ETV Bharat / entertainment

ಅಕ್ಟೋಬರ್​ನಲ್ಲಿ ಪರಿಣಿತಿ ಚೋಪ್ರಾ - ರಾಘವ್ ಚಡ್ಡಾ ಮದುವೆ?! - ಪರಿಣಿತಿ ರಾಘವ್ ಲವ್

ಅಕ್ಟೋಬರ್​ನಲ್ಲಿ ಪರಿಣಿತಿ ಚೋಪ್ರಾ ರಾಘವ್ ಚಡ್ಡಾ ದಾಂಪತ್ಯ ಜೀವನ ಆರಂಭಿಸಲಿದ್ದಾರೆ ಎಂಬ ಮಾಹಿತಿ ಇದೆ.

Parineeti Chopra Raghav Chadha
ಪರಿಣಿತಿ ಚೋಪ್ರಾ ರಾಘವ್ ಚಡ್ಡಾ ಮದುವೆ
author img

By

Published : Apr 21, 2023, 5:00 PM IST

ಕೆಲ ದಿನಗಳಿಂದ ಪ್ರೀತಿ ವಿಚಾರವಾಗಿ ಸದ್ದು ಮಾಡುತ್ತಿರುವ ಬಾಲಿವುಡ್ ನಟಿ ಪರಿಣಿತಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರು ಇದೇ ಸಾಲಿನ ಅಕ್ಟೋಬರ್‌ನಲ್ಲಿ ಹಸೆಮಣೆ ಏರಲಿದ್ದಾರೆ ಎಂದು ವರದಿಯಾಗಿದೆ. ಈ ಜೋಡಿಯ ಆಪ್ತ ಮೂಲಗಳ ಪ್ರಕಾರ, ಪರಿಣಿತಿ ಮತ್ತು ರಾಘವ್ ಅವರ ರೋಕಾ ಸಮಾರಂಭವನ್ನು (ಮದುವೆ ಮುನ್ನದ ಶಾಸ್ತ್ರ, ಎರಡೂ ಕುಟುಂಬಗಳ ಸೇರುವಿಕೆ ಅಥವಾ ನಿಶ್ಚಿತಾರ್ಥ) ಈಗಾಗಲೇ ಖಾಸಗಿಯಾಗಿ ಮಾಡಲಾಗಿದೆ.

ಕುಟುಂಬಸ್ಥರ ಸಂಪೂರ್ಣ ಸಮ್ಮತಿಯೊಂದಿಗೆ ಯಾವುದೇ ತೊಂದರೆ ಇಲ್ಲದೇ ಸಮಾರಂಭ ನಡೆಯುತ್ತಿರುವುದರಿಂದ ಇಬ್ಬರೂ ತುಂಬಾ ಸಂತೋಷವಾಗಿದ್ದಾರೆ. ಈ ವರ್ಷದ ಅಕ್ಟೋಬರ್ ಅಂತ್ಯದ ವೇಳೆ ಮದುವೆ ಆಗುವ ಸಾಧ್ಯತೆ ಇದೆ. ಮದುವೆಯ ಸಂಭ್ರಮವನ್ನು ಪ್ರಾರಂಭಿಸುವ ಮೊದಲು, ರಾಘವ್ ಮತ್ತು ಪರಿಣಿತಿ ಈಗಾಗಲೇ ಒಪ್ಪಿಕೊಂಡಿರುವ ತಮ್ಮ ಕೆಲಸಗಳನ್ನು ಮುಗಿಸಬೇಕಾಗಿದೆ. ಹಾಗಾಗಿ ಅವರು ಅವಸರ ಮಾಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ನಟಿ ಪರಿಣಿತಿ ಚೋಪ್ರಾ ಇತ್ತೀಚೆಗೆ ತಮ್ಮ ಉಂಗುರದ ಬೆರಳಿಗೆ ಬೆಳ್ಳಿ ಉಂಗುರ ಧರಿಸಿದ್ದು, ಅದು ಕ್ಯಾಮರಾಗಳಲ್ಲಿ ಕಾಣಿಸಿಕೊಂಡಿದೆ. ವರದಿಗಳ ಪ್ರಕಾರ, ಪರಿಣಿತಿ ಮತ್ತು ರಾಘವ್ ತಮ್ಮ ಮದುವೆಗೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ವರದಿಗಳನ್ನು ನಂಬುವುದಾದರೆ, ಈ ಜೋಡಿ ತಮ್ಮ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸಾಂಪ್ರದಾಯಿಕ ರೋಕಾ ಸಮಾರಂಭ ನಡೆಸಿದ್ದಾರೆ.

ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ತಮ್ಮ ಸಂಬಂಧ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ. ಆದಾಗ್ಯೂ, ಇಬ್ಬರೂ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಮೊದಲು ಮುಂಬೈನ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡು, ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆ ಆದರು. ಇತ್ತೀಚೆಗಷ್ಟೇ ವಿಮಾನ ನಿಲ್ದಾಣದಲ್ಲಿ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಪದೇ ಪದೆ ಪಾಪರಾಜಿಗಳ ಕ್ಯಾಮರಾಗಳ ಕಣ್ಣಲ್ಲಿ ಸರೆಯಾಗುತ್ತಿರುವುದು ಡೇಟಿಂಗ್​, ಎಂಗೇಜ್​ಮೆಂಟ್​, ಮದುವೆ ವದಂತಿಗಳಿಗೆ ತುಪ್ಪ ಸುರಿದಂತಿದೆ.

ಪರಿಣಿತಿ ಮತ್ತು ರಾಘವ್​ ಬಹಳ ಹಿಂದಿನಿಂದಲೂ ಪರಸ್ಪರ ಪರಿಚಿತರು. ಇಬ್ಬರೂ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕೆಲಸದ ವಿಚಾರ ಗಮನಿಸುವುದಾದರೆ, ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ರಾಜ್ಯಸಭಾ ಸದಸ್ಯ. ಪರಿಣಿತಿ ಚೋಪ್ರಾ ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಚಮ್ಕಿಲಾದಲ್ಲಿ ದಿಲ್ಜಿತ್ ದೋಸಾಂಜ್ ಜೊತೆ ನಟಿಸುತ್ತಿದ್ದಾರೆ.

ಇದನ್ನೂ ಓದಿ: ರಾಘವ್ ಚಡ್ಡಾ ಜೊತೆ ಮದುವೆ ವದಂತಿ: ಮೌನ ಮುರಿದ ಪರಿಣಿತಿ ಚೋಪ್ರಾ

ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವದಂತಿಗಳನ್ನು ಹೇಗೆ ಎದುರಿಸುತ್ತಿದ್ದೇನೆ ಎಂಬುದರ ಬಗ್ಗೆ ಸ್ವತಃ ನಟಿ ಪ್ರತಿಕ್ರಿಯಿಸಿದ್ದರು. ಅನುಚಿತವಾಗಿ ಅಥವಾ ಅಗೌರವಯುತವಾಗಿ ಯಾರಾದರೂ ವರ್ತಿಸುವವರೆಗೂ ಪ್ರತಿಕ್ರಿಯೆ ನೀಡುವ ಅಗತ್ಯ ಇಲ್ಲ. ಮಾಧ್ಯಮಗಳು ಸಹ ನನ್ನ ಜೀವನದ ಬಗ್ಗೆ ಮಾತನಾಡುವಾಗ ಒಂದು ಗೆರೆ ಹಾಕಿಕೊಂಡಿರಬೇಕು. ಸದ್ಯದ ಮಟ್ಟಿಗೆ ಸ್ಪಷ್ಟನೆ ನೀಡುವಂತಹ ಘಟನೆಗಳು ಏನೂ ಸಂಭವಿಸಿಲ್ಲ. ತೀರಾ ವೈಯಕ್ತಿವಾಗಿ ಬಂದರೆ ಅಥವಾ ತಪ್ಪು ಮಾಹಿತಿ ರವಾನೆ ಆದರೆ ಪ್ರತಿಕ್ರಿಯೆ ನೀಡಿ ತಪ್ಪು ತಿಳಿವಳಿಕೆಗಳನ್ನು ದೂರ ಮಾಡುತ್ತೇನೆ. ಅಗತ್ಯ ಇಲ್ಲದಿದ್ದರೆ ನಾನು ಹಾಗೆ ಮಾಡುವುದಿಲ್ಲ. ಸೆಲೆಬ್ರಿಟಿಗಳೆಂದ ಮೇಲೆ ನಾವು ಜನರ ಮನೆ ಮಾತಾಗಿರುತ್ತೇವೆ. ಇಲ್ಲದಿದ್ದರೆ ನಾವು ಈ ಕ್ಷೆತ್ರದಲ್ಲಿ ಏನು ಸಾಧಿಸಬೇಕೆಂದುಕೊಂಡು ಬಂದಿರುತ್ತೇವೋ ಆ ವಿಷಯದಲ್ಲಿ ವಿಫಲರಾಗಿದ್ದೇವೆ ಎಂದು ನನಗನಿಸುತ್ತದೆ. ಸದ್ಯ ಏನೂ ತೊಂದರೆ ಇಲ್ಲ ಎಂದು ನಟಿ ಪರಿಣಿತಿ ಚೋಪ್ರಾ ತಿಳಿಸಿದ್ದರು.

ಇದನ್ನೂ ಓದಿ: ಮತ್ತೆ ಮದುವೆ!: 'ತೆಲುಗು ಇಂಡಸ್ಟ್ರಿಯವರು ಕನ್ನಡದ ಮೇಲೆ ಕಣ್ ಹಾಕ್ತಿದಿರಲ್ವಾ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.