ETV Bharat / entertainment

ಮುಂದಿನ ದಿನಗಳಲ್ಲಿ ಬರಲಿದೆ ಕಾಂತಾರ 2: ವಿಜಯ್ ಕಿರಗಂದೂರು - Kantara 2 latest news

ಸದ್ಯದಲ್ಲೇ ಕಾಂತಾರ 2 ಸಿನಿಮಾ ಮಾಡದೇ ಇದ್ದರೂ, ಮುಂದಿನ ದಿನಗಳಲ್ಲಿ ಮಾಡುವುದು ಖಚಿತ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಸ್ಪಷ್ಟಪಡಿಸಿದ್ದಾರೆ.

Kantara 2
ಕಾಂತಾರ 2
author img

By

Published : Dec 22, 2022, 2:02 PM IST

'ಕಾಂತಾರ' ಕನ್ನಡ ಚಿತ್ರರಂಗದ ಸೂಪರ್​ ಹಿಟ್​ ಸಿನಿಮಾ. ಕನ್ನಡದಲ್ಲಿ ಬಿಡುಗಡೆಯಾದ ಈ ಚಿತ್ರ ಬೇಡಿಕೆ ಮೇರೆಗೆ ಬಹುಭಾಷೆಗಳಿಗೆ ಡಬ್​ ಆಗಿ ಇಡೀ ಭಾರತೀಯ ಚಿತ್ರರಂಗದಲ್ಲೇ ಸದ್ದು ಮಾಡಿತು. ಕಾಂತಾರ ಸೀಕ್ವೆಲ್​ ಬಗ್ಗೆ ಪ್ರೇಕ್ಷಕರು ಭಾರಿ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.

ಕಾಂತಾರ 2 ಆಗತ್ತೋ, ಇಲ್ಲವೋ ಎನ್ನುವ ಗೊಂದಲವಿತ್ತು. ಇತ್ತೀಚೆಗೆ ರಿಷಬ್ ಶೆಟ್ಟಿ ಕಾಂತಾರ 2 ಬಗ್ಗೆ ಸದ್ಯಕ್ಕೆ ಏನೂ ಯೋಚನೆ ಮಾಡಿಲ್ಲ ಎಂದು ಹೇಳಿದ್ದರು. ಈ ಗೊಂದಲಕ್ಕೆ ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರು ತೆರೆ ಎಳೆದಿದ್ದಾರೆ. ಸದ್ಯದಲ್ಲೇ ಕಾಂತಾರ 2 ಸಿನಿಮಾ ಮಾಡದೇ ಇದ್ದರೂ, ಮುಂದಿನ ದಿನಗಳಲ್ಲಿ ಮಾಡುವುದು ಖಚಿತ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ಅವರು ಬೇರೊಂದು ಕೆಲಸದಲ್ಲಿ ಬ್ಯುಸಿ ಆಗಿರುವುದರಿಂದ ಕಾಂತಾರ 2 ಸಿನಿಮಾದ ಕೆಲಸ ತಡವಾಗಬಹುದು. ಈ ಸಿನಿಮಾ ಸಿಕ್ವಲ್ ಅಥವಾ ಪ್ರೀಕ್ವಲ್ ಮಾಡಬೇಕಾ ಎನ್ನುವ ಯೋಚನೆ ಮಾಡುತ್ತಿದ್ದೇವೆ. ಆದರೆ, ಸಿನಿಮಾ ಎರಡನೇ ಭಾಗ ಬರುವುದು ಪಕ್ಕಾ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಸಿನಿ ಪ್ರಿಯರಿಗೆ ಗುಡ್​ನ್ಯೂಸ್.. ಆಸ್ಕರ್​ ರೇಸ್​ಗೆ ಕಾಂತಾರ ಎಂಟ್ರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.