ಆಸ್ಟ್ರೇಲಿಯಾದ ಮೆಲ್ಬೋರ್ನ್‌ದಲ್ಲಿ ನಡೆಯುತ್ತಿರುವ 'ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್' ಸಮಾರಂಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದರು.
ಈ ಚಿತ್ರೋತ್ಸವದಲ್ಲಿ ಚಲನಚಿತ್ರಗಳನ್ನು ಹೊರತುಪಡಿಸಿ, ಟಿವಿ ಶೋಗಳು ಮತ್ತು ವೆಬ್ ಸರಣಿಗಳನ್ನು ಪ್ರದರ್ಶಿಸಲಾಗುತ್ತದೆ ಮತ್ತು ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈ ಬಾರಿ '83' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಣವೀರ್ ಸಿಂಗ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. 1983ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ಕಥೆಯಾಧಾರಿತ ಚಿತ್ರದಲ್ಲಿ ಇವರು ಕಪಿಲ್ ದೇವ್ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.
ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ (IFFM) ನಲ್ಲಿ 83 ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿರುವುದು ಸಂತೋಷವಾಗಿದೆ ಎಂದು ರಣವೀರ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
- " class="align-text-top noRightClick twitterSection" data="
">
ವೆಬ್ ಸರಣಿ ಮುಂಬೈ ಡೈರೀಸ್ 26/11, ವಿದ್ಯಾ ಬಾಲನ್-ಶೆಫಾಲಿ ಶಾ ಅಭಿನಯದ 'ಜಲ್ಸಾ' (2022) ಪ್ರಶಸ್ತಿ ಗೆದ್ದಿವೆ. ದಕ್ಷಿಣ ಚಿತ್ರರಂಗದ ನಟ ಸೂರ್ಯ ಅಭಿನಯದ 'ಜೈ ಭೀಮ್' ಮತ್ತು ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಥಿಯಾವಾಡಿ' ಸಿನಿಮಾಗಳು ಈ ಉತ್ಸವದಲ್ಲಿ ಹೆಚ್ಚು ನಾಮನಿರ್ದೇಶನಗೊಂಡ ಚಿತ್ರಗಳಾಗಿದ್ದವು. ಈ ಎರಡೂ ಚಿತ್ರಗಳು ಯಾವುದೇ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿವೆ.
IFFM 2022ರ ವಿಜೇತರ ಪಟ್ಟಿ ಹೀಗಿದೆ:
- ಅತ್ಯುತ್ತಮ ಚಲನಚಿತ್ರ: 83
- ಅತ್ಯುತ್ತಮ ನಿರ್ದೇಶಕ: ಶೂಜಿತ್ ಸರ್ಕಾರ್ (ಸರ್ದಾರ್ ಉದಾಮ್) ಮತ್ತು ಅಪರ್ಣಾ ಸೇನ್ (ದಿ ರೇಪಿಸ್ಟ್).
- ಅತ್ಯುತ್ತಮ ನಟ: ರಣವೀರ್ ಸಿಂಗ್ (83)
- ಅತ್ಯುತ್ತಮ ನಟಿ: ಶೆಫಾಲಿ ಶಾ (ಜಲ್ಸಾ)
- ಅತ್ಯುತ್ತಮ ಸೀರಿಸ್: ಮುಂಬೈ ಡೈರೀಸ್ 26/11
- ಸೀರಿಸ್ನ ಅತ್ಯುತ್ತಮ ನಟ: ಮೋಹಿತ್ ರೈನಾ (ಮುಂಬೈ 26/11)
- ಸೀರಿಸ್ನ ಅತ್ಯುತ್ತಮ ನಟಿ: ಸಾಕ್ಷಿ ತನ್ವರ್ (ಮೈ/my)
- ಅತ್ಯುತ್ತಮ ಇಂಡಿ ಚಿತ್ರ(Indie Film): ಜಗ್ಗಿ
- ಅತ್ಯುತ್ತಮ ಉಪಖಂಡದ ಚಲನಚಿತ್ರ (Subcontinent Film): ಜಾಯ್ಲ್ಯಾಂಡ್, ಮುಂತಾದವು.
ಇದನ್ನೂ ಓದಿ: SIIMA Nominations 2021: ಕನ್ನಡ ಸೇರಿದಂತೆ ಟಾಪ್ ಸೌತ್ ಸಿನಿಮಾಗಳ ಪಟ್ಟಿ ಬಿಡುಗಡೆ