2023ರಲ್ಲಿ ಎರಡು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ನೀಡಿರುವ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರ ಮುಂದಿನ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ 'ಡಂಕಿ'. ಇತ್ತ ದಕ್ಷಿಣ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ 'ಸಲಾರ್' ಕೂಡ ಬಿಡುಗಡೆಗೆ ಸಜ್ಜಾಗಿದೆ. ಎರಡೂ ಸಿನಿಮಾಗಳು ಡಿಸೆಂಬರ್ 22ರಂದು ಬಿಡುಗಡೆ ಆಗಲು ರೆಡಿಯಾಗಿವೆ. ಬಾಕ್ಸ್ ಆಫೀಸ್ ಫೈಟ್ ಬಿಸಿ ಬೆನ್ನಲ್ಲೇ 'ಡಂಕಿ' ಸಿನಿಮಾವನ್ನು ಮುಂದೂಡಲು ಯೋಚಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
-
Buzz: #SalaarVsDunki❌
— Manobala Vijayabalan (@ManobalaV) October 12, 2023 " class="align-text-top noRightClick twitterSection" data="
#ShahRukhKhan's #Dunki likely to get POSTPONED.… pic.twitter.com/xWbDqHhioj
">Buzz: #SalaarVsDunki❌
— Manobala Vijayabalan (@ManobalaV) October 12, 2023
#ShahRukhKhan's #Dunki likely to get POSTPONED.… pic.twitter.com/xWbDqHhiojBuzz: #SalaarVsDunki❌
— Manobala Vijayabalan (@ManobalaV) October 12, 2023
#ShahRukhKhan's #Dunki likely to get POSTPONED.… pic.twitter.com/xWbDqHhioj
ಸಲಾರ್ ವರ್ಸಸ್ ಡಂಕಿ: ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನೇತೃತ್ವದಲ್ಲಿ ಸಲಾರ್ ಸಿದ್ಧಗೊಂಡಿದೆ. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಜೊತೆಗೆ ಪ್ರಶಾಂತ್ ನೀಲ್ - ಪ್ರಭಾಸ್ ಕಾಂಬಿನೇಶನ್ ಅಂದ ಮೇಲೆ ಪ್ರೇಕ್ಷಕರ ನಿರೀಕ್ಷೆ ಕೊಂಚ ಹೆಚ್ಚೇ ಅಲ್ವೇ?. ಇತ್ತ ಡಂಕಿ ಸಿನಿಮಾ ರಾಜ್ ಕುಮಾರ್ ಹಿರಾನಿ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಸೂಪರ್ ಸ್ಟಾರ್ ಎಸ್ಆರ್ಕೆ ಲೀಡ್ ರೋಲ್ನಲ್ಲಿದ್ದಾರೆ. ಬಹುಭಾಷಾ ನಟಿ ತಾಪ್ಸಿ ಪನ್ನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬಾಕ್ಸ್ ಆಫೀಸ್ ಫೈಟ್?! ಕ್ರಿಸ್ಮಸ್ - ನ್ಯೂ ಇಯರ್ ಸಂದರ್ಭ ಡಂಕಿ ಸಿನಿಮಾ ಬಿಡುಗಡೆ ಆಗಲಿದೆ ಎಂದು ಶಾರುಖ್ ಖಾನ್ ಘೋಷಿಸಿದ್ದಾರೆ. ಇತ್ತ ಪ್ರಭಾಸ್ ಅವರ ಸಲಾರ್ 1 ಅನ್ನೂ ಕೂಡ ಡಿಸೆಂಬರ್ ಕೊನೆಗೆ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಇದು ಬಾಕ್ಸ್ ಆಫೀಸ್ ಫೈಟ್ಗೆ ಕಾಣವಾಗಲಿದೆ. ಆದರೆ ಇತ್ತೀಚಿನ ವರದಿಗಳು, ಡಂಕಿಯನ್ನು ಮುಂದೂಡುವ ಸಾಧ್ಯತೆ ಇದೆ ಎಂದು ಸೂಚಿಸಿವೆ.
ಇದನ್ನೂ ಓದಿ: ಮಲಯಾಳಂ ಚಿತ್ರರಂಗದ ಖ್ಯಾತ ನಿರ್ಮಾಪಕ ಗಂಗಾಧರನ್ ನಿಧನ!
ಅಧಿಕೃತ ಘೋಷಣೆಗೆ ಕಾತರ: ಸಿನಿಮಾ ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಅವರು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ (ಟ್ವಿಟರ್) ನಲ್ಲಿ, ಶಾರುಖ್ ಅವರ ಡಂಕಿಯನ್ನು ಮುಂದೂಡುವ ಸಾಧ್ಯತೆ ಇದೆ ಎಂದು ಬರೆದುಕೊಂಡಿದ್ದಾರೆ. ಪೋಸ್ಟ್-ಪ್ರೊಡಕ್ಷನ್ ಕೆಲಸದಲ್ಲಿನ ವಿಳಂಬ ಸಂಭಾವ್ಯ ಮುಂದೂಡಿಕೆಗೆ ಕಾರಣ ಎಂದು ವರದಿಗಳು ಸೂಚಿಸಿವೆ. ಅದಾಗ್ಯೂ ಅಧಿಕೃತ ಘೋಷಣೆಯನ್ನು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: 'ಕಲ್ಕಿ 2898 ಎಡಿ' ಬಿಗ್ ಬಿ ಫಸ್ಟ್ ಲುಕ್: ಚಿತ್ರ ನಿರ್ಮಾಪಕರಿಗೆ ಅಮಿತಾಭ್ ಬಚ್ಚನ್ ಕೃತಜ್ಞತೆ
ಜವಾನ್ ಸಕ್ಸಸ್ ಸೆಲೆಬ್ರೇಶನ್ ಸಂದರ್ಭ ಶಾರುಖ್ ಖಾನ್ ಡಂಕಿ ಸಿನಿಮಾ ಬಿಡುಗಡೆ ದಿನಾಂಕವನ್ನು ಖಚಿತಪಡಿಸಿದರು. 2023ರ ಡಿಸೆಂಬರ್ 22ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ತಿಳಿಸಿದ್ದರು. ಇದೀಗ ಸಿನಿಮಾ ಮುಂದೂಡಿಕೆ ಸಾಧ್ಯತೆ ಬಗ್ಗೆ ವರದಿಗಳು ಸದ್ದು ಮಾಡುತ್ತಿದ್ದು, ಚಿತ್ರತಂಡ ಈ ಬಗ್ಗೆ ಅಧಿಕೃತ ಮಾಹಿತಿ ಕೊಡಬೇಕಿದೆ.