ETV Bharat / entertainment

ಕಂಗನಾ, ಮಾಧವನ್ ಪ್ರಾಜೆಕ್ಟ್ ಶುರು: ಸೆಟ್​ಗೆ 'ಸಿನಿಮಾ ದೇವರು' ತಲೈವಾ ಭೇಟಿ - Kangana Ranaut upcoming movie

ಬಾಲಿವುಡ್​ ನಟಿ ಕಂಗನಾ ರಣಾವತ್ ಅವರ ಮುಂದಿನ ಚಿತ್ರ ಇಂದು ಶುಭಾರಂಭ ಮಾಡಿದೆ. ಶೂಟಿಂಗ್​ ಸೆಟ್​ಗೆ ಜನಪ್ರಿಯ ನಟ ರಜನಿಕಾಂತ್ ಭೇಟಿ ಕೊಟ್ಟಿದ್ದಾರೆ.

Rajinikanth surprise visit on Kangana Ranaut shooting set
ಕಂಗನಾ ರಣಾವತ್​​ ಶೂಟಿಂಗ್​ ಸೆಟ್​ಗೆ ತಲೈವಾ ಭೇಟಿ
author img

By ETV Bharat Karnataka Team

Published : Nov 18, 2023, 6:52 PM IST

ಚಂದ್ರಮುಖಿ 2, ತೇಜಸ್​ ಸಿನಿಮಾಗಳ ಬಳಿಕ ಬಾಲಿವುಡ್​ ನಟಿ ಕಂಗನಾ ರಣಾವತ್ ಅವರು ತಮ್ಮ ಹೊಸ ಪ್ರಾಜೆಕ್ಟ್‌ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಇಂದು ಕೆಲಸಗಳು ಆರಂಭವಾಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. ನಟಿ ತಮ್ಮ ಮುಂದಿನ ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸದಿದ್ದರೂ, ಇದೊಂದು 'ಅತ್ಯಂತ ಅಸಾಮಾನ್ಯ ಮತ್ತು ಅತ್ಯಾಕರ್ಷಕ' ಸ್ಕ್ರಿಪ್ಟ್‌ನ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಎಂದು ತಿಳಿಸಿದ್ದಾರೆ.

ನಟಿ ಕಂಗನಾ ರಣಾವತ್ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಹಿಂದಿನ ತನು ವೆಡ್ಸ್ ಮನು ಚಿತ್ರದ ಸಹ-ನಟ ಆರ್ ಮಾಧವನ್ ಅವರೊಂದಿಗೆ ಮತ್ತೆ ಸ್ಕ್ರೀನ್​ ಶೇರ್ ಮಾಡುತ್ತಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಸೂಪರ್‌ ಸ್ಟಾರ್ ರಜನಿಕಾಂತ್ ಆಗಮಿಸಿದ್ದು, ನಟಿಗೆ ಒಂದೊಳ್ಳೆ ಸರ್​ಪ್ರೈಸ್​ ಸಿಕ್ಕಂತಾಗಿದೆ.

ಮುಂದಿನ ಪ್ರಾಜೆಕ್ಟ್​ ಬಗ್ಗೆ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ ಎಕ್ಸ್​ನಲ್ಲಿ ನಟಿ ಕಂಗನಾ ರಣಾವತ್​ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. "ನಾವಿಂದು ಚೆನ್ನೈನಲ್ಲಿ ನಮ್ಮ ಹೊಸ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಶೂಟಿಂಗ್​​ ಪ್ರಾರಂಭಿಸಿದ್ದೇವೆ. ಇತರ ವಿವರಗಳನ್ನ ಶೀಘ್ರದಲ್ಲೇ ಕೊಡಲಿದ್ದೇವೆ. ಸದ್ಯ ಈ ಅಸಾಮಾನ್ಯ ಮತ್ತು ರೋಮಾಂಚಕ ಕಥೆಗೆ ನಿಮ್ಮೆಲ್ಲರ ಬೆಂಬಲ, ಆಶೀರ್ವಾದದ ಅಗತ್ಯವಿದೆ" ಎಂದು ಬರೆದಿದ್ದಾರೆ. ಚಿತ್ರೀಕರಣ ಶುಭಾರಂಭದ ಫೋಟೋವನ್ನೂ ಸಹ ಹಂಚಿಕೊಂಡು ಅಭಿಮಾನಿಗಳಿಂದ ಆಶೀರ್ವಾದ ಕೋರಿದ್ದಾರೆ. ಎ.ಎಲ್ ವಿಜಯ್ ನಿರ್ದೇಶನದ ಈ ಚಿತ್ರದಲ್ಲಿ ನಟ ಆರ್ ಮಾಧವನ್ ಕೂಡ ಇದ್ದಾರೆ.

ಇದನ್ನೂ ಓದಿ: 'ಕಾಫಿ ವಿತ್ ಕರಣ್‌' ಶೋನ ಮುಂದಿನ ಅತಿಥಿಗಳ್ಯಾರು?: ಸಲ್ಮಾನ್​ & ಶಾರುಖ್ ಆಗಮನದ ನಿರೀಕ್ಷೆ​​​!

ಬಳಿಕ ಸಿನಿಮಾ ದಿಗ್ಗಜ ರಜನಿಕಾಂತ್ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳ ಮೊಗದಲ್ಲಿ ನಗು ಮೂಡಿಸಿದ್ದಾರೆ. ತಲೈವಾ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡ ನಟಿ, "ನಮ್ಮ ಚಿತ್ರೀಕರಣದ ಮೊದಲ ದಿನ 'ಭಾರತೀಯ ಚಿತ್ರರಂಗದ ದೇವರು ತಲೈವರ್' ಅವರೇ ನಮ್ಮ ಸೆಟ್‌ಗೆ ಸರ್​ಪ್ರೈಸ್ ಭೇಟಿ ನೀಡಿ ನಮ್ಮನ್ನು ರೋಮಾಂಚನಗೊಳಿಸಿದರು. ಎಂಥ ಸುಂದರ ದಿನ. ಮ್ಯಾಡಿ ಮಿಸ್​ ಯೂ. ನಟ ಆರ್ ಮಾಧವನ್ ಅವರು ಶೀಘ್ರದಲ್ಲೇ ಶೂಟಿಂಗ್​​ನಲ್ಲಿ ಭಾಗಿಯಾಗಲಿದ್ದಾರೆ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 'ಅನಿಮಲ್'​​ನ ಹೊಸ ಹಾಡು ಅನಾವರಣ: ರಕ್ತಸಿಕ್ತ ನೋಟದಲ್ಲಿ ರಣ್​ಬೀರ್​ ಕಪೂರ್

ಇನ್ನೂ ನಟಿ ಕಂಗನಾ ರಣಾವತ್ ಕೊನೆಯದಾಗಿ ಸರ್ವೇಶ್ ಮೇವಾರಾ ನಿರ್ದೇಶನದ 'ತೇಜಸ್' ಸಿನಿಮಾದಲ್ಲಿ ಕಾಣಿಸಿಕೊಂಡರು. ಅಕ್ಟೋಬರ್ 27 ರಂದು ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಚಿತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಅದಕ್ಕೂ ಮುನ್ನ ಸೆಪ್ಟೆಂಬರ್​ 28ರಂದು ಪಿ ವಾಸು ನಿರ್ದೇಶನದ ಚಂದ್ರಮುಖಿ 2 ತೆರೆಕಂಡಿತು. ರಾಘವ ಲಾರೆನ್ಸ್​ ಜೊತೆ ಸ್ಕ್ರೀನ್​ ಶೇರ್ ಮಾಡಿದ್ದು ಈ ಚಿತ್ರ ಕೂಡ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಇನ್ನೂ ನಟಿಯ ಕೈಯಲ್ಲಿ ಎಮರ್ಜೆನ್ಸಿ ಸಿನಿಮಾ ಇದ್ದು, ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.