ETV Bharat / entertainment

ರಾಕಿಂಗ್​ ಸ್ಟಾರ್​ ಯಶ್ 19ನೇ​ ಸಿನಿಮಾ ಬಗ್ಗೆ ಸಿಕ್ಕೇ ಬಿಡ್ತು ಇಂಟ್ರೆಸ್ಟಿಂಗ್​ ಡೀಟೆಲ್ಸ್​​

author img

By

Published : Mar 11, 2023, 3:27 PM IST

Updated : Mar 11, 2023, 5:25 PM IST

ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್​​ ವಿಚಾರಗಳು.

yash upcoming movie with radhika pandit
ರಾಧಿಕಾ ಪಂಡಿತ್ ಜೊತೆ ರಾಕಿಂಗ್ ಸ್ಟಾರ್ ಯಶ್ ಸಿನಿಮಾ

ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರ ಯಾವುದು? ರಾಕಿ ಭಾಯ್​​ 19ನೇ ಚಿತ್ರದ ಸೂತ್ರಧಾರಿ ಯಾರು? ಎಂಬ ಚರ್ಚೆ ಶುರುವಾಗಿ 11 ತಿಂಗಳುಗಳೇ ಕಳೆದಿವೆ. ಆದರೆ ಈ ನಿಗೂಢ ಪ್ರಶ್ನೆಗೆ ಉತ್ತರ ರಾಕಿ ಆರಾಧಕರಿಗೆ ಸಿಕ್ಕಿಲ್ಲ. ಆದರೆ, ಈ ಗ್ಯಾಪ್​ನಲ್ಲಿ ಈಟಿವಿ ಭಾರತಕ್ಕೆ ಯಶ್ 19ನೇ ಚಿತ್ರದ ಬಗ್ಗೆ ಮಾಹಿತಿ ಸಿಕ್ಕಿದೆ.

rocking star yash family
ರಾಕಿಂಗ್​ ಕಪಲ್

ಕೆಜೆಎಫ್​​ 2 ತೆರೆಕಂಡು 11 ತಿಂಗಳು: ಪ್ಯಾನ್ ಇಂಡಿಯಾ ಸ್ಟಾರ್​ನ ಮುಂದಿನ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಇದೆ. ಈ ವಿಚಾರವಾಗಿ ದಿನಗಳ ಜೊತೆ ಅಂತೆ ಕಂತೆಗಳು ಉರುಳಿ ಹೋಗಿವೆ. ಯಶ್​ ಕೊನೆಯ ಸೂಪರ್​ ಹಿಟ್ ಚಿತ್ರ ಕೆಜಿಎಫ್​ 2 ರಿಲೀಸ್​ ಆಗಿ 11 ತಿಂಗಳುಗಳಾಗಿದೆ. ಆದರೆ ಯಶ್ ಮುಂದಿನ ಚಿತ್ರದ ಬಗ್ಗೆ ಯಾವುದೇ ಸುಳಿವಿಲ್ಲ. ಶಂಕರ್ ಜೊತೆ ಸಿನಿಮಾ ಮಾಡ್ತಾರೆ, ಹೊಂಬಾಳೆಯಲ್ಲಿ ನೀಲ್ ಜೊತೆ ಕೆಜಿಫ್ 3 ಮಾಡ್ತಾರೆ ಎಂದು ಅಂದಾಜಿಸಲಾಗಿತ್ತು. ಟಾಲಿವುಡ್, ಮಾಲಿವುಡ್ ನಿರ್ದೇಶಕರ ಹೆಸರು ಯಶ್ 19ನೇ ಸಿನಿಮಾ ಜೊತೆ ಕೇಳಿಬಂದಿತ್ತು. ಅದ್ರೆ ಯಾವುದರ ಬಗ್ಗೆಯೂ ಅಧಿಕೃತ ಘೋಷಣೆ ಅಗಿಲ್ಲ.

rocking star yash family
ರಾಧಿಕಾ ಪಂಡಿತ್​ - ಯಶ್

ಒತ್ತಡಕ್ಕೆ ಒಳಗಾಗಿದ್ದಾರಾ ಯಶ್?: ಯಶ್ 19ನೇ ಚಿತ್ರದ ಬಗ್ಗೆ ಇಷ್ಟೆಲ್ಲಾ ಚರ್ಚೆಗಳಾಗುತ್ತಿದ್ದರೂ ರಾಕಿ ಮಾತ್ರ ತಮ್ಮ ಪಾಡಿಗೆ ಮುಂದಿನ ಸಿನಿಮಾ ಅಲೋಚನೆ ಜೊತೆಗೆ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. ಇದರ ಜೊತೆಗೆ ಕೆಜಿಎಫ್​ 2 ತೆರೆಕಂಡು ಶೀಘ್ರದಲ್ಲೇ ಒಂದು ವರ್ಷ ಪೂರೈಸಲಿರುವ ಹಿನ್ನೆಲೆ ಮುಂದಿನ ಚಿತ್ರದ ಕಥೆ ಮತ್ತು ನಿರ್ದೇಶಕರು ಫೈನಲ್ ಆಗದ ಕಾರಣ ಯಶ್​ ಕೊಂಚ ಒತ್ತಡಕ್ಕೆ ಒಳಗಾಗಿದ್ದಾರೆ ಅನ್ನೋದು ಅವರ ಆಪ್ತ ಬಳಗದ ಮಾಹಿತಿ. ನಿತ್ಯ ಮುಂದಿನ ಚಿತ್ರದ ತಯಾರಿಯಲ್ಲೇ ದಿನ ಆರಂಭಿಸ್ತಿರುವ ಯಶ್ ಸದ್ಯ ಇಂಗ್ಲೆಂಡ್​ನಲ್ಲಿದ್ದಾರೆ.

ಇಂಗ್ಲೆಂ‌ಡ್​ನಲ್ಲಿ ಮುಂದಿನ ಸಿನಿಮಾ ತಯಾರಿ: ಹುಟ್ಟುಹಬ್ಬಕ್ಕೆ ದುಬೈಗೆ ಹೋಗಿದ್ದ ಯಶ್ ಈಗ ಇಂಗ್ಲೆಂ‌ಡ್​ಗೆ ತಮ್ಮ ಮುಂದಿನ ಚಿತ್ರದ ಕಥೆ ಬಗ್ಗೆ ಪ್ಲ್ಯಾನ್ ಮಾಡಲು ಹೋಗಿದ್ದಾರೆ. ರಾಮಾಚಾರಿ ತಮ್ಮ ನೂತನ ಚಿತ್ರದ ಕಥೆ ಬಗ್ಗೆ ಚರ್ಚೆ ಮಾಡ್ತಿರೋದು ಮಿಸೆಸ್ ರಾಮಾಚಾರಿ, ರಾಧಿಕಾ ಪಂಡಿತ್ ಜೊತೆ.

ಯಶ್​​ ಸಿನಿಮಾ ಅಖಾಡಕ್ಕೆ ರಾಧಿಕಾ ಎಂಟ್ರಿ: ಹೌದು, ರಾಧಿಕಾ ಪಂಡಿತ್ ಅವರು ಯಶ್​​ ಸಿನಿಮಾ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಯಶ್ ಈಗಾಗಲೇ ಕಾಲಿವುಡ್​ನ ಸ್ಟಾರ್ ಡೈರೆಕ್ಟರ್ ಮಣಿರತ್ನಂ, ಯಂಗ್ ಅಂಡ್ ಎನರ್ಜಿಟಿಕ್ ಡೈನಾಮಿಕ್ ಡೈರೆಕ್ಟರ್ ಲೋಕೇಶ್ ಕನಗರಾಜ್ ಅವರ ಜೊತೆ ತಮ್ಮ 19ನೇ ಚಿತ್ರದ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನುವ ಮಾಹಿತಿ ಈಟಿವಿ ಭಾರತಕ್ಕೆ ಸಿಕ್ಕಿದೆ. ಯಶ್, ಮಣಿರತ್ನಂ, ಲೋಕೇಶ್ ಕನಗರಾಜ್ ಜೊತೆಗೆ ನಟಿ ರಾಧಿಕಾ ಪಂಡಿತ್ ಕೂಡ ಕಥೆ ಬಗ್ಗೆ ಚರ್ಚೆ ಮಾಡಿದ್ದಾರೆ. ಈಗ ಆ ಕಥೆಯನ್ನು ಡೆವಲಪ್ ಮಾಡುವ ಸಲುವಾಗಿ ಇಂಗ್ಲೆಂಡ್​ಗೆ ಹಾರಿದ್ದಾರೆ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ.

ರಾಕಿಂಗ್​ ಕೈಯಲ್ಲಿ 3 ಕಥೆಗಳು: ಯಶ್ ಸದ್ಯ ಮೂರು ಕಥೆಗಳ ಶಾರ್ಟ್ ಲಿಸ್ಟ್ ಮಾಡಿದ್ದು, ಈ ಮೂರರಲ್ಲಿ ಯಾವ ಕಥೆ ಓಕೆ ಮಾಡ್ತಾರೆ ಅನ್ನೋದು ಗೊತ್ತಿಲ್ಲ. ಒಂದು ವೇಳೆ, ಮಣಿರತ್ನಂ ಹಾಗೂ ಲೋಕೇಶ್ ಕನಗರಾಜ್ ಕಥೆ ಓಕೆ ಆಗದಿದ್ದರೆ ಮಡದಿ ರಾಧಿಕಾ ಜೊತೆ ಚರ್ಚೆ ಮಾಡಿರುವ ಕಥೆಯನ್ನೇ ಫೈನಲ್ ಮಾಡಲು ಯಶ್ ಪ್ಲ್ಯಾನ್​​ ಮಾಡಿದ್ದಾರೆ. ಈ ಕಥೆ ಓಕೆ ಆಗಿದ್ದೇ ಆದ್ರೆ ಯಶ್ 19ನೇ ಚಿತ್ರಕ್ಕೆ ರಾಧಿಕಾ ಪಂಡಿತ್ ಡೈರೆಕ್ಷನ್ ಮಾಡೋ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ. ಅಲ್ಲದೇ ಈ ಚಿತ್ರ ಯಶ್ ಹೋಮ್ ಪ್ರೊಡಕ್ಷನ್ಸ್​ನಲ್ಲಿ ಅರಳಲಿದ್ದು, ಮುಂಬೈನ ಪ್ರೊಡಕ್ಷನ್ ಹೌಸ್ ಒಂದು ಕೂಡ ರಾಕಿಗೆ ಸಾಥ್ ಕೊಡಲಿದೆ.

ಇದನ್ನೂ ಓದಿ: ನಟ ಸತೀಶ್​ ಚಂದ್ರ ಕೌಶಿಕ್​​ ತಂಗಿದ್ದ ಫಾರ್ಮ್​​​ಹೌಸ್ ಪರಿಶೀಲನೆ: ನಿಷೇಧಿತ ಔಷಧಿ ಪತ್ತೆ!

ಯಶ್ ಕೆರಿಯರ್ ಆರಂಭದ ದಿನಗಳಿಂದಲೂ ಪ್ರತೀ ಹೆಜ್ಜೆಯಲ್ಲೂ ಹೆಜ್ಜೆ ಹಾಕುತ್ತಿರುವ ರಾಧಿಕಾ ಪಂಡಿತ್​ ಎಲ್ಲ ಅಂದುಕೊಂಡಂತೆ ಆದರೆ ಯಶ್19ನೇ ಚಿತ್ರಕ್ಕೆ ಸಾರಥಿಯಾಗ್ತಾರೆ. ಅಲ್ಲದೇ ರಾಧಿಕಾ ಪಂಡಿತ್ ಸೀರಿಯಲ್​ನಲ್ಲಿ ನಟಿಸುವಾಗಿನಿಂದ ಡೈರೆಕ್ಷನ್ ಮಾಡುವ ಹಂಬಲ ಅವರಲಿ ಇತ್ತು ಅನ್ನೋದು ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ. ಅದರೆ ಇದೆಲ್ಲ ಅಧಿಕೃತವಾಗಿ ಖಚಿತವಾಗಬೇಕಾದರೆ ನೀವು ಇನ್ನೊಂದಿಷ್ಟು ಸಮಯ ಕಾಯಬೇಕು ನೋಡಿ. ಯಾಕೆಂದರೆ ಮಣಿರತ್ನಂ ಹಾಗೂ ಲೋಕೇಶ್ ಕನಗರಾಜ್ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿ ಇದ್ದು, ಆ ಚಿತ್ರಗಳು ಕಂಪ್ಲೀಟ್ ಆದ ನಂತರ ಯಶ್ 19ನೇ ಸಿನಿಮಾ ಬಗ್ಗೆ ಅಪ್ಡೇಟ್ ಸಿಗಲಿದೆ.

ಇದನ್ನೂ ಓದಿ: ಸಬಾ ಆಜಾದ್ ಜೊತೆ ಹೃತಿಕ್ ರೋಷನ್ ಸುಂದರ ಕ್ಷಣ: ನೆಟ್ಟಿಗರಿಗೆ ನೆನಪಾದ ಕಂಗನಾ ರಣಾವತ್

Last Updated : Mar 11, 2023, 5:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.