ETV Bharat / entertainment

ಟಾಲಿವುಡ್ ಪವರ್ ಸ್ಟಾರ್​ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರಾ ಕಬ್ಜ ನಿರ್ದೇಶಕ ಆರ್​ ಚಂದ್ರು?! - r chandru latest news

ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾಗೆ ಕಬ್ಜ ಡೈರೆಕ್ಟರ್ ಆರ್​ ಚಂದ್ರು ಆ್ಯಕ್ಷನ್ ಕಟ್​ ಹೇಳಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

r chandru direction to pawan kalyan movie
ಪವನ್ ಕಲ್ಯಾಣ್ ಚಿತ್ರಕ್ಕೆ ಆರ್​ ಚಂದ್ರು ನಿರ್ದೇಶನ ?
author img

By

Published : Mar 17, 2023, 7:28 PM IST

ಕಬ್ಜ ಮೂಲಕ ಜಗತ್ತಿನಾದ್ಯಂದ ಸದ್ದು ಮಾಡುತ್ತಿರುವ ನಿರ್ದೇಶಕ ಆರ್ ಚಂದ್ರು ಅವರಿಗೆ ಮತ್ತೊಮ್ಮೆ ಅದೃಷ್ಟ ಲಕ್ಷ್ಮಿ ಒಲಿದಿದೆ. ಕನ್ನಡದ ಕೀರ್ತಿ ಪತಾಕೆ ಹಾರಿಸಿರುವ ಆರ್​​ ಚಂದ್ರು ಅವರು ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಸಿನಿಮಾ ನಿರ್ದೇಶಿಸಲಿದ್ದಾರೆ ಎನ್ನುವ ಮಾತು ಹೈದರಾಬಾದ್​ನಿಂದ ಹಿಡಿದು ಗಾಂಧಿನಗರದವರೆಗೂ ಸಖತ್​ ಸೌಂಡ್ ಮಾಡ್ತಿದೆ. ಇವೆಲ್ಲವೂ ಕಳೆದ ಒಂದು ದಿನದಲ್ಲಿ ನಡೆದ ಬೆಳವಣಿಗೆಗಳು.

ಪವನ್ ಕಲ್ಯಾಣ್ ಚಿತ್ರಕ್ಕೆ ಚಂದ್ರು ನಿರ್ದೇಶನ? ಹೌದು, ಕಬ್ಜ ಬಿಡುಗಡೆಗೆ ಮುನ್ನ ನಿರ್ದೇಶಕ ಆರ್ ಚಂದ್ರು ಅವರು ತಮ್ಮ ಚಿತ್ರ ನಾಯಕ ಅರಕೇಶ್ವರನ (ರಿಯಲ್​ ಸ್ಟಾರ್​​ ಉಪೇಂದ್ರ) ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದರು. ಕಬ್ಜ ಗೆಲುವಿಗೆ ಪ್ರಾರ್ಥನೆ ಸಲ್ಲಿಸಿ ಬಂದಿದ್ದರು. ಇದೇ ಸಮಯದಲ್ಲಿ ಕನ್ನಡದ ಆರ್​​ ಚಂದ್ರು ಟಾಲಿವುಡ್ ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರನ್ನೂ ಭೇಟಿ ಮಾಡಿ, ಫೋಟೋ ಕ್ಲಿಕಿಸಿಕೊಂಡು ಬಂದರು. ಆದರೆ ಅಷ್ಟರಲ್ಲಾಗಲೇ ಪವನ್ ಕಲ್ಯಾಣ್ ಮುಂದಿನ ಚಿತ್ರಕ್ಕೆ ಆರ್ ಚಂದ್ರು ಸಾರಥಿ ಎನ್ನುವ ಸಮಾಚಾರ ಹೈದರಾಬಾದ್​​ನಿಂದ ಬೆಂಗಳೂರಿನವರೆಗೂ ಹರಡಿದೆ.

ಅಧಿಕೃತ ಮಾಹಿತಿಗೆ ಕಾಯುತ್ತಿರುವ ಅಭಿಮಾನಿಗಳು: ವಿಶೇಷ ಪ್ರದರ್ಶನದಲ್ಲಿ ಕಬ್ಜ ಚಿತ್ರ ಕಣ್ತುಂಬಿಕೊಂಡ ನಟ ಪವನ್ ಕಲ್ಯಾಣ್ ಚಿತ್ರಕ್ಕೆ ಮನ ಸೋತಿದ್ದಾರೆ ಎನ್ನುವ ಸುದ್ದಿ ಕೂಡಾ ದೊಡ್ಡ ಮಟ್ಟದಲ್ಲೇ ಹರಡಿದೆ. ಸದ್ಯ ಹರಡಿರುವ ಸುದ್ದಿ ನಿಜ ಎಂದು ಹೇಳಲು ಪವನ್​ ಕಲ್ಯಾಣ್​, ಆರ್​ ಚಂದ್ರು ಅಥವಾ ಕಬ್ಜ ತಂಡದಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದ್ರೇ ಸದ್ಯ ಪವನ್ ಕಲ್ಯಾಣ್ ಚಿತ್ರಕ್ಕೆ ಆರ್ ಚಂದ್ರು ಅವರೇ ನಿರ್ದೇಶಕ ಅನ್ನೋ ಸುದ್ದಿ ಮಾತ್ರ ದೊಡ್ಡ ಮಟ್ಟದಲ್ಲೇ ಕೇಳಿ ಬರುತ್ತಿದೆ.

ಅಂದಹಾಗೆ ಕಬ್ಜ ಚಿತ್ರದ ಕಥೆ ಇನ್ನೂ ಮುಕ್ತಾಯವಾಗಿಲ್ಲ, ಎರಡನೇ ಭಾಗ ಇನ್ನೂ ಬರಬೇಕಿದೆ. ಇದರ ನಡುವೆ ಟಾಲಿವುಡ್​​ ಸ್ಟಾರ್​​ ಪವನ್ ಕಲ್ಯಾಣ್ ಅವರಿಗೆ ಆರ್.ಚಂದ್ರು ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನುವ ಸುದ್ದಿ ನಿರ್ದೇಶಕ ಕೀರ್ತಿ ಹೆಚ್ಚಲು ಕಾರಣವಾಗಿದೆ. ಹೀಗಾಗಿ ನಿರ್ದೇಶಕ ಆರ್ ಚಂದ್ರು ಮುಂದಿನ ನಡೆ ಮೇಲೆ ಅನೇಕರ ಕಣ್ಣಿದೆ. ಕಬ್ಜ 2 ಮುಗಿದ ನಂತರ ಪವನ್ ಕಲ್ಯಾಣ್ ಸಿನಿಮಾ ಮಾಡಲಿದ್ದಾರಾ? ಅನ್ನೋದು ಅಭಿಮಾನಿಗಳ ಪ್ರಶ್ನೆ.

4,000 ಸ್ಕ್ರೀನ್‌ಗಳಲ್ಲಿ ಕಬ್ಜ ಪ್ರದರ್ಶನ: ಕರುನಾಡಿನ ನಗುಮೊಗದ ಒಡೆಯ ಪುನೀತ್ ರಾಜ್​​ಕುಮಾರ್ ಹುಟ್ಟುಹಬ್ಬ ಹಿನ್ನೆಲೆ ಇಂದು 'ಕಬ್ಜ' ಸಿನಿಮಾ ಅದ್ಧೂರಿಯಾಗಿ ತೆರೆಕಂಡಿದೆ. ರಿಯಲ್​ ಸ್ಟಾರ್​ ಉಪೇಂದ್ರ ಮುಖ್ಯಭೂಮಿಕೆಯ, ಅಭಿನಯ ಚಕ್ರವರ್ತಿ ಸುದೀಪ್​ ಮತ್ತು ಕರುನಾಡ ಚಕ್ರವರ್ತಿ ಶಿವ ರಾಜ್​ಕುಮಾರ್​ ಪ್ರಮುಖ ಪಾತ್ರ ವಹಿಸಿರುವ 'ಕಬ್ಜ' ಸಿನಿಮಾ ವಿಶ್ವಾದ್ಯಂತ 4,000 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಆಗಿದೆ. ರಾಜ್ಯದ 450 ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್‌ ಆಗಿದ್ದು, ಬೆಂಗಳೂರಿನಲ್ಲಿಯೇ 200ಕ್ಕೂ ಹೆಚ್ಚಿನ ಸ್ಕ್ರೀನ್​​ಗಳಲ್ಲಿ ಪ್ರದರ್ಶನ ಆಗುತ್ತಿದೆ.

ಇದನ್ನೂ ಓದಿ: ಅಂಡರ್ ವರ್ಲ್ಡ್ ಕಥೆ 'ಕಬ್ಜ' ಕಮಾಲ್: ಸೀಕ್ವೆಲ್​ ನಿರ್ಮಾಣಕ್ಕೆ ಪ್ರೇಕ್ಷಕರ ಒತ್ತಾಯ

ಕಬ್ಜ ನಿರ್ದೇಶಕ ಆರ್.ಚಂದ್ರು ಅವರ ಕನಸಿನ ಪ್ರಾಜೆಕ್ಟ್​ ಆಗಿದ್ದು 5 ಭಾಷೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಹೈದರಾಬಾದ್, ಚೆನ್ನೈ, ದೆಹಲಿ ಹಾಗೂ ಮುಂಬೈ ಭಾಗದಲ್ಲಿ ಹೆಚ್ಚಿನ ಶೋಗಳು ನಡೆಯುತ್ತಿವೆ. 1942ರ ರೌಡಿಸಂ ಕಥಾನಕ ಹೊಂದಿರುವ ಈ ಚಿತ್ರವನ್ನು ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ನಾಳೆ 4,000 ಥಿಯೇಟರ್‌ಗಳಲ್ಲಿ 'ಕಬ್ಜ' ಬಿಡುಗಡೆ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಉಪ್ಪಿ ಟೀಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.