ದಕ್ಷಿಣ ಭಾರತದ ಸಿನಿಮಾರಂಗದ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಬತ್ತಳಿಕೆಯ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಚಂದ್ರಮುಖಿ 2' ಬಿಡುಗಡೆಗೆ ಮುಹೂರ್ತ ನಿಗದಿ ಆಗಿದೆ. ಖ್ಯಾತ ನಿರ್ದೇಶಕ, ನಟ ಹಾಗೂ ಸ್ಟಾರ್ ಕೊರಿಯೋಗ್ರಾಫರ್ ರಾಘವ್ ಲಾರೆನ್ಸ್ ಹಾಗೂ ಬಾಲಿವುಡ್ ಲೇಡಿ ಡಾನ್ ಕಂಗನಾ ರಣಾವತ್ ಅಭಿನಯದ ಈ ಸಿನಿಮಾವು ಅತೀ ಶೀಘ್ರದಲ್ಲೇ ತೆರೆ ಕಾಣಲಿದೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪಿ. ವಾಸು ಅವರ 65ನೇ ಚಿತ್ರವಿದು.
ಕಂಗನಾ ರಣಾವತ್ ಅವರು ಇತ್ತೀಚೆಗಷ್ಟೇ ಎಮರ್ಜೆನ್ಸಿ ಸಿನಿಮಾ ಚಿತ್ರೀಕರಣ ವಿಚಾರವಾಗಿ ಬ್ಯುಸಿಯಾಗಿದ್ದರು. ಅದು ಮುಗಿಸಿದ ಬಳಿಕ ಕಂಗನಾ ರಣಾವತ್ ಚಂದ್ರಮುಖಿ 2 ಶೂಟಿಂಗ್ ಆರಂಭಿಸಿದ್ದರು. ಜನವರಿಯಲ್ಲಿ ಚಂದ್ರಮುಖಿ 2 ಚಿತ್ರದ ಮೊದಲ ಶೆಡ್ಯೂಲ್ನ ಶೂಟಿಂಗ್ ಪೂರ್ಣಗೊಂಡಿದ್ದು, ಮುಂದಿನ ಹಂತದ ಶೂಟಿಂಗ್ ಹೈದರಾಬಾದ್‌ನಲ್ಲಿ ಮುಗಿದಿದೆ.
ಪ್ರಸಿದ್ಧ ನೃತ್ಯಗಾರ್ತಿ ಪಾತ್ರ: ಪಿ. ವಾಸು ಆ್ಯಕ್ಷನ್ ಕಟ್ ಹೇಳುತ್ತಿರುವ ಚಂದ್ರಮುಖಿ 2 ಸಿನಿಮಾ ಕಳೆದ ಡಿಸೆಂಬರ್‌ನಲ್ಲಿ ಚಿತ್ರೀಕರಣ ಆರಂಭಿಸಿದೆ. 2005 ರಲ್ಲಿ ಬಿಡುಗಡೆಯಾಗಿದ್ದ ರಜನಿಕಾಂತ್ ಮತ್ತು ಜ್ಯೋತಿಕಾ ಅಭಿನಯದ ತಮಿಳಿನ ಬ್ಲಾಕ್ಬಸ್ಟರ್ ಚಿತ್ರ ಚಂದ್ರಮುಖಿಯ ಸೀಕ್ವೆಲ್. ಸೌಂದರ್ಯ, ನಟನೆ ಮತ್ತು ನೃತ್ಯಕ್ಕೆ ಹೆಸರಾಗಿರುವ ನೃತ್ಯಗಾರ್ತಿಯ ಪಾತ್ರವನ್ನು ಕಂಗನಾ ನಿರ್ವಹಿಸಲಿದ್ದಾರೆ. ಚಿತ್ರದಲ್ಲಿ ತಮಿಳು ನಟ, ನಿರ್ದೇಶಕ ರಾಘವ ಲಾರೆನ್ಸ್ ಪ್ರಮುಖ ಪಾತ್ರದಲ್ಲಿ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: Kaun Banega Crorepati: ಮತ್ತೆ ಬಂತು ಕೌನ್ ಬನೇಗಾ ಕರೋಡ್ಪತಿ! ಸೀಸನ್ 15 ಶೀಘ್ರದಲ್ಲೇ ಆರಂಭ
ರಾಘವ್ ಲಾರೆನ್ಸ್, ಕಂಗನಾ ರಣಾವತ್ ಅಲ್ಲದೇ ಖ್ಯಾತ ಹಾಸ್ಯ ವಡಿವೇಲು, ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಲೈಕಾ ಸಂಸ್ಥೆಯ ಒಡೆಯ ಸುಭಾಷ್ ಕರಣ್ ಬಹಳ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದಾರೆ. ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ ಕೀರವಾಣಿ ಸಂಗೀತ ನಿರ್ದೇಶನ, ಆರ್ ಡಿ ರಾಜಶೇಖರ್ ಛಾಯಾಗ್ರಹಣ, ಅಂಥೋನಿ ಸಂಕಲನ ಚಿತ್ರಕ್ಕಿದೆ.
ಗಣೇಶ್ ಚತುರ್ಥಿಯಂದು ರಿಲೀಸ್: 18 ವರ್ಷದ ಬಳಿಕ ಚಂದ್ರಮುಖಿ ಪಾರ್ಟ್ 2 ಬರುತ್ತಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. ಚಿತ್ರವು ತೆಲುಗು, ತಮಿಳು, ಹಿಂದಿ, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸೆಪ್ಟಂಬರ್ 19 ರಂದು, ಗಣೇಶ್ ಚತುರ್ಥಿ ಸಲುವಾಗಿ ಸಿನಿಮಾ ತೆರೆ ಕಾಣಲಿದೆ.
ಮಣಿಕರ್ಣಿಕಾ ರಿಟರ್ನ್ಸ್: ದಿ ಲೆಜೆಂಡ್ ಆಫ್ ದಿಡ್ಡಾ, ದಿ ಇನ್ಕಾರ್ನೇಶನ್: ಸೀತಾ ಚಿತ್ರದಲ್ಲಿಯೂ ಕಂಗನಾ ಕಾಣಿಸಿಕೊಳ್ಳಲಿದ್ದಾರೆ. ನಿರ್ಮಾಣದ ಕೆಲಸ ಗಮನಿಸುವುದಾದರೆ, ನವಾಜುದ್ದೀನ್ ಸಿದ್ದಿಕಿ ಮತ್ತು ಅವನೀತ್ ಕೌರ್ ನಟಿಸಿರುವ ಟಿಕು ವೆಡ್ಸ್ ಶೇರು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸ್ಟ್ರೀಮ್ ಆಗಲಿದ್ದು, ಎಮರ್ಜೆನ್ಸಿ ಅಕ್ಟೋಬರ್ 20ರಂದು ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಕಾಲಿವುಡ್ ಖ್ಯಾತ ಹಾಸ್ಯನಟ ಯೋಗಿ ಬಾಬು ಸಿನಿಮಾಗೆ ಸಾಧು ಕೋಕಿಲ ಪುತ್ರನ ನಿರ್ದೇಶನ