ETV Bharat / entertainment

'ಇನ್​ಕ್ರೆಡಿಬಲ್​ ವೀಕೆಂಡ್'.. ನಿಕ್​ ಜೊತೆಗಿನ ರೊಮ್ಯಾಂಟಿಕ್​ ಫೋಟೋ ಹಂಚಿಕೊಂಡ ಪ್ರಿಯಾಂಕಾ - ಈಟಿವಿ ಭಾರತ ಕನ್ನಡ

Priyanka Chopra shares photos: ಪತಿ ನಿಕ್​ ಜೋನಾಸ್​ ಜೊತೆಗಿನ ರೊಮ್ಯಾಂಟಿಕ್​ ಫೋಟೋವನ್ನು 'ಇನ್​ಕ್ರೆಡಿಬಲ್​ ವೀಕೆಂಡ್'​ ಎಂಬ ಕ್ಯಾಪ್ಶನ್​ನೊಂದಿಗೆ ನಟಿ ಪ್ರಿಯಾಂಕಾ ಚೋಪ್ರಾ ಹಂಚಿಕೊಂಡಿದ್ದಾರೆ.

Priyanka Chopra only has eyes for Nick Jonas in pictures from her 'incredible weekend'
ನಿಕ್​ ಜೊತೆಗಿನ ರೊಮ್ಯಾಂಟಿಕ್​ ಫೋಟೋ ಹಂಚಿಕೊಂಡ ಪ್ರಿಯಾಂಕಾ
author img

By ETV Bharat Karnataka Team

Published : Sep 11, 2023, 7:09 PM IST

ಹಿಂದಿ ಚಿತ್ರೋದ್ಯಮದಿಂದ ವೃತ್ತಿಜೀವನ ಆರಂಭಿಸಿದ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಗ್ಲೋಬಲ್​ ಐಕಾನ್​ ಆಗಿದ್ದಾರೆ. ಹಾಲಿವುಡ್​ನಲ್ಲಿ ಮಿಂಚು ಹರಿಸುವ ಮೂಲಕ ಭಾರತೀಯ ಚಿತ್ರರಂಗದ ಗೌರವ ಹೆಚ್ಚಿಸಿದ್ದಾರೆ. ಅಮೆರಿಕನ್​ ಗಾಯಕ ನಿಕ್​ ಜೋನಾಸ್​ ಜೊತೆ ಸುಂದರ ದಾಂಪತ್ಯ ಜೀವನ ನಡೆಸುತ್ತಿದ್ದು, ಮಾದರಿ ದಂಪತಿಯಾಗಿ ಗುರುತಿಸಿಕೊಂಡಿದ್ದಾರೆ. ಪತಿಗೆ ಎಲ್ಲಾ ವಿಚಾರದಲ್ಲೂ ಸಂಪೂರ್ಣ ಬೆಂಬಲ ನೀಡುವ ಮೂಲಕ ಪ್ರಿಯಾಂಕಾ ಚೋಪ್ರಾ ಆದರ್ಶ ಪತ್ನಿಯಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಇವರಿಬ್ಬರ ಫೋಟೋಗಳು ಸೋಷಿಯಲ್​ ಮೀಡಿಯಾ ಸುತ್ತುವರಿಯುತ್ತಲೇ ಇರುತ್ತದೆ. ಭಾನುವಾರ ರಾತ್ರಿ ಪ್ರಿಯಾಂಕಾ ಚೋಪ್ರಾ ಅವರು ನಿಕ್​ ಜೋನಾಸ್​ ಅವರ LA ಈವೆಂಟ್​ (ಸಂಗೀತ ಕಚೇರಿ)ನಲ್ಲಿ ಭಾಗಿಯಾಗಿದ್ದರು. ಇಲ್ಲಿ ಕ್ಲಿಕ್ಕಿಸಲಾದ ಫೋಟೋಗಳನ್ನು ಹಂಚಿಕೊಳ್ಳಲು ನಟಿ ಇನ್​ಸ್ಟಾಗ್ರಾಮ್​ ವೇದಿಕೆಯನ್ನು ಬಳಸಿಕೊಂಡರು. ಮೂರು ಸುಂದರ ಫೋಟೋಗಳನ್ನು ಪ್ರಿಯಾಂಕಾ ಶೇರ್​ ಮಾಡಿದ್ದಾರೆ. ಚಿತ್ರಗಳಿಗೆ 'ಇನ್​ಕ್ರೆಡಿಬಲ್​ ವೀಕೆಂಡ್'​ ಎಂದು ಕ್ಯಾಪ್ಶನ್​ ನೀಡಿದ್ದಾರೆ. ಕೆಂಪು ಹೃದಯ, ಮಡಿಸಿದ ಕೈಗಳು ಮತ್ತು ಸ್ಟಾರ್​ ಎಮೋಜಿಗಳನ್ನು ಅಡಿಬರಹಕ್ಕೆ ಸೇರಿಸಿದ್ದಾರೆ.

ಮೊದಲೆರಡು ಫೋಟೋದಲ್ಲಿ ಪ್ರಿಯಾಂಕಾ ಚೋಪ್ರಾ ಪತಿಯನ್ನು ರೊಮ್ಯಾಂಟಿಕ್​ ಲುಕ್​ನಲ್ಲಿ ನೋಡುತ್ತಿದ್ದರೆ, ನಿಕ್​ ಜೋನಾಸ್​ ಕ್ಯಾಮರಾಗೆ ಪೋಸ್​ ನೀಡುತ್ತಿದ್ದಾರೆ. ಮೂರನೇ ಚಿತ್ರವು ನಿಕ್​ ತಮ್ಮ ಸಹೋದರರಾದ ಜೋ ಮತ್ತು ಕೆವಿನ್​ ಜೊತೆ ಪೋಸ್​ ನೀಡುತ್ತಿರುವುದನ್ನು ತೋರಿಸುತ್ತದೆ. ಪ್ರಿಯಾಂಕಾ ಅವರು ಉತ್ತಮ ಸಮಯವನ್ನು ಸ್ನೇಹಿತರೊಂದಿಗೆ ಕಳೆಯುವುದರೊಂದಿಗೆ, ಗಂಡನನ್ನು ಹುರಿದುಂಬಿಸುತ್ತಿರುವುದನ್ನು ಕಾಣಬಹುದು. ಈ ಬ್ಯೂಟಿಫುಲ್​ ವೀಕೆಂಡ್​ನಲ್ಲಿ ಮಗಳು ಮಾಲ್ತಿ ಮೇರಿ ಕೂಡ ಜೊತೆಗಿದ್ದಳು.

ಇದನ್ನೂ ಓದಿ: 'August magic': ಪತಿ ಮತ್ತು ಮಗಳ ಜೊತೆ ಸುಂದರ ಕ್ಷಣಗಳನ್ನು ಆನಂದಿಸುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕನ್​ ಗಾಯಕ ನಿಕ್​ ಜೋನಾಸ್​ ದಂಪತಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಈ ದಂಪತಿಯ ವಯಸ್ಸಿನ ವ್ಯತ್ಯಾಸ ಹಲವರ ಟೀಕೆಗೆ ಗುರಿಯಾದರೆ, ಹಲವರು ಸ್ಟಾರ್ ಕಪಲ್​ ಅನ್ನು ಮಾದರಿಯಾಗಿ ತೆಗೆದುಕೊಂಡಿದ್ದಾರೆ. ಈ ಜೋಡಿ ಬಗ್ಗೆ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದಾರೆ. ಸೆಲೆಬ್ರಿಟಿ ಕಪಲ್​ ಶೇರ್​ ಮಾಡುವ ಪ್ರತಿ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಳ್ಳುತ್ತವೆ.​

ಇನ್ನೂ ಪ್ರಿಯಾಂಕಾ ಚೋಪ್ರಾ ಅವರ ಕೆಲಸದ ವಿಚಾರವಾಗಿ ನೋಡುವುದಾದರೆ, ಅವರ ಮುಂಬರುವ ಚಿತ್ರ ಹೆಡ್ಸ್ ಆಫ್ ಸ್ಟೇಟ್. ಜಾನ್ ಸೆನಾ ಮತ್ತು ಇಡ್ರಿಸ್ ಎಲ್ಬಾ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಆ್ಯಕ್ಷನ್​ ಥ್ರಿಲ್ಲರ್​ ಚಿತ್ರವಾಗಿದೆ. ಹಾಲಿವುಡ್​ನಲ್ಲಿ ಮಿಂಚುತ್ತಿರುವ ಇವರು ಬಾಲಿವುಡ್​ನಲ್ಲಿ ಫರ್ಹಾನ್​ ಅಖ್ತರ್​ ಅವರ ಜೀ ಲೀ ಜರಾದಲ್ಲಿ ಆಲಿಯಾ ಭಟ್​ ಮತ್ತು ಕತ್ರಿನಾ ಕೈಪ್​ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇವರು ಮತ್ತೊಮ್ಮೆ ಭಾರತೀಯ ಚಿತ್ರರಂಗಕ್ಕೆ ಮರಳುತ್ತಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Victoria's Secret NYFW event: ಹಾಟ್​ ಲುಕ್​ನಲ್ಲಿ ಕಾಣಿಸಿಕೊಂಡ ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.