ETV Bharat / entertainment

Kalki 2898 AD: ಡಾರ್ಲಿಂಗ್​ ಪ್ರಭಾಸ್​ ಲುಕ್​ಗೆ ಮೆಚ್ಚುಗೆ ಸೂಚಿಸಿದ ಸ್ಟಾರ್​ ನಿರ್ದೇಶಕ ರಾಜಮೌಳಿ - ಸ್ಯಾನ್ ಡಿಯಾಗೋ ಕಾಮಿಕ್ ಕಾನ್

ಆರ್​ಆರ್​ಆರ್​ ಖ್ಯಾತಿಯ ನಿರ್ದೇಶಕ ಎಸ್​ಎಸ್​ ರಾಜಮೌಳಿ ಕಲ್ಕಿ ಚಿತ್ರತಂಡ, ನಿರ್ದೇಶಕ ನಾಗ್​ ಅಶ್ವಿನ್​ ಮತ್ತು ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್​ ಅನ್ನು ಕೊಂಡಾಡಿದ್ದಾರೆ. ಪ್ರಭಾಸ್​ ಲುಕ್​ ಅನ್ನು ಮೆಚ್ಚಿಕೊಂಡಿದ್ದಾರೆ.​

Rajamouli
ಡಾರ್ಲಿಂಗ್​ ಪ್ರಭಾಸ್​ ಲುಕ್​ಗೆ ಮೆಚ್ಚುಗೆ ಸೂಚಿಸಿದ ಸ್ಟಾರ್​ ನಿರ್ದೇಶಕ ರಾಜಮೌಳಿ
author img

By

Published : Jul 21, 2023, 10:55 PM IST

ಅಮೆರಿಕದಲ್ಲಿ ನಡೆದ ಪ್ರತಿಷ್ಠಿತ 'ಸ್ಯಾನ್ ಡಿಯಾಗೋ ಕಾಮಿಕ್ ಕಾನ್' ಸಮಾರಂಭದಲ್ಲಿ 'ಪ್ರಾಜೆಕ್ಟ್​ ಕೆ' ಚಿತ್ರತಂಡ ಫಸ್ಟ್ ಗ್ಲಿಂಪ್ಸ್​ ಅನಾವರಣಗೊಳಿಸಿ, ಚಿತ್ರದ ಅಂತಿಮ, ಅಧಿಕೃತ ಶೀರ್ಷಿಕೆಯನ್ನು ಬಹಿರಂಗಗೊಳಿಸಿತು. 'ಕಲ್ಕಿ 2898 ಎಡಿ' ('Kalki 2898 AD') ಎಂದು ಟೈಟಲ್​ ಇಡಲಾಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಟ್ರೆಂಡಿಂಗ್​ ಆಗಿದೆ. ಸಿನಿಮಾದ ಮೊದಲ ನೋಟವು ಪ್ರೇಕ್ಷಕರು, ಚಲನಚಿತ್ರ ತಾರೆಯರು ಮತ್ತು ನಿರ್ದೇಶಕರ ಗಮನ ಸೆಳೆಯುತ್ತಿದೆ. ಈಗಾಗಲೇ ಅನೇಕ ಸೆಲೆಬ್ರಿಟಿಗಳು ಚಿತ್ರತಂಡಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಶ್​ ಮಾಡಿದ್ದಾರೆ.

  • Great job Nagi and Vyjayanthi movies. Creating an authentic futuristic movie is such a difficult task and you guys made it possible..👏🏻👏🏻
    Darling looks smashing..
    Only one question remains...
    Release date...🥰 #Kalki2898AD https://t.co/kKefpCvovr

    — rajamouli ss (@ssrajamouli) July 21, 2023 " class="align-text-top noRightClick twitterSection" data=" ">

ಇದೀಗ ಆರ್​ಆರ್​ಆರ್​ ಖ್ಯಾತಿಯ ನಿರ್ದೇಶಕ ಎಸ್​ಎಸ್​ ರಾಜಮೌಳಿ ಕಲ್ಕಿ ಚಿತ್ರತಂಡ, ನಿರ್ದೇಶಕ ನಾಗ್​ ಅಶ್ವಿನ್​ ಮತ್ತು ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್​ ಅನ್ನು ಕೊಂಡಾಡಿದ್ದಾರೆ. ​ಉತ್ತಮ ಕೆಲಸ ಮಾಡಿರುವುದಾಗಿ ಹೊಗಳಿದ್ದಾರೆ. "ಇಂತಹ ಚಿತ್ರಗಳನ್ನು ಮಾಡುವುದು ದೊಡ್ಡ ಕೆಲಸ. ಆದರೆ ನೀವು ಅದನ್ನು ಮಾಡಿದ್ದೀರಿ. ಡಾರ್ಲಿಂಗ್ (ಪ್ರಭಾಸ್) ಆಕರ್ಷಕವಾಗಿ ಕಂಡಿದ್ದಾರೆ. ಸಿನಿಮಾದ ಬಿಡುಗಡೆ ದಿನಾಂಕ ಯಾವಾಗ ಎಂಬ ಪ್ರಶ್ನೆ ಮಾತ್ರ ಉಳಿದಿದೆ" ಎಂದು ಅವರು ಹೇಳಿದರು.

ಇದಕ್ಕೆ ಪ್ರತಿಯಾಗಿ ನಿರ್ದೇಶಕ ನಾಗ್ ಅಶ್ವಿನ್ ಧನ್ಯವಾದ ಹೇಳಿದರು. ರಾಜಮೌಳಿ ಟ್ವೀಟ್ ಗೆ ಖ್ಯಾತ ನಿರ್ದೇಶಕರು, ನಿರ್ಮಾಪಕರು ಪ್ರತಿಕ್ರಿಯೆ ನೀಡಿದ್ದಾರೆ. 'ಬಾಹುಬಲಿ' ನಿರ್ಮಾಪಕ ಶೋಭು ಯರ್ಲಗಡ್ಡ ಅವರು 'ನೋಡಿ, ಬಿಡುಗಡೆ ದಿನಾಂಕ ಯಾರು ಕೇಳುತ್ತಿದ್ದಾರೆ' ಎಂದು ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಮರು ಟ್ವೀಟ್ ಮಾಡಿರುವ ನಿರ್ದೇಶಕ ಹರೀಶ್ ಶಂಕರ್, 'ಹಾ..ಹಾ.. ಚೆನ್ನಾಗಿ ಹೇಳಿದ್ದೀರಿ ಶೋಭು ಅವ್ರೇ' ಎಂದು ಉತ್ತರಿಸಿದ್ದಾರೆ. ಪ್ರಭಾಸ್​ ಅವರು ಒಂದು ಸಿನಿಮಾವನ್ನು ಒಂದು ವರ್ಷ ಶೂಟಿಂಗ್​ ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ, ಬಿಡುಗಡೆ ದಿನಾಂಕದ ಬಗ್ಗೆ ಟ್ವೀಟ್ ಮಾಡಿದಾಗ ಎಲ್ಲರೂ ಅವರನ್ನು ಕಾಲೆಳೆದಿದ್ದಾರೆ.

ಇದನ್ನೂ ಓದಿ: ಕಮಲ್​ ಕೊಂಡಾಡಿದ ಅಮಿತಾಭ್​: ನಟ ಹಾಸನ್​ ನೆಗೆಟಿವ್​ ರೋಲ್​ ಒಪ್ಪಿಕೊಳ್ಳಲು ಕಾರಣವೇನು ಗೊತ್ತಾ?

'ಕಲ್ಕಿ 2898 ಎಡಿ' ಯಾವಾಗ ರಿಲೀಸ್​?: 'ಕಲ್ಕಿ 2898 ಎಡಿ' ಈ ಚಿತ್ರವನ್ನು ಮುಂದಿನ ವರ್ಷ ಸಂಕ್ರಾಂತಿಯಂದು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಮೊದಲೇ ಹೇಳಿದ್ದರು. ಅದಾಗ್ಯೂ, ದಿನಗಳ ಹಿಂದೆ ಬಿಡುಗಡೆಯಾದ ಫಸ್ಟ್​ ಲುಕ್​ ಪೋಸ್ಟರ್​ಗಳು ಮತ್ತು ಶುಕ್ರವಾರ ಬಿಡುಗಡೆಯಾದ ಗ್ಲಿಂಪ್ಸ್​ನಲ್ಲಿ ಬಿಡುಗಡೆ ದಿನಾಂಕವನ್ನು ಹೇಳಲಾಗಲಿಲ್ಲ. ಇದರೊಂದಿಗೆ ಅಭಿಮಾನಿಗಳಿಗೆ ಗೊಂದಲ ಉಂಟಾಗಿದೆ. ಮುಂದಿನ ವರ್ಷ ಬೇಸಿಗೆ ಸಮಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಅನೇಕ ವಿಶ್ಲೇಷಕರು ಹೇಳಿದ್ದಾರೆ.

ಅಲ್ಲದೇ ಜನವರಿ 12, 2024ರಂದು ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಗ್ಲಿಂಪ್ಸ್​ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. ನಾಗ್​ ಅಶ್ವಿನ್​​ ನಿರ್ದೇಶನದ ಸಿನಿಮಾವನ್ನು ವೈಜಯಂತಿ ಮೂವೀಸ್ ನಿರ್ಮಾಣ ಮಾಡುತ್ತಿದೆ. 600 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣಗೊಳ್ಳುತ್ತಿದ್ದು, ಪ್ರಭಾಸ್​, ಕಮಲ್​ ಹಾಸನ್​​, ದೀಪಿಕಾ ಪಡುಕೋಣೆ, ಅಮಿತಾಭ್​ ಬಚ್ಚನ್​​, ದಿಶಾ ಪಟಾನಿ ನಟಿಸಿದ್ದಾರೆ.

ಇದನ್ನೂ ಓದಿ: 'ಕಾಮಿಕ್​ ಕಾನ್​​ ಈವೆಂಟ್​ನ ಮಹತ್ವವನ್ನು ಪುತ್ರನಿಂದ ತಿಳಿದುಕೊಂಡೆ': ಅಮಿತಾಭ್ ಬಚ್ಚನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.