ETV Bharat / entertainment

’ರಾಜಮೌಳಿ ಕೊಲೆಗೆ ಸಂಚು’: ’ಹತ್ಯಾ ತಂಡದಲ್ಲಿದ್ದೇನೆ‘ ಎಂದ ಆರ್​ಜಿವಿ.. ಅಷ್ಟಕ್ಕೂ ಏನಿದು ಟ್ವೀಟ್​​​​​​​​​​ ವಿಚಾರ? - ನಿರ್ದೇಶಕ ರಾಜಮೌಳಿ ಅವರತ್ತ

ನಿಮ್ಮ ಕೊಲೆಗೆ ಹತ್ಯೆ ತಂಡ ರಚಿಸಲಾಗಿದೆ - ಈ ತಂಡದಲ್ಲಿ ನಾನು ಕೂಡ ಇದ್ದೇನೆ - ನಿಮ್ಮ ಕೊಲೆಗೆ ವೃತ್ತಿ ಮತ್ಸರವೇ ಕಾರಣವಾಗಲಿದೆ ಎಂದು ಆರ್​ಜಿವಿ ಟ್ವೀಟ್​ ಮಾಡಿದ್ದಾರೆ.

ರಾಜಮೌಳಿ ಕೊಲೆಗೆ ಸಂಚು; ಹತ್ಯೆ ತಂಡದಲ್ಲಿದ್ದೇನೆ ಎಂದ ಆರ್​ಜಿವಿ
rgv-tweet-on-rajamouli-increase-your-security
author img

By

Published : Jan 24, 2023, 5:22 PM IST

ಮುಂಬೈ: 'ಆರ್​ಆರ್​ಆರ್'​ ಚಿತ್ರ ಗ್ಲೋಬಲ್​ ಆವಾರ್ಡ್​ ಪ್ರಶಸ್ತಿ ಗೆದ್ದ ಬಳಿಕ ಸದ್ಯ ಎಲ್ಲರ ಗಮನ ನಿರ್ದೇಶಕ ರಾಜಮೌಳಿ ಅವರತ್ತ ನೆಟ್ಟಿದೆ ಎಂದರೆ ತಪ್ಪಾಗಲಾರದು. ಈ ನಡುವೆ ಅವರ ಜೀವಕ್ಕೆ ಬೆದರಿಕೆ ಎದುರಾಗಿದೆ. ಅವರ ಅವರ ಹತ್ಯೆಗೆ ಯೋಜನೆ ರೂಪಿಸಲಾಗಿದೆ. ಈ ಹತ್ಯೆಯ ದಳದಲ್ಲಿ ತಾವು ಕೂಡ ಭಾಗಿಯಾಗಿದ್ದು ಎಂದು ರಾಮ್​ ಗೋಪಾಲ್​ ವರ್ಮಾ ಟ್ವೀಟ್​ ಮಾಡಿದ್ದಾರೆ. ಇದೊಂದು ಹಾಸ್ಯಭರಿತ ಟ್ವೀಟ್​ ಆಗಿದ್ದು, ನಿಮ್ಮ ಭದ್ರತೆಯನ್ನು ಹೆಚ್ಚಿಸಿಕೊಳ್ಳಿ ಎಂದು ರಾಮ್​ ಗೋಪಾಲ್​ ವರ್ಮಾ ಅವರು ರಾಜಮೌಳಿಗೆ ತಿಳಿಸಿದ್ದಾರೆ. ಈ ಟ್ವೀಟ್​​ ಈಗ ಭಾರಿ ಸದ್ದು ಮಾಡುತ್ತಿದೆ.

  • And sir @ssrajamouli , please increase ur security because there is a bunch of film makers in india who out of pure jealousy formed an assassination squad to kill you , of which I am also a part ..Am just spilling out the secret because I am 4 drinks down

    — Ram Gopal Varma (@RGVzoomin) January 23, 2023 " class="align-text-top noRightClick twitterSection" data=" ">

28ನೇ ಕ್ರಿಟಿಕ್​ ಚಾಯ್ಸ್​ ಆವಾರ್ಡ್​ನಲ್ಲಿ 'ಆರ್​ಆರ್​ಆರ್'​​ ಸಿನಿಮಾ ಉತ್ತಮ ವಿದೇಶಿ ಭಾಷಾ ಚಿತ್ರ ಪ್ರಶಸ್ತಿ ಪಡೆದಿತ್ತು. ಈ ವೇಳೆ, ರಾಜಮೌಳಿ ಅವರು ಜೇಮ್ಸ್​ ಕ್ಯಾಮೆರಾನ್​​​ ಜೊತೆಗೆ ಮಾತುಕತೆ ನಡೆಸುತ್ತಿದ್ದ ವಿಡಿಯೋವನ್ನು ರಾಜಮೌಳಿ ಹಲವು ದಿನಗಳ ಹಿಂದೆ ಶೇರ್​ ಮಾಡಿದ್ದರು. ಈ ವಿಡಿಯೋವನ್ನು ಮರು ಶೇರ್​ ಮಾಡಿರುವ ಆರ್​ಜಿವಿ ದಾದಾ ಸಾಹೇಬ್​ ಪಾಲ್ಕೆ ಪ್ರಶಸ್ತಿಯಿಂದ ಇಲ್ಲಿಯವರೆಗೆ ಭಾರತದ ಸಿನಿಮಾದ ಇತಿಹಾಸದಲ್ಲಿ ರಾಜಮೌಳಿ ಸೇರಿದಂತೆ ಯಾರೂ ಕೂಡ ಭಾರತದ ನಿರ್ದೇಶಕರೊಬ್ಬರು ಇಂತಹ ಘಟನೆಯಲ್ಲಿ ಭಾಗಿಯಾಗುತ್ತಾರೆ ಎಂದು ಆಲೋಚಿಸಿರಲಿಲ್ಲ ಎಂದು ಬರೆದಿದ್ದಾರೆ.

'ಕಾಸಿಫ್'​, 'ಮುಘಲೇಆಜಮ್',​ 'ಶೋಲೆ' ನಿರ್ಮಿಸಿದ ನಿರ್ದೇಶಕರು ಸೇರಿದಂತೆ ಆದಿತ್ಯ ಚೋಪ್ರಾ, ಕರಣ್​ ಜೋಹರ್​, ಬನ್ಸಾಲಿಯಂತಹರನ್ನೂ ನೀವು ಮೀರಿಸಿದ್ದೀರಾ ಎಂದು ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ. ರಾಜಮೌಳಿ ಸರ್,​ ನೀವು ನಿಮ್ಮ ರಕ್ಷಣೆಯನ್ನು ಹೆಚ್ಚಿಸಿಕೊಳ್ಳಿ. ಕಾರಣ ವೃತ್ತಿ ಮತ್ಸರ ಹೊಂದಿರುವ ಕೆಲವು ಚಿತ್ರ ನಿರ್ದೇಶಕರು ನಿಮ್ಮ ಕೊಲೆಗೆ ಹತ್ಯೆ ತಂಡ ರಚಿಸಿದ್ದಾರೆ. ಈ ತಂಡದಲ್ಲಿ ನಾನು ಕೂಡ ಇದ್ದೇನೆ ಎಂದು ಆರ್​ಜಿವಿ ತಮಾಷೆಯಾಗಿ ಮಾಡಿರುವ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕ್ಯಾಮೆರಾನ್​ ಭೇಟಿ: ಅಮೆರಿಕ ನೆಲದಲ್ಲಿ ನಡೆದ 28ನೇ ವಾರ್ಷಿಕ ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್​ ಪ್ರದಾನ ಕಾರ್ಯಕ್ರಮದಲ್ಲಿ 'ಆರ್​ಆರ್​ಆರ್'​ ಚಿತ್ರತಂಡ ಭಾಗವಹಿಸಿದ್ದು, ಅಲ್ಲಿ ಹಾಲಿವುಡ್​ನ ಅದೆಷ್ಟೋ ಸಿನಿ ದಿಗ್ಗಜರೂ ಭಾಗಿಯಾಗಿದ್ದರು. ಅದರಲ್ಲಿ ಅವತಾರ್​ ಸೀಕ್ವೆಲ್​ ಬಿಡುಗಡೆ ಮಾಡಿದ್ದ ನಿರ್ದೇಶಕ ಜೇಮ್ಸ್​ ಕ್ಯಾಮೆರಾನ್​ ಅವರು ತಮ್ಮ ಪತ್ನಿ ಸಮೇತರಾಗಿ ಭಾಗವಹಿಸಿದ್ದರು. 'ಆರ್​ಆರ್​ಆರ್'​ ಸಿನಿಮಾಗೆ ಕ್ರಿಟಿಕ್ಸ್​ ಪ್ರಶಸ್ತಿ ದೊರೆತಿರುವುದಕ್ಕೆ ಅಭಿನಂದನೆ ಸಲ್ಲಿಸಿರುವ ಜೇಮ್ಸ್​ ಕ್ಯಾಮೆರಾನ್​, ಸಿನಿಮಾದ ಕುರಿತು 10 ನಿಮಿಷಗಳ ಕಾಲ ನಿರ್ದೇಶಕ ರಾಜಮೌಳಿ ಹಾಗೂ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

  • From Dada Sahab Phalke onwards till now , no one in the history of Indian cinema including @ssrajamouli could have imagined that an Indian director someday will go through this moment https://t.co/85gosw66qJ

ಭಾರತಕ್ಕೆ ಮರಳಿದ ಬಳಿಕ ರಾಜಮೌಳಿ ಅವರು ಜೇಮ್ಸ್​ ಕ್ಯಾಮೆರಾನ್​ ಅವರೊಂದಿಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. 'ಹಾಲಿವುಡ್​ ಮಹಾನ್​ ನಿರ್ದೇಶಕ ಜೇಮ್ಸ್​ ಕ್ಯಾಮೆರಾನ್​ ಆರ್​ಆರ್​ಆರ್​ ಸಿನಿಮಾವನ್ನು ನೋಡಿದ್ದಾರೆ. ಅಷ್ಟೇ ಅಲ್ಲದೇ ಸಿನಿಮಾವನ್ನು ಇಷ್ಟ ಪಟ್ಟಿರುವ ಅವರು ತಮ್ಮ ಹೆಂಡತಿಗೂ ಸಿನಿಮಾ ನೋಡುವಂತೆ ಹೇಳಿದ್ದಾರೆ. ಅವರೊಂದಿಗೆ ಮತ್ತೊಮ್ಮೆ ಸಿನಿಮಾವನ್ನು ನೋಡಿದ್ದಾರೆ. ಸರ್​ ನನಗೆ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ, ನಮ್ಮ ಸಿನಿಮಾದ ಬಗ್ಗೆ ನಮ್ಮ ಜೊತೆ 10 ನಿಮಿಷಗಳ ಮಾತನಾಡಿದ್ದೀರಿ ಎಂದರೆ... ನಾನು ಪ್ರಪಂಚದ ಉತ್ತಂಗುದಲ್ಲಿದ್ದೇನೆ... ಇಬ್ಬರಿಗೂ ಧನ್ಯವಾದಗಳು ಎಂದು ಬರೆದು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಅಥಿಯಾ ಕೈಹಿಡಿದ ರಾಹುಲ್​: ಸಾಕ್ಷೀಕರಿಸಿದ ಸುನಿಲ್​ ಶೆಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.