ETV Bharat / entertainment

9 ದಿನಗಳಲ್ಲಿ ₹90.58 ಕೋಟಿ ಬಾಚಿದ RARKPK​: ಇಂದು ₹100 ಕೋಟಿ ಕ್ಲಬ್​ ಸೇರುತ್ತಾ? - ಈಟಿವಿ ಭಾರತ ಕನ್ನಡ

Rocky Aur Rani Kii Prem Kahaani: 'ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ' ಸಿನಿಮಾ ಒಂಬತ್ತನೇ ದಿನ 11.50 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

Rocky Aur Rani Kii Prem Kahaani
ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ
author img

By

Published : Aug 6, 2023, 4:01 PM IST

'ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ' ಸಿನಿಮಾ ಥಿಯೇಟರ್​ಗಳಲ್ಲಿ ಧೂಳೆಬ್ಬಿಸುತ್ತಿದೆ. ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ ಕರಣ್​ ಜೋಹರ್​ ನಿರ್ದೇಶಿಸಿ, ನಿರ್ಮಾಣ ಮಾಡಿರುವ ಚಿತ್ರ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ರಣ್​ವೀರ್​ ಸಿಂಗ್​ ಮತ್ತು ಆಲಿಯಾ ಭಟ್ ಮಾಡ್ರನ್​​ ಫ್ಯಾಮಿಲಿ​ ಲವ್​ ಸ್ಟೋರಿಗೆ ಉತ್ತಮ ರೆಸ್ಪಾನ್ಸ್​ ಸಿಕ್ಕಿದೆ. ಚಿತ್ರ ಬಿಡುಗಡೆಯಾದ ಎರಡನೇ ವಾರವೂ ಕಲೆಕ್ಷನ್​ ವಿಚಾರದಲ್ಲಿ ವೇಗದ ಓಟ ಮುಂದುವರೆಸಿದೆ. ಚಿತ್ರ ಜುಲೈ 28ರಂದು ತೆರೆಗೆ ಅಪ್ಪಳಿಸಿತ್ತು.

9ನೇ ದಿನದ ಕಲೆಕ್ಷನ್​: 'ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ' ಆರಂಭದ ದಿನದಿಂದಲೂ ಉತ್ತಮ ಕಲೆಕ್ಷನ್​ ಮಾಡುತ್ತಿ ಬಂದಿದೆ. ಎರಡನೇ ಶನಿವಾರದಂದೂ ಉತ್ತಮ ಗಳಿಕೆ ಕಂಡಿದೆ. ಇಂದು ಕೂಡ ಅತೀ ಹೆಚ್ಚು ಜನರು ಥಿಯೇಟರ್​ನಲ್ಲಿ ಸಿನಿಮಾ ವೀಕ್ಷಿಸುವ ನಿರೀಕ್ಷೆ ಇದ್ದು, ಭಾರತದಲ್ಲಿ 100 ಕೋಟಿ ರೂ ಕ್ಲಬ್​ ಸೇರುವ ಸಾಧ್ಯತೆ ಇದೆ. ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಚಿತ್ರವು 9ನೇ ದಿನ (ಶನಿವಾರದಂದು) 11.50 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

ಈ ಸಿನಿಮಾ ಮೊದಲ ದಿನ 11.1 ಕೋಟಿ ರೂ., ಎರಡನೇ ದಿನ 16.5 ಕೋಟಿ ರೂ., ಮೂರನೇ ದಿನ 19 ಕೋಟಿ ರೂ., ನಾಲ್ಕನೇ ದಿನ 7.50 ಕೋಟಿ ರೂ., ಐದನೇ ದಿನ 7.25 ಕೋಟಿ ರೂ., ಆರನೇ ದಿನ 6.90 ಕೋಟಿ ರೂ., ಏಳನೇ ದಿನ 6.25 ಕೋಟಿ ರೂ. ಮತ್ತು ಎಂಟನೇ ದಿನ 6.90 ಕೋಟಿ ರೂ. ಗಳಿಸಿತ್ತು. ಈ ಮೂಲಕ ಚಿತ್ರವು ಒಟ್ಟು 90.58 ಕೋಟಿ ರೂ. ಕಲೆಕ್ಷನ್​ ಮಾಡಿದೆ. ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರ ಈಗಾಗಲೇ 100 ಕೋಟಿ ಕ್ಲಬ್​ ಸೇರಿದೆ. ಇದೀಗ ಭಾರತದಲ್ಲೂ 100 ಕೋಟಿ ಕ್ಲಬ್​ ಸೇರುವ ಸಾಧ್ಯತೆ ಇದೆ.

ವರದಿಗಳ ಪ್ರಕಾರ, 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ 178 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧಗೊಂಡಿದೆ. 2300 ಪರದೆಗಳಲ್ಲಿ (2000 ಭಾರತ ಮತ್ತು 300 ವಿದೇಶ) ಶುಕ್ರವಾರ ಬಿಡುಗಡೆಯಾಗಿತ್ತು. ಇನ್ನೂ ಈ ಸಿನಿಮಾಗೆ ಕಾಂಪಿಟೇಶನ್​ ಕೊಡಲು ಯಾವುದೇ ಹಿಂದಿ ಸಿನಿಮಾಗಳು ಸದ್ಯ ಬಿಡುಗಡೆ ಕಂಡಿಲ್ಲ. ಆದರೆ ಹಾಲಿವುಡ್​ ಸಿನಿಮಾಗಳಾದ ಓಪನ್​ಹೈಮರ್​ ಮತ್ತು ಬಾರ್ಬಿಯೊಂದಿಗೆ ಜನರನ್ನು ಸೆಳೆಯಲು ಕರಣ್​ ಜೋಹರ್​ ಚಿತ್ರ ಹೆಚ್ಚು ಪ್ರಯತ್ನಿಸುತ್ತಿದೆ.

ಈ ಚಿತ್ರದಲ್ಲಿ ರಣ್​ವೀರ್​ ಸಿಂಗ್​ ಮತ್ತು ಆಲಿಯಾ ಭಟ್​ ಮಾತ್ರವಲ್ಲದೇ, ಧರ್ಮೇಂದ್ರ, ಜಯಾ ಬಚ್ಚನ್​, ಶಬಾನಾ ಅಜ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾರಾ ಅಲಿ ಖಾನ್​ ಮತ್ತು ಅನನ್ಯಾ ಪಾಂಡೆ ವಿಶೇಷ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ: ಗಂಡನ ಸಿನಿಮಾ ವೀಕ್ಷಿಸಿದ ದೀಪಿಕಾ ಪಡುಕೋಣೆ ಪ್ರತಿಕ್ರಿಯೆ ಹೇಗಿತ್ತು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.