ಶರ್ಮಾ ನಿರ್ದೇಶನದ ಸ್ಪೈ ಆ್ಯಕ್ಷನ್​ ಥ್ರಿಲ್ಲರ್ 'ಟೈಗರ್ 3'ರ ಲೇಕೆ ಪ್ರಭು ಕಾ ನಾಮ್ ಸಾಂಗ್ ಸೋಮವಾರ ಅನಾವರಣಗೊಳ್ಳಲಿದೆ.

ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರ ಗಮನ ಸೆಳೆಯುವ ನಿಟ್ಟಿನಲ್ಲಿ, ನಿನ್ನೆ 'ಲೇಕೆ ಪ್ರಭು ಕಾ ನಾಮ್' ಹಾಡಿನ ಟೀಸರ್ ಅನಾವರಣಗೊಳಿಸಲಾಗಿತ್ತು. ಅದಕ್ಕೂ ಮುನ್ನ ಪೋಸ್ಟರ್ ಹಂಚಿಕೊಂಡು ಸಾಂಗ್​ ರಿಲೀಸ್​ ಡೇಟ್ ಅನೌನ್ಸ್ ಮಾಡಲಾಗಿತ್ತು. ಇಂದು ನಾಯಕ ನಟ ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಕತ್ರಿನಾ ಕೈಫ್ ಅವರ ಮನಮೋಹಕ ಫೋಟೋ ಶೇರ್ ಮಾಡಿದ್ದಾರೆ. ಅಲ್ಲದೇ, ಕ್ಯಾಟ್​ ಜೊತೆ ಡ್ಯಾನ್ಸ್ ಮಾಡಿರೋದರ ಬಗ್ಗೆ ಹರ್ಷ ಹಂಚಿಕೊಂಡಿದ್ದಾರೆ. ಪೋಸ್ಟರ್, ಟೀಸರ್​ಗಳನ್ನು ಗಮನಿಸಿದರೆ ಇದೊಂದು ಪಾರ್ಟಿ ಸಾಂಗ್​ ಅನ್ನೋದು ಪಕ್ಕಾ ಆಗಿದ್ದು, ಕತ್ರಿನಾ ಕೈಫ್ ಬಹಳ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಶೇರ್ ಮಾಡಿದ ಸಲ್ಮಾನ್​ ಖಾನ್​​, "ಕ್ಯಾಟ್ ಯೂ ಕಿಲ್ಡ್ ಇಟ್. ನಿಮ್ಮೊಂದಿಗೆ ಡ್ಯಾನ್ಸ್ ಮಾಡೋದು ಯಾವಾಗಲೂ ಖುಷಿಯ ವಿಚಾರ. 'ಲೇಕೆ ಪ್ರಭು ಕಾ ನಾಮ್' ಪಾರ್ಟಿ ಟ್ರ್ಯಾಕ್‌ ಅನ್ನು ಸೋಮವಾರದಂದು ವೀಕ್ಷಿಸಿ. ಟೈಗರ್​ 3 ನವೆಂಬರ್ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ರಿಲೀಸ್​ ಆಗುತ್ತಿದೆ" ಎಂದು ಬರೆದಿದ್ದಾರೆ. ಬ್ಲ್ಯಾಕ್​ ಶಾರ್ಟ್ ಡ್ರೆಸ್​​​ನಲ್ಲಿ ಕತ್ರಿನಾ ಕೈಫ್ ಸಖತ್​​ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ಕತ್ರಿನಾ ಕೈಫ್ ಕೂಡ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದೇ ಫೋಟೋ ಶೇರ್ ಮಾಡಿದ್ದಾರೆ. ''ನಾವು ಬರುತ್ತಿದ್ದೇವೆ. ಲೇಕೆ ಪ್ರಭು ಕಾ ನಾಮ್ ಸಾಂಗ್ ಅಕ್ಟೋಬರ್ 23 ರಂದು ಅನಾವರಣಗೊಳ್ಳಲಿದೆ. ನವೆಂಬರ್ 12 ರಂದು ಚಿತ್ರಮಂದಿರಗಳಲ್ಲಿ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ. ನಟಿಯ ಪೋಸ್ಟ್‌ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, "ಜೋಯಾಗಾಗಿ ಹೆಚ್ಚು ಕಾಯಲು ಸಾಧ್ಯವಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಯೋರ್ವರು ಪ್ರತಿಕ್ರಿಯಿಸಿ, "ನಿಮ್ಮಿಬ್ಬರನ್ನು ಒಟ್ಟಿಗೆ ನೋಡುವುದು ಖುಷಿಯ ವಿಚಾರ" ಎಂದು ಬರೆದಿದ್ದಾರೆ.

ಇದನ್ನೂ ಓದಿ: ಟೈಗರ್ 3 ಪಾರ್ಟಿ ಸಾಂಗ್ ಟೀಸರ್ ಔಟ್: ಸಲ್ಮಾನ್​ ಸಿನಿಮಾಗೆ ಅರಿಜಿತ್ ಸಿಂಗ್​ ಸಾಥ್!

'ಲೇಕೆ ಪ್ರಭು ಕಾ ನಾಮ್' ಹಾಡನ್ನು ಖ್ಯಾತ ಹಿನ್ನೆಲೆ ಗಾಯಕ ಅರಿಜಿತ್ ಸಿಂಗ್ ಹಾಡಿದ್ದಾರೆ. ಅಮಿತಾಭ್ ಭಟ್ಟಾಚಾರ್ಯ ಸಾಹಿತ್ಯವಿದ್ದು, ಪ್ರೀತಮ್ ಸಂಗೀತ ಸಂಯೋಜಿಸಿದ್ದಾರೆ. ವೈಭವಿ ಮರ್ಚೆಂಟ್ ಅವರ ನೃತ್ಯ ಸಂಯೋಜನೆ ಈ ಹಾಡಿಗಿದೆ. ಇಮ್ರಾನ್ ಹಶ್ಮಿ ಖಳನಾಯಕನ ಪಾತ್ರ ವಹಿಸಿದ್ದಾರೆ. ರೇವತಿ ಕೂಡ ನಟಿಸಿದ್ದಾರೆ. ಜವಾನ್​ ಸ್ಟಾರ್ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮನೀಶ್ ಶರ್ಮಾ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ದಿಪಾವಳಿ ಸಂದರ್ಭ ತೆರೆಗಪ್ಪಳಿಸಲಿದೆ.

ಇದನ್ನೂ ಓದಿ: ಗಣಪತ್ ಕಲೆಕ್ಷನ್​​: ಟೈಗರ್ ಶ್ರಾಫ್ - ಕೃತಿ ಸನೋನ್ ಸಿನಿಮಾಗೆ ಹಿನ್ನೆಡೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.