ETV Bharat / entertainment

ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪುನೀತ್ ಅಭಿಮಾನಿಗಳ ಆಕ್ರೋಶ: ಕಾರಣ? - ಈಟಿವಿ ಭಾರತ ಕನ್ನಡ

ಚಕ್ರವರ್ತಿ ಸೂಲಿಬೆಲೆ ತಮ್ಮ ಟ್ಟಿಟ್ಟರ್‌ನಲ್ಲಿ ತಮ್ಮದೇ ಪಕ್ಷದ ಶಾಸಕರ ಕಡತಗಳಿಗೆ ಸಹಿ ಮಾಡಲು ಸಿಎಂಗೆ ಸಮಯದ ಅಭಾವವಿದೆ ಎಂದು ಪಕ್ಷದವರೇ ಟೀಕಿಸಿದ್ದಾರೆ. ನಟರೊಬ್ಬರು ನಿಧನರಾದಾಗ 3 ದಿನಗಳ ಸಮಯವನ್ನು ಅದಕ್ಕಾಗಿ ಕೊಟ್ಟಿದ್ದಾರೆ. ಈಗ ಈ ಜನಾಕ್ರೋಶ ಇಲ್ಲದೇ ಹೋಗಿದ್ದಿದ್ದರೆ ವಿಕ್ರಾಂತ್ ರೋಣ ಸಿನಿಮಾ ಸಹ ನೋಡಿರುತ್ತಿದ್ದರು ಎಂದಿದ್ದಾರೆ.

ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪುನೀತ್ ಅಭಿಮಾನಿಗಳ ಆಕ್ರೋಶ: ಕಾರಣ!?

author img

By

Published : Aug 1, 2022, 9:36 PM IST

ರಾಜ್ಯ ಸರ್ಕಾರ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಟೀಕಿಸುವ ಭರದಲ್ಲಿ ಚಕ್ರವರ್ತಿ ಸೂಲಿಬೆಲೆ ನಟ ಪುನೀತ್‌ ರಾಜ್‌ಕುಮಾರ್‌ ನಿಧನವನ್ನು ಹೋಲಿಸಿ ಪೋಸ್ಟ್‌ ಮಾಡಿರುವ ಟ್ವೀಟ್ ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದೆ.

ಈ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಪುನೀತ್ ಅಭಿಮಾನಿಗಳ ಆಕ್ರೋಶಕ್ಕೆ ಎಡೆಮಾಡಿ ಕೊಟ್ಟಿದೆ. ಚಕ್ರವರ್ತಿ ಸೂಲಿಬೆಲೆ ತಮ್ಮ ಟ್ಟಿಟ್ಟರ್‌ನಲ್ಲಿ, ತಮ್ಮದೇ ಪಕ್ಷದ ಶಾಸಕರ ಕಡತಗಳಿಗೆ ಸಹಿ ಮಾಡಲು ಸಿಎಂಗೆ ಸಮಯದ ಅಭಾವವಿದೆ ಎಂದು ಪಕ್ಷದವರೇ ಟೀಕಿಸಿದ್ದಾರೆ. ಆದರೆ, ಸಿಎಂಗೆ ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಮಯವಿದೆ. ಪ್ರೀಮಿಯರ್ ಶೋಗೆ ಹೋಗಿ, ಸಿನಿಮಾ ನೋಡಿ ಕಣ್ಣೀರು ಹಾಕಲು ಸಮಯವಿದೆ. ನಟರೊಬ್ಬರು ನಿಧನರಾದಾಗ 3 ದಿನಗಳ ಸಮಯವನ್ನು ಅದಕ್ಕಾಗಿ ಕೊಟ್ಟಿದ್ದಾರೆ. ಈಗ ಈ ಜನಾಕ್ರೋಶ ಇಲ್ಲದೇ ಹೋಗದ್ದಿದ್ದರೆ ವಿಕ್ರಾಂತ್ ರೋಣ ಸಿನಿಮಾವನ್ನೂ ನೋಡಿರುತ್ತಿದ್ದರು ಎಂದು ಅಣಕಿಸಿದ್ದಾರೆ.

ಟ್ವೀಟ್​
ಪುನೀತ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗ ಟ್ವೀಟ್​

ಚಕ್ರವರ್ತಿ ಸೂಲಿಬೆಲೆಯವರ ಈ ಟ್ವೀಟ್‌ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳನ್ನು ಕೆರಳಿಸಿದೆ. ನಿಮ್ಮ ರಾಜಕೀಯ ನೀವು ಮಾಡಿಕೊಳ್ಳಿ, ನಮ್ಮ ನೆಚ್ಚಿನ ನಟನ ಹೆಸರನ್ನು ಯಾಕೆ ಎಳೆದು ತರುತ್ತೀರಾ ಎಂದು ಗರಂ ಆಗಿದ್ದಾರೆ. ಜೊತೆಗೆ ಸೂಲಿಬೆಲೆ ಅವರಿಗೆ ಕರೆ ಮಾಡಿ, ಕ್ಷಮೆ ಕೇಳುವಂತೆಯೂ ಆಗ್ರಹಿಸಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ಚಕ್ರವರ್ತಿ ಸೂಲೆಬೆಲೆ, ನನಗೆ ಪುನೀತ್ ರಾಜ್‌ಕುಮಾರ್‌ ಅವರ ಮೇಲೆ ಅಪಾರ ಗೌರವವಿದೆ. ಅವರಿಗೆ ಅಗೌರವ ತೋರುವಂತೆ ನಡೆದುಕೊಂಡಿಲ್ಲ. ಅಭಿಮಾನಿಗಳಿಗೆ ನೋವಾಗಿದ್ದರೆ ನಿಸ್ಸಂಶಯವಾಗಿ ಕ್ಷಮೆ ಕೋರುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಆಗಸ್ಟ್‌ 6 ರಿಂದ ಬಿಗ್‌ ಬಾಸ್ ಶೋ ಆರಂಭ: ಸುದೀಪ್​ ಏನಂದ್ರು ಗೊತ್ತೇ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.