ETV Bharat / entertainment

ಪ್ರಿಯಾಂಕ ಉಪೇಂದ್ರ ಅಭಿನಯದ ಹೊಸ‌ ಚಿತ್ರ 'ಕರ್ತ ಕರ್ಮ ಕ್ರಿಯ' ಮುಹೂರ್ತ - Priyanka Upendra new movie Karta Karma Kriya

ನಟಿ ಪ್ರಿಯಾಂಕಾ ಉಪೇಂದ್ರ ಮತ್ತೊಂದು ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದು ಈ ಚಿತ್ರಕ್ಕೆ ಕರ್ತ ಕರ್ಮ ಕ್ರಿಯ ಟೈಟಲ್ ಇಡಲಾಗಿದೆ. ಮುಹೂರ್ತ ಸಮಾರಂಭ ಇತ್ತೀಚೆಗೆ ಜಯನಗರದ ಶ್ರೀವಿನಾಯಕ ದೇವಾಲಯದಲ್ಲಿ ನಡೆದಿದೆ.

Priyanka Upendra's new movie 'Karta Karma Kriya'!
ಪ್ರಿಯಾಂಕ ಉಪೇಂದ್ರ ಅಭಿನಯದ ಹೊಸ‌ ಚಿತ್ರ 'ಕರ್ತ ಕರ್ಮ ಕ್ರಿಯ'
author img

By

Published : Jun 20, 2022, 7:55 PM IST

ಮಮ್ಮಿ‌, ದೇವಿಕಾ, ಸೆಕೆಂಡ್ ಆಫ್ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್​ನಲ್ಲಿ ಬೇಡಿಕೆ ಹೊಂದಿರುವ ನಟಿ ಪ್ರಿಯಾಂಕಾ ಉಪೇಂದ್ರ. ಡಿಟೆಕ್ಟಿವ್ ತೀಕ್ಷ್ಣ, ಮಿಸ್ ನಂದಿನಿ, ಹೀಗೆ ಹಲವು ಚಿತ್ರಗಳನ್ನು ಮಾಡ್ತಿರುವ ಇವರೀಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಚಿತ್ರಕ್ಕೆ ಕರ್ತ ಕರ್ಮ ಕ್ರಿಯ ಎಂಬ ವಿಭಿನ್ನ ಟೈಟಲ್ ಇಟ್ಟಿದ್ದು, ಮುಹೂರ್ತ ಸಮಾರಂಭ ಇತ್ತೀಚೆಗೆ ಜಯನಗರದ ಶ್ರೀವಿನಾಯಕ ದೇವಾಲಯದಲ್ಲಿ ನೆರವೇರಿದೆ.

ಕರ್ತ ಕರ್ಮ ಕ್ರಿಯ ಸಿನಿಮಾದ ಮುಹೂರ್ತ ಸಮಾರಂಭ

ಪ್ರಿಯಾಂಕಾ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿದೆ‌. ಇಲ್ಲಿ ಮಾಡಿದ ತಪ್ಪಿಗೆ ಇಲ್ಲೇ ಶಿಕ್ಷೆ ಅನುಭವಿಸಬೇಕು ಎಂಬ ಮಾತಿಗೆ ಅನುಗುಣವಾಗಿ ಕಥೆ ಹೊಂದಿಸಲಾಗಿದೆ ಎನ್ನುತ್ತಾರೆ ನಿರ್ದೇಶಕ ರಾಜಕಿರಣ್. ವೇದಾಂತ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೇದಾಂತ್ ಗೌಡ ಹಾಗೂ ಶಿವ ರೆಡ್ಡಿ ನಿರ್ಮಾಣ ಮಾಡುತ್ತಿರುವ ಸಿನಿಮಾವನ್ನು ರಾಜಕಿರಣ್ ಜೆ. ನಿರ್ದೇಶಿಸುತ್ತಿದ್ದಾರೆ.

ಕರ್ತ ಕರ್ಮ ಕ್ರಿಯ ಸಿನಿಮಾದ ಮುಹೂರ್ತ ಸಮಾರಂಭ

ಈ ಹಿಂದೆ ಪ್ರಿಯಾಂಕ ಉಪೇಂದ್ರ ನಟಿಸಿದ್ದ 1980 ಚಿತ್ರ ನಿರ್ದೇಶಿಸಿದ್ದ ರಾಜಕಿರಣ್ ಅವರಿಗೆ ಇದು ಎರಡನೇ ಚಿತ್ರ. ಜೀವ ಆಂಟೋನಿ ಛಾಯಾಗ್ರಹಣ, ಆನಂದರಾಜ್ ವಿಕ್ರಮ್ ಸಂಗೀತ ನಿರ್ದೇಶನ, ಲೋಕೇಶ್ ಪುಟ್ಟೇಗೌಡ ಸಂಕಲನ ಹಾಗೂ ಪುಷ್ಪರಾಜ್ ಅವರ ಸಾಹಸ ನಿರ್ದೇಶನವಿದೆ. ಎಸ್.ನರೇಂದ್ರಬಾಬು ಸಂಭಾಷಣೆ ಬರೆಯುತ್ತಿದ್ದಾರೆ. ಜುಲೈ ಮೊದಲ ವಾರದಲ್ಲಿ ಬೆಂಗಳೂರು ಹಾಗೂ ದಾವಣಗೆರೆಯಲ್ಲಿ ಚಿತ್ರೀಕರಣ ನಡೆಯಲಿದೆ.

ಇದನ್ನೂ ಓದಿ: ಸೆನ್ಸಾರ್ ಪಾಸಾದ 'ತ್ರಿವಿಕ್ರಮ'.. ಮಗನಿಗೆ ಕ್ರೇಜಿಸ್ಟಾರ್ ಹೇಳಿದ್ರು ಈ ಕಿವಿಮಾತು

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.