ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ಅಭಿನಯದ 'ಸಲಾರ್' ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ್ದು ನಿಮಗೇ ತಿಳಿದೇ ಇದೆ. ಆದ್ರೀಗ ಬಾಕ್ಸ್ ಆಫೀಸ್ ಅಂಕಿ ಅಂಶದಲ್ಲಿ ಕೊಂಚ ಕುಸಿತ ಕಂಡಿದೆ. ಆ್ಯಕ್ಷನ್ ಪ್ಯಾಕ್ಡ್ ಡ್ರಾಮಾದ ಗಳಿಕೆ ಈ ವಾರದಲ್ಲಿ ಇಳಿಮುಖವಾಗಿದೆ. ಅದಾಗ್ಯೂ ಇಂದು ಮತ್ತು ನಾಳೆ ಸಿನಿಮಾದ ಸಂಪಾದನೆ ಉತ್ತಮವಾಗಿರಲಿದೆ ಎಂದು ಅಂದಾಜಿಸಲಾಗಿದೆ. ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಈವರೆಗೆ 550 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಇಳಿಕೆಯತ್ತ ಗಳಿಕೆ: ಸಿನಿಮಾ ತೆರೆಕಂಡ ಬಳಿಕ ಎರಡನೇ ಶುಕ್ರವಾರ ಗಳಿಕೆಯಲ್ಲಿ ಇಳಿಕೆಯಾಗಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಸಿನಿಮಾದ ಗಳಿಕೆ ಗುರುವಾರದಿಂದ ತೀರಾ ಸಾಧಾರಣವಾಗಿದೆ. ಶಾರುಖ್ ಖಾನ್ ಅಭಿನಯದ ಡಂಕಿ ಸಿನಿಮಾಗಿಂತಲೂ ಸಲಾರ್ ಅತ್ಯುತ್ತಮ ಪ್ರದರ್ಶನ ಕಂಡಿದೆ. ಹುಬ್ಬೇರಿಸುವ ಅಂಕಿ ಅಂಶಗಳೊಂದಿಗೆ ಆರಂಭ ಕಂಡರೂ ಕಳೆದ ಮೂರ್ನಾಲ್ಕು ದಿನದ ಕಲೆಕ್ಷನ್ ತೀರಾ ಸಾಧಾರಣವಾಗಿದೆ.
-
#Salaar WW Box Office
— Manobala Vijayabalan (@ManobalaV) December 30, 2023 " class="align-text-top noRightClick twitterSection" data="
#Prabhas' #SalaarCeaseFire CROSSES ₹5️⃣5️⃣0️⃣ cr gross mark.
Day 1 - ₹ 176.52 cr
Day 2 - ₹… pic.twitter.com/jn6ouF7OeV
">#Salaar WW Box Office
— Manobala Vijayabalan (@ManobalaV) December 30, 2023
#Prabhas' #SalaarCeaseFire CROSSES ₹5️⃣5️⃣0️⃣ cr gross mark.
Day 1 - ₹ 176.52 cr
Day 2 - ₹… pic.twitter.com/jn6ouF7OeV#Salaar WW Box Office
— Manobala Vijayabalan (@ManobalaV) December 30, 2023
#Prabhas' #SalaarCeaseFire CROSSES ₹5️⃣5️⃣0️⃣ cr gross mark.
Day 1 - ₹ 176.52 cr
Day 2 - ₹… pic.twitter.com/jn6ouF7OeV
'ಸಲಾರ್' ಚಿತ್ರಮಂದಿರಗಳಲ್ಲಿ ಈಗಾಗಲೇ ಎಂಟು ದಿನಗಳ ಪ್ರದರ್ಶನ ಕಂಡಿದ್ದು, ಒಂಭತ್ತನೇ ದಿನದ ಸ್ಕ್ರೀನಿಂಗ್ ನಡೆಯುತ್ತಿದೆ. ಎಂಟು ದಿನಗಳಲ್ಲಿ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಒಟ್ಟು 318 ಕೋಟಿ ರೂಪಾಯಿ ಸಂಪಾದಿಸುವಲ್ಲಿ ಯಶ ಕಂಡಿದೆ. ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಸಿನಿಮಾ ತನ್ನ ಎರಡನೇ ಶುಕ್ರವಾರದಂದು 10 ಕೋಟಿ ರೂಪಾಯಿ ಸಂಪಾದಿಸಿದೆ. ಗುರುವಾರದ ಗಳಿಕೆ 12.1 ಕೋಟಿ ರೂ. ಆಗಿದೆ.
ಇದನ್ನೂ ಓದಿ: ಸಾಹಸಸಿಂಹನ 14ನೇ ಪುಣ್ಯಸ್ಮರಣೆ: ವಿಷ್ಣುವರ್ಧನ್ ಸಮಾಧಿಗೆ ಅಭಿಮಾನಿಗಳಿಂದ ನಮನ
ತೆರೆಕಂಡ ಮೊದಲ ದಿನ ಭಾರತದಲ್ಲಿ 90.7 ಕೋಟಿ ರೂ., ಶನಿವಾರ 56.35 ಕೋಟಿ ರೂ. ಮತ್ತು ಭಾನುವಾರ 62.05 ಕೋಟಿ ರೂ. ಮೂಲಕ ಮೊದಲ ವಾರ ಜಾಗತಿಕವಾಗಿ 308 ಕೋಟಿ ರೂ.ನ ವ್ಯವಹಾರ ನಡೆಸಿತ್ತು. ನ್ಯೂ ಇಯರ್ ಸೆಲೆಬ್ರೇಶನ್, ವಾರಾಂತ್ಯ ಹಿನ್ನೆಲೆ ಕಲೆಕ್ಷನ್ ನಂಬರ್ಸ್ ಹೆಚ್ಚಾಗುವ ನಿರೀಕ್ಷೆಗಳಿವೆ. ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಟ್ವೀಟ್ ಮಾಡಿದ್ದು, ಸಿನಿಮಾ ಈವರೆಗೆ 556 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ತಿಳಿಸಿದ್ದಾರೆ. ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಜನಪ್ರಿಯತೆ ಸಿನಿಮಾ ಸಂಪಾದನೆಗೆ ಸಹಾಯ ಮಾಡಿದೆ.
ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ಗೆ ಫ್ಯಾನ್ಸ್ ಫಿದಾ; ಮೊದಲ ದಿನವೇ 'ಕಾಟೇರ' ಭರ್ಜರಿ ಗಳಿಕೆ
ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಸಲಾರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಶ್ರುತಿ ಹಾಸನ್, ಶ್ರೀಯಾ ರೆಡ್ಡಿ, ಟಿನು ಆನಂದ್, ಬಾಬಿ ಸಿಂಹ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಬಾಲ್ಯ ಸ್ನೇಹಿತರ ಸುತ್ತ ಕಥೆ ಸಾಗುತ್ತದೆ. ಚಿತ್ರದ ಮತ್ತೊಂದು ಭಾಗ ಕೂಡ ಮೂಡಿ ಬರಲಿದೆ.