ETV Bharat / entertainment

'ರುಧೀರ ಕಣಿವೆ' ಚಿತ್ರದ ಟೀಸರ್, ಹಾಡುಗಳು ರಿಲೀಸ್ - ETv Bharat kannada news

'ರುಧೀರ ಕಣಿವೆ' ಚಿತ್ರದ ಟೀಸರ್ ಹಾಗೂ ಹಾಡುಗಳು ಬಿಡುಗಡೆಯಾಗಿವೆ.

Rudhira Kanive' movie teaser and songs release
'ರುಧೀರ ಕಣಿವೆ 'ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆ
author img

By

Published : Nov 21, 2022, 10:58 AM IST

ಸ್ಯಾಂಡಲ್ ವುಡ್‌ನಲ್ಲಿ ಕಮರ್ಷಿಯಲ್ ಸಿನಿಮಾಗಳ ಮಧ್ಯೆ ಹಾರರ್ ಕಥೆಯನ್ನು ಆಧರಿಸಿರೋ ಚಿತ್ರಗಳು ಸದ್ದು ಮಾಡುತ್ತಿವೆ. ಇದೀಗ ರುಧೀರ ಕಣಿವೆ ಎಂಬ ಟೈಟಲ್ ಇಟ್ಟುಕೊಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಚಿತ್ರವೊಂದು ಸಜ್ಜಾಗುತ್ತಿದೆ. ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಪುನರ್ಜನ್ಮದ ಪ್ರೇಮಕಥೆ ಒಳಗೊಂಡ ಈ ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಹಾಗೂ ನಟ ಧರ್ಮಕೀರ್ತಿ ರಾಜ್ ಟೀಸರ್‌, ಹಾಡುಗಳನ್ನು ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ಚಿತ್ರದ ಹಾಡುಗಳು ಚೆನ್ನಾಗಿ ಮೂಡಿಬಂದಿವೆ. ಛಾಯಾಗ್ರಹಣ, ಮ್ಯೂಸಿಕ್ ಕೂಡ ಅದ್ಭುತವಾಗಿದ್ದು ಚಿತ್ರತಂಡಕ್ಕೆ ಒಳ್ಳೆಯಾದಗಲಿ ಎಂದರು. ನಟ ಧರ್ಮ ಕೀರ್ತಿರಾಜ್, ಟೀಸರ್‌ನಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆಯುವ ಕಂಟೆಂಟ್ ಇದೆ ಎಂದು ಹೇಳಿದರು.
ನಾಯಕನಾಗಿ ಯುವ ಪ್ರತಿಭೆ ಕಾರ್ತಿಕ್ ಅಭಿನಯಿಸಿದ್ದಾರೆ. ಇವರಿಗೆ ನಾಯಕಿಯರಾಗಿ ದಿಶಾ ಪೂವಯ್ಯ ಹಾಗೂ ಅಮೃತ ಬಣ್ಣ ಹಚ್ಚಿದ್ದಾರೆ.

ಸಮರ್ಥ ಎಂ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಈ ಮೊದಲು ಇವರು 'ನವ ಇತಿಹಾಸ' ಸಿನಿಮಾ ನಿರ್ದೇಶಿಸಿದ್ದು ಇದು 2ನೇ ಪ್ರಯತ್ನವಾಗಿದೆ. ಪ್ರಾರಂಭದಿಂದಲೂ ಚಿತ್ರಕ್ಕೆ ಅಡೆತಡೆಗಳು ಬಂದಿದ್ದರೂ ನಿರ್ಮಾಪಕರು ಹಾಗೂ ಕಲಾವಿದರು ಬೆಂಬಲಿಸಿದ್ದಾರೆ ಎಂದು ನಿರ್ದೇಶಕರು ಹೇಳಿದರು. ಚಿತ್ರದಲ್ಲಿ ನಾಲ್ಕು ಫೈಟ್, ನಾಲ್ಕು ಹಾಡುಗಳಿದ್ದು, ಬೆಂಗಳೂರು, ರಾಮನಗರ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ ಎಂದರು.

ನಿರ್ಮಾಪಕ ವಿಜಯ್ ಕುಮಾರ್ ಮಾತನಾಡಿ, ನಿರ್ದೇಶಕರು ಕಥೆ ಹೇಳಿದಾಗ ಸಿನಿಮಾ ಮಾಡುವ ಆಸೆ ಬಂತು. ನಾಯಕ ಕಾರ್ತಿಕ್ ನಮ್ಮ ಅಣ್ಣನ ಮಗ ಎಂದರು. ಶ್ರೀ ಲಕ್ಷ್ಮಿ ನರಸಿಂಹ ಮೂವೀಸ್ ಬ್ಯಾನರ್ ನಲ್ಲಿ ಮೊದಲಬಾರಿಗೆ ಸಿನಿಮಾ ನಿರ್ಮಾಣ ಮಾಡಲಾಗಿದ್ದು, ಮೊದಲು ಕನ್ನಡದಲ್ಲಿ ರಿಲೀಸ್ ಮಾಡಿ, ನಂತರದ ದಿನಗಳಲ್ಲಿ ಬೇರೆ ಭಾಷೆಯಲ್ಲಿ ರಿಲೀಸ್ ಮಾಡುವ ಯೋಜನೆ ಇದೆ ಎಂದು ಹೇಳಿದರು.

ಇದನ್ನೂ ಓದಿ : ಬಾಂಡ್ ರವಿ ಸಿನಿಮಾದ ಮೊದಲ ಹಾಡು ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.