ಅಕ್ಟೋಬರ್ 27, ಶುಕ್ರವಾರದಂದು '12th ಫೇಲ್' ಮತ್ತು ತೇಜಸ್ ಸಿನಿಮಾ ಬಿಡುಗಡೆ ಆಗಿ, ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರಿಸಿದೆ. '12th ಫೇಲ್' ಚಿತ್ರಕಥೆ ಸಿನಿಪ್ರಿಯರನ್ನು ಸೆಳೆದಿದ್ದು, ಮೆಚ್ಚುಗೆ ವ್ಯಕ್ತವಾಗಿದೆ. ಇತ್ತೀಚೆಗೆ, ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಸಹ ಸಿನಿಮಾವನ್ನು ಮೆಚ್ಚಿ ಗುಣಗಾನ ಮಾಡಿದ್ದಾರೆ.
-
This film upholds an important lesson. No matter how deep we fall , restarting life gives us a different dimension. @VVCFilms I am truly inspired by this storytelling #12fail #restart #VikrantMassey @VikrantMassey @KRG_Studios @ZeeStudios_ pic.twitter.com/9PEtwPsSuO
— Rishab Shetty (@shetty_rishab) October 30, 2023 " class="align-text-top noRightClick twitterSection" data="
">This film upholds an important lesson. No matter how deep we fall , restarting life gives us a different dimension. @VVCFilms I am truly inspired by this storytelling #12fail #restart #VikrantMassey @VikrantMassey @KRG_Studios @ZeeStudios_ pic.twitter.com/9PEtwPsSuO
— Rishab Shetty (@shetty_rishab) October 30, 2023This film upholds an important lesson. No matter how deep we fall , restarting life gives us a different dimension. @VVCFilms I am truly inspired by this storytelling #12fail #restart #VikrantMassey @VikrantMassey @KRG_Studios @ZeeStudios_ pic.twitter.com/9PEtwPsSuO
— Rishab Shetty (@shetty_rishab) October 30, 2023
ರಿಷಬ್ ಶೆಟ್ಟಿ ಟ್ವೀಟ್: ''12th ಫೇಲ್ ಚಿತ್ರವು ಒಂದು ಪ್ರಮುಖ ಪಾಠ ಎತ್ತಿ ಹಿಡಿದಿದೆ. ನಾವೆಷ್ಟೇ ಆಳಕ್ಕೆ ಕುಸಿದರೂ, ಬದುಕನ್ನು ಪುನರಾರಂಭಿಸುವುದು ನಮಗೆ ವಿಭಿನ್ನ ಅನುಭವ, ಆಯಾಮ ನೀಡುತ್ತದೆ. ಕಥೆ ರವಾನಿಸಿದ ಶೈಲಿಯಿಂದ ನಾನು ನಿಜಕ್ಕೂ ಸ್ಫೂರ್ತಿ ಪಡೆದಿದ್ದೇನೆ'' ಎಂದು ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಇತ್ತೀಚೆಗೆ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಬರೆದುಕೊಂಡಿದ್ದಾರೆ.
ಬಾಕ್ಸ್ ಆಫೀಸ್ ಪೈಪೋಟಿ? ಬಾಲಿವುಡ್ ಕ್ವೀನ್ ಖ್ಯಾತಿಯ ಕಂಗನಾ ರಣಾವತ್ ಮುಖ್ಯಭೂಮಿಕೆಯ ರೋಮಾಂಚಕ ವೈಮಾನಿಕ ಸಾಹಸ ಚಿತ್ರ 'ತೇಜಸ್' ಮತ್ತು ವಿಕ್ರಾಂತ್ ಮಾಸ್ಸೆ ಅಭಿನಯದ '12th ಫೇಲ್' ಸಿನಿಮಾ ಒಂದೇ ದಿನ ಥಿಯೇಟರ್‌ಗಳಲ್ಲಿ ತೆರೆಕಂಡಿದೆ. ಅಕ್ಟೋಬರ್ 27ರಂದು ತೆರೆಕಂಡು ಒಂದು ಮಟ್ಟಿನ ಬಾಕ್ಸ್ ಆಫೀಸ್ ಪೈಪೋಟಿ ನಡೆಸುತ್ತಿದೆ.
ಬಿಡುಗಡೆಗೂ ಮುನ್ನ ಸಖತ್ ಸದ್ದು ಮಾಡಿದ್ದ 'ತೇಜಸ್' ಪ್ರೇಕ್ಷಕರು, ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಸ್ವೀಕರಿಸಿದೆ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ಹೆಣಗಾಡುತ್ತಿದೆ. ಮತ್ತೊಂದೆಡೆ, 12th ಫೇಲ್ ಸಿನಿಮಾ ಸಕಾರಾತ್ಮಕ ಸ್ಪಂದನೆ ಸ್ವೀಕರಿಸುತ್ತಿದೆ. ಪಾಸಿಟಿವ್ ಮೌತ್ ಟಾಕ್ ಹಿನ್ನೆಲೆ, ಗಲ್ಲಾಪೆಟ್ಟಿಗೆ ವಿಚಾರದಲ್ಲಿ ಯಶ ಕಂಡಿದೆ.
12th ಫೇಲ್: ಸಿನಿ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, 12th ಫೇಲ್ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ, ಆರನೇ ದಿನ (ಇಂದು) ಚಿತ್ರ 2.00 ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಚಿತ್ರ ಒಟ್ಟು ಕಲೆಕ್ಷನ್ 12 ಕೊಟಿ ರೂಪಾಯಿಗೆ ಏರಲಿದೆ. ಈವರೆಗೆ 10 ಕೋಟಿ ರೂ. ವ್ಯವಹಾರ ನಡೆಸಿದೆ. ವಿಧು ವಿನೋದ್ ಚೋಪ್ರಾ ನಿರ್ದೇಶನದ ಈ ಚಿತ್ರ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ಕಥೆಯನ್ನು ಆಧರಿಸಿದೆ. ಚಿತ್ರದಲ್ಲಿ ವಿಕ್ರಾಂತ್, ಮೇಧಾ ಶಂಕರ್, ಸಂಜಯ್ ಬಿಷ್ಣೋಯ್ ಮತ್ತು ಹರೀಶ್ ಖನ್ನಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಿನೋದ್ ಚೋಪ್ರಾ ಫಿಲ್ಮ್ಸ್ ಬ್ಯಾನರ್ ಅಡಿ ನಿರ್ದೇಶಕರೇ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಇದನ್ನೂ ಓದಿ: ಕನ್ನಡ ಬಿಗ್ ಬಾಸ್: ಹಳ್ಳಿಮನೆಯಲ್ಲಿ ಹೊತ್ತಿಕೊಂಡಿದೆ ಮಾತಿನ ಕಿಚ್ಚು
ತೇಜಸ್: ಸಿನಿ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ತೇಜಸ್ ಸಿನಿಮಾ ಸಾಧಾರಣ ಅಂಕಿ ಅಂಶಗಳೊಂದಿಗೆ ಆರಂಭಗೊಂಡಿದ್ದು, ಮೊದಲ ಐದು ದಿನಗಳಲ್ಲಿ ಒಟ್ಟು 4.55 ಕೋಟಿ ರೂ. ಕಲೆಕ್ಷನ್ ಮಾಡಿದೆ. ಆರನೇ ದಿನ ಅಂದರೆ ಇಂದು ತೇಜಸ್ ಸಿನಿಮಾ 0.20 ಕೋಟಿ ರೂ.ಗಳನ್ನು ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಈ ಮೂಲಕ ಕಲೆಕ್ಷನ್ ಅಂಕಿ - ಅಂಶ ಒಟ್ಟು 4.75 ಕೋಟಿ ರೂ. ಆಗಲಿದೆ.
ಇದನ್ನೂ ಓದಿ: ಕರ್ನಾಟಕ ರಾಜ್ಯೋತ್ಸವ 2023: ಶಿವಣ್ಣ ಸೇರಿದಂತೆ ಕನ್ನಡ ಚಿತ್ರರಂಗದ ತಾರೆಯರಿಂದ ನಾಡಿನ ಜನತೆಗೆ ಶುಭಾಶಯ
ವರದಿಗಳ ಪ್ರಕಾರ, ಪ್ರೇಕ್ಷಕರ ಕೊರತೆ ಹಿನ್ನೆಲೆ ತೇಜಸ್‌ನ ಹಲವು ಶೋಗಳನ್ನು ಸೋಮವಾರ ರದ್ದುಗೊಳಿಸಲಾಗಿದೆ. ಮುಂಬೈನಲ್ಲಿ ಗೈಟಿ ಗ್ಯಾಲಾಕ್ಸಿ ಥಿಯೇಟರ್‌ಗಳನ್ನು ಹೊಂದಿರುವ ಸಿನಿಮಾ ಪ್ರದರ್ಶಕ ಮನೋಜ್ ದೇಸಾಯಿ ಅವರು ಈ ಬಗ್ಗೆ ಮಾತನಾಡಿದ್ದು, ಭಾನುವಾರದ ಶೋಗಳಿಗೆ ಕೇವಲ 100 ಮಂದಿ ಅಷ್ಟೇ ಬಂದಿದ್ದರು ಎಂದು ತಿಳಿಸಿದ್ದಾರೆ.