ETV Bharat / entertainment

ಬರ್ತ್​ಡೇ ಸ್ಪೆಷಲ್​: 'ಭುವನ ಸುಂದರಿ' ನಟಿ ಲಾರಾ ದತ್ತಾ ಬಗ್ಗೆ ನಿಮಗೆಷ್ಟು ಗೊತ್ತು? - ಈಟಿವಿ ಭಾರತ ಕನ್ನಡ

2020ರಲ್ಲಿ ಭುವನ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡ ನಟಿ ಲಾರಾ ದತ್ತಾ ಬಗ್ಗೆ ಮಾಹಿತಿ ಇಲ್ಲಿದೆ..

Lara Dutta
ಭುವನ ಸುಂದರಿ' ನಟಿ ಲಾರಾ ದತ್ತಾ
author img

By

Published : Apr 15, 2023, 11:34 AM IST

ನಟಿ ಲಾರಾ ದತ್ತಾ ಅವರ ಜೀವನದಲ್ಲಿ 2020ರ ಮೇ 12, ವಿಶೇಷ ಸ್ಥಾನವನ್ನು ಪಡೆದಿದೆ. ಆ ದಿನ ಅವರು 'ಭುವನ ಸುಂದರಿ' ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಭಾರತೀಯರನ್ನು ಹೆಮ್ಮೆ ಪಡುವಂತೆ ಮಾಡಿದರು. 1994 ರಲ್ಲಿ ಈ ಕಿರೀಟವನ್ನು ಪಡೆದಿದ್ದ ಸುಶ್ಮಿತಾ ಸೇನ್​ ಅವರ ನಂತರ ಅಂದರೆ, ಆರು ವರ್ಷಗಳ ಬಳಿಕ ಲಾರಾ ಈ ಕಿರೀಟವನ್ನು ಮುಡಿಗೇರಿಸಿಕೊಂಡರು. ಆಗ ಅವರಿಗೆ ಕೇವಲ 22 ವರ್ಷ ವಯಸ್ಸಾಗಿತ್ತು. ಅಂದಿನಿಂದ ಅವರು ತಮ್ಮ ಸೌಂದರ್ಯ, ವರ್ಚಸ್ಸು ಮತ್ತು ಬಹುಮುಖ ಪ್ರತಿಭೆಗಳಿಂದ ಅದೆಷ್ಟೋ ಹೃದಯಗಳನ್ನು ಗೆದ್ದಿದ್ದಾರೆ.

Lara Duttas
'ಭುವನ ಸುಂದರಿ' ನಟಿ ಲಾರಾ ದತ್ತಾ

2000 ನೇ ಇಸವಿಯಲ್ಲಿ ನಡೆದ ಸೌಂದರ್ಯ ಸ್ಪರ್ಧೆ ವಿರುದ್ಧ ಜನರಿಂದ ಆಕ್ಷೇಪ ವ್ಯಕ್ತವಾಗಿತ್ತು. ಮಹಿಳೆಯರನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಜೊತೆಗೆ ಇದರ ವಿರುದ್ಧ ಜನರು ಪ್ರತಿಭಟನೆ ಕೂಡ ನಡೆಸಿದ್ದರು. ಇದೇ ವೇಳೆ, ಲಾರಾ ದತ್ತಾ ಅವರಿಗೆ ಫೈನಲ್​ ಸ್ಪರ್ಧೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಜನರನ್ನು ನೀವು ಹೇಗೆ ಮನವೊಲಿಸುತ್ತೀರಿ? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಲಾರಾ ಅವರು ನೀಡಿದ ಉತ್ತರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದು ವೇದಿಕೆಯ ಮೇಲೆ ನಟಿಯ ಸೌಂದರ್ಯದ ಜೊತೆಗೆ ಅವರ ಬುದ್ಧಿವಂತಿಕೆಯು ಅನಾವರಣಗೊಂಡಿತ್ತು.

"ಮಿಸ್​ ಯೂನಿವರ್ಸ್​ನಂತಹ ಸ್ಪರ್ಧೆಗಳು ಮಹಿಳೆಯರಿಗೆ ಅವರು ಬಯಸುವಂತಹ ಕ್ಷೇತ್ರಗಳಲ್ಲಿ ಮುನ್ನುಗ್ಗಲು ಉತ್ತಮ ವೇದಿಕೆ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಅದು ಉದ್ಯಮದಲ್ಲಾಗಿರಲಿ, ಸೇನೆಯಲ್ಲಾಗಿರಲಿ ಅಥವಾ ರಾಜಕೀಯವಾಗಿರಲಿ. ಇದು ನಮ್ಮ ಆಯ್ಕೆಗಳಿಗೆ ಧ್ವನಿಯಾಗಲು ಈ ವೇದಿಕೆ ಸಹಾಯ ಮಾಡುತ್ತದೆ. ಜೊತೆಗೆ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ಸ್ವತಂತ್ರವಾಗಿರಲು ಸಹಕಾರಿಯಾಗುತ್ತದೆ" ಎಂದು ಲಾರಾ ವಿಶ್ವಾಸದಿಂದ ಉತ್ತರಿಸಿದರು. ಇದು ತೀರ್ಪುಗಾರರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಯಿತು.

ಜೊತೆಗೆ ಇವರ ಮಾತುಗಳನ್ನು ಕೇಳಿ ಕುತೂಹಲದಿಂದ ತೀರ್ಪುಗಾರರು, ಭಾರತದಲ್ಲಿ ಮಹಿಳಾ ರಾಜಕಾರಣಿಗಳು ಪುರುಷ ರಾಜಕಾರಣಿಗಳಿಗಿಂತ ಹೇಗೆ ಭಿನ್ನರಾಗಿದ್ದಾರೆ? ಎಂಬ ಪ್ರಶ್ನೆಯನ್ನು ಕೇಳಿದರು. "ಮಹಿಳಾ ರಾಜಕಾರಣಿಗಳು ಒಂದು ನಿರ್ದಿಷ್ಟ ಪ್ರಮಾಣದ ಸೂಕ್ಷ್ಮತೆ ಹೊಂದಿದ್ದಾರೆ" ಎಂದು ಅವರು ಪ್ರತಿಕ್ರಿಯಿಸಿದರು. ಜೊತೆಗೆ ಭರತನಾಟ್ಯದ ಪರಿಕಲ್ಪನೆಯನ್ನು ವಿವರಿಸಿದರು. ತಾನು ಗೌನ್​ನಲ್ಲಿದ್ದರಿಂದ ನೃತ್ಯ ಪ್ರಕಾರದ ಕೆಲವು ಸ್ಟೆಪ್​ಗಳನ್ನು ತೋರಿಸಲು ಸಾಧ್ಯವಾಗುತ್ತಿಲ್ಲ ಎಂದು ಧೈರ್ಯದಿಂದಲೇ ಉತ್ತರಿಸಿದರು.

ಅವರು ಮಿಸ್​ ಯೂನಿವರ್ಸ್​ ಸ್ಪರ್ಧೆಗೆ ಕೆಂಪು ಬಣ್ಣದ ಬ್ಲಾಕ್​ಲೆಸ್​ ಗೌನ್​ ಅನ್ನು ಆರಿಸಿಕೊಂಡಿದ್ದರು. 2000 ರಲ್ಲಿ ನಡೆದ ಸ್ಪರ್ಧೆಯ ಕೆಲವೊಂದು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅವರು ತಮ್ಮ ಎರಡು ದಶಕಗಳನ್ನು ಆಚರಿಸಿದರು. ಮಿಸ್ ಯೂನಿವರ್ಸ್ ಗೆದ್ದ ಕೇವಲ ಮೂರು ವರ್ಷಗಳ ನಂತರ, ಲಾರಾ 2003ರ ಚಿತ್ರ ಅಂದಾಜ್‌ನೊಂದಿಗೆ ಬಾಲಿವುಡ್‌ಗೆ ಕಾಲಿಟ್ಟರು. ನಂತರ ಭಾಗಂ ಭಾಗ್, ಕಾಲ್, ಪಾರ್ಟ್ನರ್, ಡಾನ್ ಫ್ರಾಂಚೈಸ್ ಮತ್ತು ಬೆಲ್ ಬಾಟಮ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ನಾಳೆ (ಏಪ್ರಿಲ್​ 16) ರಂದು ಅವರು 44ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಅವರು 2011 ರಲ್ಲಿ ಮಾಜಿ ಟೆನಿಸ್ ಆಟಗಾರ ಮಹೇಶ್ ಭೂಪತಿ ಅವರನ್ನು ವಿವಾಹವಾದರು ಮತ್ತು ಅವಳಿಗೆ ಸೈರಾ ಎಂಬ ಮಗಳಿದ್ದಾರೆ.

ಇದನ್ನೂ ಓದಿ: ಥಿಯೇಟರ್, ಒಟಿಟಿ, ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ 'ವರಾಹ ರೂಪಂ' ಹಾಡು ಬಳಸದಂತೆ ಕೋರ್ಟ್ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.