ETV Bharat / entertainment

ಭರ್ಜರಿ ಅಡ್ವಾನ್ಸ್ ಟಿಕೆಟ್ಸ್ ಬುಕಿಂಗ್: ಮೊದಲ ದಿನವೇ ಸಲಾರ್ ₹ 100 ಕೋಟಿ ಗಳಿಸುವ ನಿರೀಕ್ಷೆ - prashant neel

ಬಬಹುನಿರೀಕ್ಷಿತ ಸಲಾರ್​ ಸಿನಿಮಾದ ಅಡ್ವಾನ್ಸ್ ಟಿಕೆಟ್ಸ್ ವ್ಯವಹಾರ ಉತ್ತಮವಾಗಿ ನಡೆಯುತ್ತಿದೆ.

Salaar advance ticket booking
ಸಲಾರ್ ಅಡ್ವಾನ್ಸ್ ಟಿಕೆಟ್ಸ್ ಬುಕಿಂಗ್
author img

By ETV Bharat Karnataka Team

Published : Dec 19, 2023, 9:04 AM IST

Updated : Dec 19, 2023, 9:14 AM IST

ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್​​​ ಕಾಂಬಿನೇಶನ್​ನ ಬಹುನಿರೀಕ್ಷಿತ ಚಿತ್ರ 'ಸಲಾರ್'. ಡಿಸೆಂಬರ್ 22ರಂದು ಸಲಾರ್​ ತೆರೆಗಪ್ಪಳಿಸಲಿದೆ. ರಿಲೀಸ್​ಗೆ ಇನ್ನೆರಡೇ ದಿನ ಬಾಕಿ ಉಳಿದಿದ್ದು, ಸಿನಿಮಾ ಸುತ್ತಲಿನ ನಿರೀಕ್ಷೆ ಗರಿಗೆದರಿದೆ. ಬಹುನಿರೀಕ್ಷಿತ ಚಿತ್ರ ಬಿಡುಗಡೆಗೂ ಮುನ್ನವೇ ದಾಖಲೆ ಬರೆಯುತ್ತಿದೆ.

ಸಿನಿಮಾದ ಮುಂಗಡ ಬುಕ್ಕಿಂಗ್‌ ಪ್ರಕ್ರಿಯೆ ಜೋರಾಗೇ ನಡೆಯುತ್ತಿದೆ. ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ಕೆಜಿಎಫ್​ ಖ್ಯಾತಿಯ ಪ್ರಶಾಂತ್​ ನೀಲ್​ ಸೇರಿ ಸಿನಿಮಾ ಮಾಡಿರೋ ಹಿನ್ನೆಲೆ 'ಸಲಾರ್' ಟಿಕೆಟ್​ಗಳು ಶರವೇಗದಲ್ಲಿ ಮಾರಾಟವಾಗುತ್ತಿದೆ. ಹೊರದೇಶಗಳಲ್ಲಿ ಕೂಡ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅದಾಗ್ಯೂ, ಅನೇಕ ದೇಶಗಳಲ್ಲಿ ಇನ್ನಷ್ಟೇ ಅಡ್ವಾನ್ಸ್ ಟಿಕೆಟ್ ಪ್ರೊಸೆಸ್ ಓಪನ್​ ಆಗಬೇಕಷ್ಟೇ​​. ಸದ್ಯ ವಿಶ್ವದಾದ್ಯಂತ ಮುಂಗಡ ಬುಕ್ಕಿಂಗ್​ನಲ್ಲಿ 'ಸಲಾರ್' 21 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.

ಉತ್ತರ ರಾಜ್ಯಗಳಲ್ಲಿ 'ಸಲಾರ್' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಭಾನುವಾರ (ಡಿಸೆಂಬರ್ 17) ಆರಂಭವಾಗಿದೆ. ಇಲ್ಲಿ ಸಲಾರ್‌ ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಟಿಕೆಟ್​ಗಳು ಖರೀದಿಯಾಗಿವೆ. ಹಿಂದಿಯಲ್ಲಿ 15 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ. ಇತರೆ ಭಾಷೆಗಳ 10,000ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಪ್ರೇಕ್ಷಕರು ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಪಿವಿಆರ್ ಮತ್ತು ಐನಾಕ್ಸ್ ಸ್ಕ್ರೀನ್​ಗಳಲ್ಲಿ ಸುಮಾರು 25 ಸಾವಿರ ಅಡ್ವಾನ್ಸ್ ಟಿಕೆಟ್​ಗಳು ಬುಕ್ ಆಗಿವೆ. ಈ ಮೂಲಕ 5 ಕೋಟಿ ರೂ.ಗೂ ಹೆಚ್ಚಿನ ವ್ಯವಹಾರ ನಡೆದಂತಿದೆ. ಆದರೆ, ಮೊದಲ ದಿನದ ಮುಂಗಡ ಬುಕಿಂಗ್​ನ ಕಲೆಕ್ಷನ್ 4.29 ಕೋಟಿ ರೂಪಾಯಿ ಆಗಿದೆ ಎಂದು ವರದಿಯಾಗಿದೆ.

ಸಾಗರೋತ್ತರ ಪ್ರದೇಶದಲ್ಲಿನ 'ಸಲಾರ್' ಕಲೆಕ್ಷನ್​: 'ಸಲಾರ್' ವಿದೇಶದಲ್ಲೂ ಸಖತ್​ ಸದ್ದು ಮಾಡುತ್ತಿದೆ. ಅಮೆರಿಕ ಮತ್ತು ಕೆನಡಾದಲ್ಲಿ 1.2 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿದೆ. ಯುಎಇ ಮತ್ತು ಮಧ್ಯಪ್ರಾಚ್ಯದಲ್ಲಿ 1 ಲಕ್ಷ ಡಾಲರ್ ಮತ್ತು ಯುಕೆಯಲ್ಲಿ 2 ಲಕ್ಷ ಪೌಂಡ್‌ ನಷ್ಟು ವ್ಯವಹಾರ ನಡೆಸಿದೆ. ಈ ಮೂಲಕ ವಿಶ್ವದಾದ್ಯಂತ ಮುಂಗಡ ಟಿಕೆಟ್ ಬುಕಿಂಗ್​ ಪ್ರಕ್ರಿಯೆಯಲ್ಲಿ 'ಸಲಾರ್' ಒಟ್ಟು 21 ಕೋಟಿ ರೂ. ವ್ಯವಹಾರ ನಡೆಸಿದೆ. ಸಿನಿಮಾ ಮೊದಲ ದಿನವೇ 100 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಲಿದೆ ಎಂದು ಸಿನಿಮಾ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಕೆಂಪಂಗಿಯಲ್ಲಿ ಕಿಲ್ಲರ್ ಲುಕ್ ಕೊಟ್ಟ 'ಅನಿಮಲ್​' ನಟಿ; ಹೆಚ್ಚಿತು ತೃಪ್ತಿ ಡಿಮ್ರಿ ಪಾಪ್ಯುಲಾರಿಟಿ

ಕೆಜಿಎಫ್ ಮತ್ತು ಕಾಂತಾರದಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್​​ ಸಲಾರ್ ಸಿನಿಮಾವನ್ನು ನಿರ್ಮಿಸಿದೆ. ಪ್ರಭಾಸ್ ಜೊತೆಗೆ ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಮೀನಾಕ್ಷಿ ಚೌಧರಿ, ಈಶ್ವರಿ ರಾವ್, ಶರಣ್ ಶಕ್ತಿ ಸೇರಿದಂತೆ ಮುಂತಾದವರು ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ನಿರ್ದೇಶಕ ರೋಹಿತ್ ಜುಗರಾಜ್​ಗೆ ಜೀವ ಬೆದರಿಕೆ

Last Updated : Dec 19, 2023, 9:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.