ETV Bharat / entertainment

ರಾಘವೇಂದ್ರ ರಾಜ್​ಕುಮಾರ್​ ನಟನೆಯ '13' ಚಿತ್ರಕ್ಕೆ ಸೆನ್ಸಾರ್​ ಮಂಡಳಿ ಯು/ಎ ಸರ್ಟಿಫಿಕೇಟ್​ - ಈಟಿವಿ ಭಾರತ ಕನ್ನಡ

ರಾಘವೇಂದ್ರ ರಾಜ್​ಕುಮಾರ್ ಮತ್ತು ಶೃತಿ ಅಭಿನಯದ '13' ಸಿನಿಮಾಗೆ ಸೆನ್ಸಾರ್​ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ.

13 movie
'13'
author img

By

Published : Aug 14, 2023, 1:13 PM IST

ಕನ್ನಡ ಚಿತ್ರರಂಗದ ಸ್ಟಾರ್​ ನಟ ರಾಘವೇಂದ್ರ ರಾಜ್​ಕುಮಾರ್ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಿಡುಗಡೆ ಹಂತದಲ್ಲಿರುವ ಅವರ ಮುಂದಿನ ಚಿತ್ರ '13'. ಕೆ ನರೇಂದ್ರ ಬಾಬು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ನಾಯಕಿಯಾಗಿ ಶೃತಿ ನಟಿಸಿದ್ದಾರೆ. ಸದ್ಯ ಶೂಟಿಂಗ್​ ಮುಗಿಸಿರುವ ಚಿತ್ರತಂಡ ಸಿನಿಮಾ ಬಿಡುಗಡೆಗೆ ತಯಾರಿ ಮಾಡಿಕೊಂಡಿದೆ. ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್​ ಮಂಡಳಿ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ.

ಪ್ರತಿ ಬಾರಿಯೂ 'ಓ ಗುಲಾಬಿ', 'ಪಲ್ಲಕ್ಕಿ'ಯಂತಹ ಸುಂದರ ಪ್ರೇಮ ಕಥೆಗಳನ್ನು ಪ್ರೇಕ್ಷಕರಿಗೆ ಉಣಬಡಿಸುವ ನರೇಂದ್ರ ಬಾಬು ಅವರು '13' ಚಿತ್ರದಲ್ಲಿ ಭಾವೈಕ್ಯತೆಯ ಸಾಮಾಜಿಕ ಸಂದೇಶವಿರುವ ಕಥೆಯೊಂದನ್ನು ನಿರೂಪಣೆ ಮಾಡಿದ್ದಾರೆ. ಗಂಡ ಹೆಂಡತಿ ಅಂದ್ರೆ ಹೀಗಿರಬೇಕು ಎನ್ನುವಂತಿದ್ದ ದಂಪತಿ ತಮ್ಮದಲ್ಲದ ತಪ್ಪಿಗೆ ಜೀವನಪೂರ್ತಿ ಯಾವ ರೀತಿ ಕಷ್ಟ ಪಡುತ್ತಾರೆ ಎಂಬುದನ್ನು ಥ್ರಿಲ್ಲರ್​ ಕಥೆಯ ಮೂಲಕ ಹೇಳುವ ಚಿತ್ರ ಇದಾಗಿದೆ. ಸಿನಿಮಾದಲ್ಲಿ ಥ್ರಿಲ್ಲರ್ ಜೊತೆಗೆ ಮನರಂಜನೆ, ಸಸ್ಪೆನ್ಸ್ ಕಂಟೆಂಟ್ ಕೂಡ ಇರಲಿದೆ.

ಸಿನಿಮಾದಲ್ಲಿ ರಾಘವೇಂದ್ರ ರಾಜ್​ಕುಮಾರ್​ ಅವರು ನಿವೃತ್ತ ಸೈನಿಕ ಹಾಗೂ ಗುಜರಿ ಅಂಗಡಿ ಮಾಲೀಕ ಮೋಹನ್​ ಕುಮಾರ್​ ಪಾತ್ರದಲ್ಲಿ ನಟಿಸಿದ್ದಾರೆ. ಟೀ ಅಂಗಡಿ ನಡೆಸುವ ಸಾಯಿರಾಬಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರಕ್ಕೆ ಶೃತಿ ಜೀವ ತುಂಬಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ನಡೆದ ಒಂದು ನೈಜ ಘಟನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ನಿರ್ದೇಶಕರು ಈ ಚಿತ್ರದ ಕಥೆಯನ್ನು ಹೆಣೆದಿದ್ದಾರೆ. ಸಿನಿಮಾದಲ್ಲಿ ಸ್ಟಾರ್​ ನಟ ಪ್ರಮೋದ್​ ಶೆಟ್ಟಿಯವರು ಪೊಲೀಸ್​ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಡಾಲಿ ನಿರ್ಮಾಣದ 'ಟಗರು ಪಲ್ಯ' ಸಿನಿಮಾದ ಮೊದಲ ಹಾಡು ಬಿಡುಗಡೆಗೆ ದಿನ ನಿಗದಿ

'ಸಿಂಗಲ್​ ಸೇವಂತಿ' ಹಿಟ್​: ಇನ್ನು ಕೆಲವು ದಿನಗಳ ಹಿಂದೆ ಚಿತ್ರದ 'ಸಿಂಗಲ್​ ಸೇವಂತಿ' ಎಂಬ ಐಟಂ ಸಾಂಗ್​ ಬಿಡುಗಡೆ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಫಿಲ್ಮ್​ ಚೇಂಬರ್ ಅಧ್ಯಕ್ಷ ಭಾ.ಮ ಹರೀಶ್, ವಿನಯ್​ ರಾಜಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿ ತಂಡಕ್ಕೆ ಶುಭ ಕೋರಿದ್ದರು. ಲಕ್ಷ್ಮೀ ದಿನೇಶ್​ ಸಾಹಿತ್ಯವಿರುವ ಈ ಹಾಡಿಗೆ ಇಂದು ನಾಗರಾಜ್​ ದನಿಯಾಗಿದ್ದಾರೆ. ಈ ಹಾಡು ಕನ್ನಡಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

'13' ಚಿತ್ರಕ್ಕೆ ಮಂಜುನಾಥ್​ ನಾಯ್ಡು ಛಾಯಾಗ್ರಹಣ, ಸೋಹನ್​ ಬಾಬು ಅವರ ಸಂಗೀತವಿದೆ. ಯುವಿ ಪ್ರೊಡಕ್ಷನ್ಸ್​ ಅಡಿಯಲ್ಲಿ ಕೆ ಸಂಪತ್​ ಕುಮಾರ್​, ಹೆಚ್​ ಎಸ್​ ಮಂಜುನಾಥ್​, ಮಂಜುನಾಥ್​ ಗೌಡ ಹಾಗೂ ಸಿ ಕೇಶವ ಮೂರ್ತಿ ಹೀಗೆ 4 ಜನ ಸೇರಿ ಚಿತ್ರವನ್ನು ನಿರ್ಮಿಸಿದ್ದಾರೆ. ಮುಂದಿನ ತಿಂಗಳು ಸೆಪ್ಟಂಬರ್​ನಲ್ಲಿ ಈ ಚಿತ್ರ ತೆರೆ ಕಾಣಲಿದೆ.

ಇದನ್ನೂ ಓದಿ: Rolex: ಸೂಪರ್​ಹಿಟ್​ ಸಿನಿಮಾದ ಪಾತ್ರವೇ ಸಿನಿಮಾ! ಸೂರ್ಯ ಅಭಿನಯನದಲ್ಲಿ ಬರ್ತಿದೆ 'ರೋಲೆಕ್ಸ್'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.