ETV Bharat / entertainment

ಬಾಕ್ಸ್​​ ಆಫೀಸ್​​ ಕೊಳ್ಳೆ ಹೊಡೆಯುವುದೇ 'ಸಲಾರ್'? ಮೊದಲ ದಿನ ₹100 ಕೋಟಿ ನಿರೀಕ್ಷೆ - ಪ್ರಭಾಸ್​ ಸಲಾರ್​ ಸಿನಿಮಾ ಸಂಪಾದನೆ

Prabhas starrer Salaar box office prediction: ಸ್ಯಾಕ್ನಿಲ್ಕ್ ಲೆಕ್ಕಾಚಾರದಂತೆ, ಸಲಾರ್ ಸಿನಿಮಾ ಮೊದಲ ದಿನ ಭಾರತದಲ್ಲಿ ಅಂದಾಜು 100 ಕೋಟಿ ರೂಪಾಯಿ ಸಂಪಾದಿಸಲಿದೆ.

Salaar box office collection day 1 prediction: Prabhas starrer salaar may over Rs 100 cr gross in First day

author img

By ETV Bharat Karnataka Team

Published : Dec 22, 2023, 3:07 PM IST

ಹೈದ್ರಾಬಾದ್​: ನಟ ಪ್ರಭಾಸ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಸಲಾರ್​: ಭಾಗ 1- ಸೀಸ್​ಫೈರ್'​​ ಇಂದು ಬಿಡುಗಡೆಯಾಗಿದೆ. 'ರಾಧೆ-ಶ್ಯಾಮ್'​, 'ಆದಿಪುರುಷ್'​​ ಸಿನಿಮಾಗಳ ಸೋಲಿನಿಂದ ನಿರಾಶೆ ಅನುಭವಿಸಿದ್ದ ಪ್ರಭಾಸ್​ ಇದೀಗ ಆ್ಯಕ್ಷನ್​ ಸಿನಿಮಾ ಮೂಲಕ ಪ್ರೇಕ್ಷಕರೆದುರು ಮರಳಿದ್ದಾರೆ. ಪ್ರಶಾಂತ್​ ನೀಲ್​ ನಿರ್ದೇಶನದ ಈ ಚಿತ್ರ ಅದ್ಧೂರಿಯಾಗಿ ತೆರೆಕಂಡಿದೆ. ಸ್ಯಾಕ್ನಿಲ್ಕ್ ಲೆಕ್ಕಾಚಾರದಂತೆ, ಮೊದಲ ದಿನ ಭಾರತದಲ್ಲಿ ಸುಮಾರು 100 ಕೋಟಿ ರೂಪಾಯಿ ಸಂಪಾದಿಸುವ ನಿರೀಕ್ಷೆ ಇದೆ.

  • " class="align-text-top noRightClick twitterSection" data="">

ಎರಡು ವರ್ಷ ಸಮಯ ತೆಗೆದುಕೊಂಡು ನಿರ್ಮಿಸಲಾಗಿದ್ದ 'ಸಲಾರ್' ಬಗ್ಗೆ​ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಹೊಂಬಾಳೆ ಬಂಡವಾಳ ಹೂಡಿದೆ. ಇತ್ತೀಚಿನ ವರ್ಷದಲ್ಲಿ ಅತ್ಯಂತ ಹೆಚ್ಚು ಬಾಕ್ಸ್​​ ಆಫೀಸ್​ ಆನ್​ಲೈನ್​ ಬುಕ್ಕಿಂಗ್​ ಕಂಡ ಚಿತ್ರಗಳಲ್ಲಿ ಸಲಾರ್​ ಪ್ರಮುಖವಾಗಿದ್ದು, ಭಾರತದಲ್ಲಿ 42 ಕೋಟಿ ರೂ ಆನ್​ಲೈನ್​ ಬುಕ್ಕಿಂಗ್​ ಮಾಡಿಕೊಂಡಿದೆ.

ಆನ್​ಲೈನ್​ ಮತ್ತು ಆಫ್​​ಲೈನ್​ ಟಿಕೆಟ್​ ಮಾರಾಟವನ್ನು ಗಣನೆಗೆ ತೆಗೆದುಕೊಂಡರೆ ಎಲ್ಲಾ ಭಾಷೆಗಳಲ್ಲಿ 'ಸಲಾರ್'​ ಬಿಡುಗಡೆಯ ದಿನ 100 ಕೋಟಿ ರೂ ಸಂಪಾದಿಸಲಿದೆ. ಇದರಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಕೊಡುಗೆ ಹೆಚ್ಚು. ಈ ಎರಡೂ ರಾಜ್ಯಗಳಿಂದ 70 ಕೋಟಿ ರೂ ಹರಿದು ಬರಲಿದೆ. ಸಿನಿಮಾದ ಒಟ್ಟು ಯಶಸ್ಸಿನಲ್ಲಿ ಹಿಂದಿ ಚಿತ್ರ ಮಾರುಕಟ್ಟೆ ಕೂಡ ನಿರ್ಣಾಯಕ ಪಾತ್ರವಹಿಸಲಿದೆ. ಬುಕ್ಕಿಂಗ್​ ಲೆಕ್ಕಾಚಾರದಂತೆ ಹಿಂದಿಯಿಂದ 20 ಕೋಟಿ ರೂ ಸಿಗುವ ನಿರೀಕ್ಷೆ ಇದೆ.

ಶಾರುಖ್​ ಖಾನ್​ ಅಭಿನಯದ 'ಡಂಕಿ' ಮತ್ತು ಮೋಹನ್​ಲಾಲ್​ ಅವರ 'ನೆರು' ಸಿನಿಮಾಗಳ ಸ್ಪರ್ಧೆಯ ನಡುವೆ ಸಲಾರ್​ ದೊಡ್ಡ ಯಶಸ್ಸು ಪಡೆದಿದೆ. ಚಿತ್ರ ಮಾಸ್​-ಫ್ರೆಂಡ್ಲಿ ಆಗಿದೆ. ಕರ್ನಾಟಕದಲ್ಲಿ ಮೊದಲ ದಿನ 12 ಕೋಟಿ ರೂ, ಕೇರಳದಲ್ಲಿ 4 ಕೋಟಿ ರೂ.ಗೂ ಹೆಚ್ಚು ಮತ್ತು ತಮಿಳುನಾಡಿನಲ್ಲಿ 3 ಕೋಟಿ ಗಳಿಸುವ ಲೆಕ್ಕಾಚಾರ ಸಿನಿಮಾ ಪಂಡಿತರದ್ದು.

  • Highest Opening Day Advance Booking Gross Belongs To #Salaar Now (2023 India)💥💥💥

    Will share all data in the morning.☑️

    — Sacnilk Entertainment (@SacnilkEntmt) December 21, 2023 " class="align-text-top noRightClick twitterSection" data=" ">

ಮತ್ತೊಂದು ಆಸಕ್ತಿದಾಯಕ ಸಂಗತಿಯೆಂದರೆ 2018ರಲ್ಲಿ ಹೊಂಬಾಳೆ ಸಿನಿಮಾ 'ಕೆಜಿಎಫ್​: ಚಾಪ್ಟರ್​ 1' ಬಿಡುಗಡೆಗೊಳಿಸಿದಾಗ ಶಾರುಖ್​​ಖಾನ್ ಸಿನಿಮಾ ಜೀರೋ ಪೈಪೋಟಿ ನೀಡಿತ್ತು. ಇದೀಗ ಮತ್ತೊಮ್ಮೆ 'ಡುಂಕಿ', 'ಸಲಾರ್'​ ಸ್ಪರ್ಧೆ ನಡೆಯುತ್ತಿದೆ.

ಇದನ್ನೂ ಓದಿ: ಪಠಾಣ್​, ಜವಾನ್​​, ಲಿಯೋ.. 2023ರ ಹಿಟ್​ ಸಿನಿಮಾಗಳ ದಾಖಲೆ ಪುಡಿಗಟ್ಟಲಿದೆ 'ಸಲಾರ್​'!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.