ETV Bharat / entertainment

ಕೆಲವೇ ದಿನಗಳಲ್ಲಿ ಓಟಿಟಿ ವೇದಿಕೆಯಲ್ಲಿ 'ಆರ್​ಆರ್​ಆರ್​'

author img

By

Published : May 12, 2022, 4:52 PM IST

ಎಸ್​.ಎಸ್​. ರಾಜಮೌಳಿ ನಿರ್ದೇಶನದ ಬ್ಲಾಕ್‌ಬಸ್ಟರ್ ಆರ್​ಆರ್​ಆರ್​ ಚಿತ್ರ ಮೇ 20ರಂದು ಝೀ 5 ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.

rrr box office earning
ಕೆಲವೇ ದಿನಗಳಲ್ಲಿ ಓಟಿಟಿ ವೇದಿಕೆಯಲ್ಲಿ 'ಆರ್​ಆರ್​ಆರ್​'

ಜೂನಿಯರ್ ಎನ್​​ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಬೆಳ್ಳಿ ಪರದೆಯ ಬ್ಲಾಕ್​ಬಸ್ಟರ್​ 'ಆರ್​ಆರ್​ಆರ್'​ ಸಿನಿಮಾ ಮೇ 20 ರಂದು ಝೀ5 ಓಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ. ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಆರ್​ಆರ್​ಆರ್' ಸಿನಿಮಾ ಬಹುಬಾಷೆಯಲ್ಲಿ ತೆರೆಕಂಡು ದೊಡ್ಡ ಯಶಸ್ಸು ಸಾಧಿಸಿತ್ತು. ಓಟಿಟಿ ವೇದಿಕೆಯ ಮೂಲಕ ಇನ್ನಷ್ಟು ಪ್ರೇಕ್ಷಕರಿಗೆ ಮನರಂಜನೆಗೆ ಮುಂದಾಗಿದೆ.

ಓಟಿಟಿಯಲ್ಲಿ ಚಿತ್ರವು ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ವೇದಿಕೆಯಲ್ಲಿ ಲಭ್ಯವಿರುತ್ತದೆ, ಹಿಂದಿ ಆವೃತ್ತಿಯು ಶೀಘ್ರದಲ್ಲೇ ಬರಲಿದೆ. ಈ ಸಿನಿಮಾದಲ್ಲಿ ಆಲಿಯಾ ಭಟ್, ಅಜಯ್ ದೇವಗನ್, ಒಲಿವಿಯಾ ಮೋರಿಸ್, ಶ್ರಿಯಾ ಸರನ್ ಮತ್ತು ಇತರರು ನಟಿಸಿದ್ದಾರೆ. ಡಿವಿವಿ ದಾನಯ್ಯ ಅವರು ದೊಡ್ಡ ಪ್ರಮಾಣದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಎಂ ಎಂ ಕಿರವಾಣಿ ಅವರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ಇದನ್ನೂ ಓದಿ: ಜಾಲತಾಣದಲ್ಲಿ ಧೂಳೆಬ್ಬಿಸುತ್ತಿರುವ ಪ್ರಸಿದ್ಧ ನಟಿ ಮೇಗನ್ ಫಾಕ್ಸ್ ಹಾಟ್​​ ಫೋಟೋಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.