ETV Bharat / entertainment

ಇನ್ನು ಕಾಯಲು ಸಾಧ್ಯವಿಲ್ಲ.. ಪಾಸ್​​ಪೋರ್ಟ್​​​​​​​​​ ಚಿತ್ರದೊಂದಿಗೆ ಪ್ರಿಯಾಂಕಾ ಪೋಸ್ಟ್​​.. ಕುತೂಹಲ ಮೂಡಿಸಿದ ಶೀರ್ಷಿಕೆ

Priyanka Chopra In India: ದೇಸಿ ಹುಡುಗಿ ಪ್ರಿಯಾಂಕಾ ಚೋಪ್ರಾ ಬಹಳ ದಿನಗಳ ನಂತರ ಭಾರತಕ್ಕೆ ಬರುತ್ತಿದ್ದಾರೆ. ವಾಸ್ತವವಾಗಿ ಅವರು ತಮ್ಮ Instagram ಪೋಸ್ಟ್​ನಲ್ಲಿ ಪಾಸ್​ಪೋರ್ಟ್​ ಚಿತ್ರವನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ. ‘ಇನ್ನು ಮುಂದೆ ಕಾಯಲು ಸಾಧ್ಯವಿಲ್ಲ’ ಎಂಬ ಶೀರ್ಷಿಕೆಯನ್ನೂ ನೀಡಿದ್ದಾರೆ.

Etv BharatPriyanka Chopra can't wait to come to India Shared her passport photo on social media
Etv Bhaಇನ್ನು ಕಾಯಲು ಸಾಧ್ಯವಿಲ್ಲ... ಪಾಸ್​​ಪೋರ್ಟ್​​​​​​​​​ ಚಿತ್ರದೊಂದಿಗೆ ಪ್ರಿಯಾಂಕಾ ಪೋಸ್ಟ್​​.. ಕುತೂಹಲ ಮೂಡಿಸಿದ ಶೀರ್ಷಿಕೆrat
author img

By ETV Bharat Karnataka Team

Published : Oct 26, 2023, 11:31 AM IST

ಮುಂಬೈ: ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಬಂದು ಹೋಗಿ ಬಹಳ ದಿನಗಳೇ ಕಳೆದಿವೆ. ಅವರು ತಮ್ಮ ಸೋದರ ಸಂಬಂಧಿ ಪರಿಣಿತಿ ಚೋಪ್ರಾ ಮದುವೆಗೂ ಹಾಜರಾಗಿರಲಿಲ್ಲ. ಆದರೆ ಈಗ ಪ್ರಿಯಾಂಕಾ ಸ್ವದೇಶಕ್ಕೆ ಬರಲು ಸಜ್ಜಾಗಿದ್ದಾರೆ. ಇದಕ್ಕಾಗಿ ಅವರು ಹೆಚ್ಚು ಕಾಯಲು ಸಾಧ್ಯವಿಲ್ಲ. ಇತ್ತೀಚೆಗೆ, ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪಾಸ್‌ಪೋರ್ಟ್‌ನ ಚಿತ್ರವನ್ನು ಹಂಚಿಕೊಂಡು, 'ಇನ್ನು ಕಾಯಲು ಸಾಧ್ಯವಿಲ್ಲ' ಎಂದು ಪೋಸ್ಟ್​ ಹಾಕಿದ್ದಾರೆ. ಇದೇ ವೇಳೆ ’ಏಕ್​ ಮಿನಿಟ್​ ಹೋಗಯಾ ಮುಂಬೈ‘‘ ಎಂದೂ ಬರೆದುಕೊಂಡಿದ್ದಾರೆ

ಪ್ರಿಯಾಂಕಾ ಚೋಪ್ರಾ ಜಿಯೋ ಮಾಮಿ ಫಿಲ್ಮ್ ಫೆಸ್ಟಿವಲ್ 2023 ಕ್ಕಿಂತ ಮೊದಲು ಭಾರತಕ್ಕೆ ಆಗಮಿಸಲಿದ್ದಾರೆ ಎಂಬ ಸುದ್ದಿ ಇದೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಜಿಯೋ ಮಾಮಿ ಫಿಲ್ಮ್ ಫೆಸ್ಟಿವಲ್ 2023 ರ ಉತ್ಸವದ ಅಧ್ಯಕ್ಷತೆ ವಹಿಸಿಕೊಂಡಿದ್ದಾರೆ, ಇದು ಅಕ್ಟೋಬರ್ 27 ರಿಂದ ಮುಂಬೈನಲ್ಲಿ ನಡೆಯಲಿದೆ. ಇದಕ್ಕೂ ಮೊದಲು, ಅವರು ಇಂದು ಅಂದರೆ ಅಕ್ಟೋಬರ್ 26 ರಂದು ಭಾರತವನ್ನು ತಲುಪುತ್ತಾರೆ. ಅವರ ಸ್ವದೇಶಕ್ಕೆ ವಾಪಸ್​ ಆಗುವ ಖುಷಿಯಲ್ಲಿದ್ದು, ತಮ್ಮ ಉತ್ಸಾಹವನ್ನು ಹಂಚಿಕೊಳ್ಳಲು Instagram ಮೊರೆ ಹೋಗಿದ್ದು, ಪಾಸ್​ಪೋರ್ಟ್​ ಸ್ನಾಪ್​ ಹಾಕಿ ಖುಷಿ ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತಮ್ಮ ಪತಿ ಗಾಯಕ ನಿಕ್ ಜೋನಾಸ್ ಅವರೊಂದಿಗೆ ಜೋನಾಸ್ ಬ್ರದರ್ಸ್ ಪ್ರವಾಸದಲ್ಲಿ ನಿರತರಾಗಿದ್ದರು. ಈ ನಡುವೆ ಭಾರತಕ್ಕೆ ಬರಲು ಸಮಯ ತೆಗೆದುಕೊಂಡಿದ್ದಾರೆ. ಜಿಯೋ ಮಾಮಿ ಫಿಲ್ಮ್ ಫೆಸ್ಟಿವಲ್ 2023 ಈವೆಂಟ್​ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಅವರು ಭಾರತಕ್ಕೆ ಆಗಮಿಸಿದ್ದಾರೆ, ಈ ಹಿನ್ನೆಲೆಯಲ್ಲಿ ಅವರು, ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ತಮ್ಮ ವಿಮಾನ ಟಿಕೆಟ್ ಮತ್ತು ಭಾರತೀಯ ಪಾಸ್‌ಪೋರ್ಟ್‌ನ ಒಂದು ನೋಟವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ’’ಒಂದು ನಿಮಿಷ ಮುಂಬೈ’’ ಇನ್ನು ಕಾಯಲು ಸಾಧ್ಯವಿಲ್ಲ ಎಂಬ ಶೀರ್ಷಿಕೆಯನ್ನೂ ನೀಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಜಿಯೋ ಮಾಮಿ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಕ್ಟೋಬರ್ 27 ರಿಂದ ನವೆಂಬರ್ 5 ರವರೆಗೆ ನೀತಾ ಮುಖೇಶ್ ಅಂಬಾನಿ ಕಲ್ಚರ್ ಸೆಂಟರ್ (NMACC) ನಲ್ಲಿ ಕಾರ್ಯಕ್ರಮ ನಡೆಯಲಿದೆ. ಮಂಡಳಿಯ ಸದಸ್ಯರಲ್ಲಿ ಕಬೀರ್ ಖಾನ್, ವಿಶಾಲ್ ಭಾರದ್ವಾಜ್, ವಿಕ್ರಮಾದಿತ್ಯ ಮೋಟ್ವಾನೆ ಮತ್ತು ಜೋಯಾ ಅಖ್ತರ್, ಫರ್ಹಾನ್ ಅಖ್ತರ್, ರಿತೇಶ್ ದೇಶಮುಖ್ ಮತ್ತು ರಾಣಾ ದಗ್ಗುಬಾಟಿ ಪ್ರಮುಖರಾಗಿದ್ದಾರೆ.

ಇದನ್ನು ಓದಿ: 'ನಾನು ಜೈಲಿನೊಳಗೇ ಜೀವನ ಕೊನೆಗೊಳಿಸಲು ಬಯಸಿದ್ದೆ': ರಾಜ್ ಕುಂದ್ರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.