ವಿಶ್ವ ಸಿನಿ ಕ್ಷೇತ್ರದಲ್ಲೀಗ ಆರ್ಆರ್ಆರ್ ಸಿನಿಮಾದ್ದೇ ಚರ್ಚೆ. ನಮ್ಮ ಭಾರತೀಯ ಚಿತ್ರ ಸಾಗರದಾಚೆಗೂ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ದೂರದ ಅಮೆರಿಕದ ಥಿಯೇಟರ್ ಪ್ರೇಕ್ಷಕರಿಂದ ತುಂಬಿದ್ದು, ಆರ್ಆರ್ಆರ್ ತಂಡ ಹರ್ಷ ವ್ಯಕ್ತಪಡಿಸಿದೆ.
ಲಾಸ್ ಏಂಜಲೀಸ್‌ನ 'ದಿ ಥಿಯೇಟರ್ ಅಟ್ ಏಸ್ ಹೋಟೆಲ್'ನಲ್ಲಿ (the theatre at ace hotel) ಬುಧವಾರ ಆರ್ಆರ್ಆರ್ ಸಿನಿಮಾ ಪ್ರದರ್ಶನಗೊಂಡಿದೆ. ಬುಧವಾರ ಸಂಜೆ 7.30ಕ್ಕೆ (ಲಾಸ್ ಏಂಜಲೀಸ್ ಸಮಯ) ಆರ್ಆರ್ಆರ್ ಪ್ರದರ್ಶನ (ಭಾರತದ ಕಾಲಮಾನದ ಪ್ರಕಾರ ಸಂಜೆ 6 ಗಂಟೆಗೆ) ಇತ್ತು. 'ದಿ ಥಿಯೇಟರ್ ಅಟ್ ಏಸ್ ಹೋಟೆಲ್' 1,647 ಆಸನ ಸಾಮರ್ಥ್ಯವುಳ್ಳ ಫಿಲ್ಮ್ ಥಿಯೇಟರ್ ಆಗಿದ್ದು, ಕೆಲವೇ ಹೊತ್ತಿನಲ್ಲಿ ಟಿಕೆಟ್ಗಳು ಸೋಲ್ಡ್ ಔಟ್ ಆಗಿದ್ದವು.
- " class="align-text-top noRightClick twitterSection" data="
">
ಭಾರತದ ಖ್ಯಾತ ನಿರ್ದೇಶಕ, ಸೂಪರ್ ಹಿಟ್ ಬಾಹುಬಲಿ ಖ್ಯಾತಿಯ ಎಸ್‌ಎಸ್ ರಾಜಮೌಳಿ ಆ್ಯಕ್ಷನ್ ಕಟ್ ಹೇಳಿರುವ ಈ ಆರ್ಆರ್ಆರ್ ಚಿತ್ರ ಕಳೆದ ವರ್ಷ ಮಾರ್ಚ್ 25ರಂದು ಬಿಡುಗಡೆ ಆಗಿ ಭರ್ಜರಿ ಯಶಸ್ಸು ಕಂಡಿತು. ಈ ಮಾರ್ಚ್ 25ಕ್ಕೆ ಒಂದು ವರ್ಷ ಪೂರೈಸಲಿರುವ ಚಿತ್ರ 'ದಿ ಥಿಯೇಟರ್ ಅಟ್ ಏಸ್ ಹೋಟೆಲ್'ನಲ್ಲಿ ಪ್ರದರ್ಶನ ಕಂಡು ಪ್ರೇಕ್ಷಕರ ಸಿಳ್ಳೆ, ಚಪ್ಪಾಳೆಗೆ ಸಾಕ್ಷಿ ಆಯಿತು. ಆರ್ಆರ್ಆರ್ ತೆರೆ ಕಂಡು 342ನೇ ದಿನವೂ ಲಾಸ್ ಏಂಜಲೀಸ್ನಲ್ಲಿ ಚಿತ್ರಕ್ಕೆ ಉತ್ತಮ ಬೆಂಬಲ ಸಿಕ್ಕಿದ್ದು, ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹರ್ಷ ವ್ಯಕ್ತಪಡಿಸಿದೆ.
- " class="align-text-top noRightClick twitterSection" data="
">
-
A 1647-seater venue is sold out in Los Angeles, USA on the 342nd day of #RRRMovie release. 🙏🏻🙏🏻🙏🏻
— RRR Movie (@RRRMovie) March 2, 2023 " class="align-text-top noRightClick twitterSection" data="
It's heartwarming to see the audience waiting in a long queue to get inside. ❤️❤️ @BeyondFest @am_cinematheque @VarianceFilms @sarigamacinemas pic.twitter.com/dBlw4eFaXA
">A 1647-seater venue is sold out in Los Angeles, USA on the 342nd day of #RRRMovie release. 🙏🏻🙏🏻🙏🏻
— RRR Movie (@RRRMovie) March 2, 2023
It's heartwarming to see the audience waiting in a long queue to get inside. ❤️❤️ @BeyondFest @am_cinematheque @VarianceFilms @sarigamacinemas pic.twitter.com/dBlw4eFaXAA 1647-seater venue is sold out in Los Angeles, USA on the 342nd day of #RRRMovie release. 🙏🏻🙏🏻🙏🏻
— RRR Movie (@RRRMovie) March 2, 2023
It's heartwarming to see the audience waiting in a long queue to get inside. ❤️❤️ @BeyondFest @am_cinematheque @VarianceFilms @sarigamacinemas pic.twitter.com/dBlw4eFaXA
ಸೋಶಿಯಲ್ ಮೀಡಿಯಾದಲ್ಲಿ ಲಾಸ್ ಏಂಜಲೀಸ್‌ನ ಥಿಯೇಟರ್ ಫೋಟೋ, ವಿಡಿಯೋ ಹಂಚಿಕೊಂಡಿರುವ ಆರ್ಆರ್ಆರ್, ಸಿನಿಮಾ ಬಿಡುಗಡೆ ಆಗಿ 342ನೇ ದಿನವೂ ಸರತಿ ಸಾಲಿನಲ್ಲಿ ಪ್ರೇಕ್ಷಕರು ನಿಲ್ಲುವುದನ್ನು ನೋಡಲು ನಿಜಕ್ಕೂ ಸಂತೋಷವಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಇಂದು ಅಮೆರಿಕದ ಚಿತ್ರಮಂದಿರದಾದ್ಯಂತ ಆರ್ಆರ್ಆರ್ ರೀ ರಿಲೀಸ್ ಆಗಿದೆ.
ಇದನ್ನೂ ಓದಿ: ಸಾಗರದಾಚೆ ಭಾರತೀಯ ಸಿನಿಮಾ ಸದ್ದು: ಅಮೆರಿಕದ ಥಿಯೇಟರ್ನಲ್ಲಿಂದು ಆರ್ಆರ್ಆರ್ ಶೋ!
ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಪಾತ್ರದಲ್ಲಿ ರಾಮ್ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅಬ್ಬರಿಸಿದ್ದು, ಆ್ಯಕ್ಷನ್ ಸೀನ್ಗಳು ಮೈನವಿರೇಳಿಸುವಂತಿವೆ. ಆಲಿಯಾ ಭಟ್, ಅಜಯ್ ದೇವಗನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಕಥೆ ಹೇಳಿರುವ ಆರ್ಆರ್ಆರ್ ಸಿನಿಮಾ 1,200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
-
Soaking in the LA vibe!
— Ram Charan (@AlwaysRamCharan) March 1, 2023 " class="align-text-top noRightClick twitterSection" data="
Thank you @ktlaENT for having me. @RRRMovie back in theatres all across the United States starting March 3, catch us on the big screens once again pic.twitter.com/rlhlcDXwte
">Soaking in the LA vibe!
— Ram Charan (@AlwaysRamCharan) March 1, 2023
Thank you @ktlaENT for having me. @RRRMovie back in theatres all across the United States starting March 3, catch us on the big screens once again pic.twitter.com/rlhlcDXwteSoaking in the LA vibe!
— Ram Charan (@AlwaysRamCharan) March 1, 2023
Thank you @ktlaENT for having me. @RRRMovie back in theatres all across the United States starting March 3, catch us on the big screens once again pic.twitter.com/rlhlcDXwte
ಇದನ್ನೂ ಓದಿ: ಪೂಜಾ ಹೆಗ್ಡೆಗೆ 'ಬಿಲ್ಲಿ ಬಿಲ್ಲಿ' ಎನ್ನುತ್ತಿರುವ ಬಾಲಿವುಡ್ ಬ್ಯಾಡ್ ಬಾಯ್ ಸಲ್ಲು ಮಿಯಾ
ಮಾರ್ಚ್ 12ರಂದು ಅಮೆರಿಕದಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. 95ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ (ಆಸ್ಕರ್ ಪ್ರಶಸ್ತಿ) ಅತ್ಯುತ್ತಮ ಗೀತೆ ವಿಭಾಗದಲ್ಲಿ ನಾಟು ನಾಟು ಹಾಡು ನಾಮಿನೇಟ್ ಆಗಿದೆ. ಆಸ್ಕರ್ ಸಮಾರಂಭದಲ್ಲಿ ನಾಟು ನಾಟು ಹಾಡಿನ ಲೈವ್ ಪ್ರದರ್ಶನ ಇರುತ್ತದೆ. ಕಾಲಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಆಸ್ಕರ್ ವೇದಿಕೆಯಲ್ಲಿ ನಾಟು ನಾಟು ಹಾಡು ಹಾಡಲಿದ್ದಾರೆ.