ETV Bharat / entertainment

RRR, ಭೂಲ್​​ ಭುಲೈಯಾ 2 ಮೀರಿಸಿದ 'ಬ್ರಹ್ಮಾಸ್ತ್ರ': ಬಾಲಿವುಡ್​​​ಗೆ ಸಿಗುವುದೇ ಬೂಸ್ಟರ್ ಡೋಸ್‌? - ಈಟಿವಿ ಭಾರತ ಕರ್ನಾಟಕ

ರಣಬೀರ್ ಕಪೂರ್ ನಟನೆಯ ಬಹುನಿರೀಕ್ಷಿತ 'ಬ್ರಹ್ಮಾಸ್ತ್ರ' ನಾಡಿದ್ದು ರಿಲೀಸ್​ ಆಗಲಿದೆ. ಈ ಚಿತ್ರ ಬಾಲಿವುಡ್​​ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುವ ಸಾಧ್ಯತೆ ಇದೆ.

Ranbir Kapoor Brahmastra
Ranbir Kapoor Brahmastra
author img

By

Published : Sep 7, 2022, 1:49 PM IST

ಮುಂಬೈ: ದಕ್ಷಿಣದ ಸಿನಿ ತಾರೆಯರ ಅಬ್ಬರದ ಮುಂದೆ ಬಾಲಿವುಡ್​ ಕಂಗಾಲಾಗಿದೆ. ಯಾವುದೇ ಚಿತ್ರಗಳಿಂದ ಹೇಳಿಕೊಳ್ಳುವ ಪ್ರದರ್ಶನ ಕಂಡುಬರ್ತಿಲ್ಲ. ಇದೀಗ ರಣಬೀರ್​ ಕಪೂರ್​​ ಅಭಿನಯದ ಬ್ರಹ್ಮಾಸ್ತ್ರ ಸಿನೆಮಾ ಬಾಲಿವುಡ್​​​ಗೆ ಚೇತರಿಕೆ​ ನೀಡುವ ಲಕ್ಷಣ ಕಾಣುತ್ತಿದೆ.

ಸೆಪ್ಟೆಂಬರ್​​​​ 9ರಂದು ಸಿನೆಮಾ ದೇಶಾದ್ಯಂತ ರಿಲೀಸ್​ ಆಗಲಿದೆ. ಮುಂಗಡ ಬುಕ್ಕಿಂಗ್​​ ಜೋರಾಗಿ ನಡೆಯುತ್ತಿದೆ. ಸೆಪ್ಟೆಂಬರ್​ 6ರ ರಾತ್ರಿ 11:30ರವರೆಗಿನ ಮಾಹಿತಿ ಪ್ರಕಾರ ಒಟ್ಟು 1,31,000 ಟಿಕೆಟ್​​​​ಗಳು ಬಿಕರಿಯಾಗಿವೆ. ಈ ಮೂಲಕ ಕೋವಿಡ್​​​ ಮಹಾಮಾರಿ ಬಳಿಕ ಹೆಚ್ಚು ಮುಂಗಡ ಬುಕ್ಕಿಂಗ್​ ಆಗಿರುವ ಚಿತ್ರ ಎಂಬ ವಿಶೇಷತೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ, ಆರ್​ಆರ್​ಆರ್​ ಹಾಗೂ ಭೂಲ್​​ಭುಲೈಯಾ ಟಿಕೆಟ್ ಬುಕ್ಕಿಂಗ್​ ದಾಖಲೆಯನ್ನು ಇದು ಪುಡಿಗಟ್ಟಿದೆ. ಚಿತ್ರದಲ್ಲಿ ರಣಬೀರ್​ ಜೊತೆ ನಟಿ ಆಲಿಯಾ ಭಟ್​, ಅಮಿತಾಬ್​ ಬಚ್ಚನ್​, ನಾಗಾರ್ಜುನ್​​ ಮತ್ತು ಮೌನಿ ರಾಯ್ ಮುಖ್ಯ ಭೂಮಿಕೆಯಲ್ಲಿ​ ನಟಿಸಿದ್ದಾರೆ.

ಇದನ್ನೂ ಓದಿ: ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್ ರದ್ದು.. ಚಿತ್ರತಂಡ ಹೇಳಿದ್ದಿಷ್ಟು

ರಿಲೀಸ್​ಗೂ ಮುನ್ನ ಹೆಚ್ಚು ಬುಕ್ಕಿಂಗ್​ ಆಗಿರುವ ಚಿತ್ರಗಳಿವು..

  • ಕೆಜಿಎಫ್​ ಚಾಪ್ಟರ್​ 2(ಹಿಂದಿ) 5,05,000 ಟಿಕೆಟ್​​
  • ಬ್ರಹ್ಮಾಸ್ತ್ರ (ಮಂಗಳವಾರದವರೆಗೆ) 1,31,000 ಟಿಕೆಟ್​
  • 1983: 1, 29,000 ಟಿಕೆಟ್​​
  • ಭೂಲ್ ಭುಲೈಯಾ 2: 1, 12, 000 ಟಿಕೆಟ್​​
  • RRR (ಹಿಂದಿ):1,09,000 ಟಿಕೆಟ್​ ಬುಕ್ಕಿಂಗ್​​
  • ಲಾಲ್ ಸಿಂಗ್ ಚಡ್ಡಾ: 64,000 ಟಿಕೆಟ್​​
  • ಶಂಶೇರಾ: 50,000 ಟಿಕೆಟ್​
  • ಸಾಮ್ರಾಟ್ ಪೃಥ್ವಿರಾಜ್: 45,000 ಟಿಕೆಟ್​​​​

ಸಿನಿಮಾ ವಿಶ್ಲೇಷಕ ರಮೇಶ್ ಬಾಲಾ ಪ್ರಕಾರ, ಬ್ರಹ್ಮಾಸ್ತ್ರ ಮೊದಲ ದಿನ 25 ಕೋಟಿ ರೂ. ಗಳಿಕೆ ಮಾಡಬಹುದು. ಮುಂದಿನ ಮೂರು ದಿನಗಳಲ್ಲಿ ಸುಮಾರು 75 ಕೋಟಿ ರೂ. ಸಂಗ್ರಹಿಸುವ ಸಾಧ್ಯತೆಯ ಬಗ್ಗೆ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.