ಗಾಲ್ವಾನ್ ಕುರಿತು ಬಾಲಿವುಡ್ ನಟಿ ರಿಚಾ ಚಡ್ಡಾ ಅವರು ನೀಡಿದ್ದ ಪ್ರತಿಕ್ರಿಯೆಯನ್ನು ನಟ ಅಕ್ಷಯ್ ಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ. ಬಳಿಕ ಅಕ್ಷಯ್ ಕುಮಾರ್ ಟ್ವೀಟ್‌ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಖಂಡನೆ ವ್ಯಕ್ತಪಡಿಸಿದ್ದಾರೆ.
ಅಕ್ಷಯ್ ಕುಮಾರ್ ಟ್ವೀಟ್: ಅಕ್ಷಯ್ ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ನಟಿ ರಿಚಾ ಚಡ್ಡಾ ಅವರ ಅವರ ಹೇಳಿಕೆಯ ಸ್ಕ್ರೀನ್ ಶಾಟ್ ಹಂಚಿಕೊಂಡು 'ಇದನ್ನು ನೋಡಿ ನೋವಾಯಿತು'. ನಮ್ಮ ಸಶಸ್ತ್ರ ಪಡೆಗಳ ಸಂಬಂಧ ಯಾವುದೂ ನಮ್ಮನ್ನು ಅಕೃತಜ್ಞರನ್ನಾಗಿಸಬಾರದು. ಅವರು ಇರುವುದಕ್ಕೆ ಇಂದು ನಾವು ಇದ್ದೇವೆ ಎಂದು ಹೇಳಿದ್ದರು.
ಪ್ರಕಾಶ್ ರಾಜ್ ಟ್ವೀಟ್: ಅಕ್ಷಯ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, "ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ ಅಕ್ಷಯ್ ಕುಮಾರ್''. ರಿಚಾ ಚಡ್ಡಾ ಅವರು ಈ ದೇಶದ ಬಗ್ಗೆ ನಿಮಗಿಂತ ಹೆಚ್ಚು ಪ್ರಸ್ತುತವಾದದ್ದನ್ನು ಹೇಳಿದ್ದಾರೆ ಎಂದು ಕೌಂಟರ್ ಕೊಟ್ಟಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ ಪ್ರಕಾಶ್ ರಾಜ್ ರಿಚಾ ಬೆಂಬಲಕ್ಕೆ ಬಂದು, "ನಾವು ನಿಮ್ಮೊಂದಿಗಿದ್ದೇವೆ. ನೀವು ಏನು ಹೇಳಿದ್ದೀರಿ ಎಂದು ನಮಗೆ ಅರ್ಥವಾಯಿತು" ಎಂದು ಬರೆದಿದ್ದಾರೆ.
-
Didn’t expect this from you @akshaykumar ..having said that @RichaChadha is more relevant to our country than you sir. #justasking https://t.co/jAo5Sg6rQF
— Prakash Raj (@prakashraaj) November 25, 2022 " class="align-text-top noRightClick twitterSection" data="
">Didn’t expect this from you @akshaykumar ..having said that @RichaChadha is more relevant to our country than you sir. #justasking https://t.co/jAo5Sg6rQF
— Prakash Raj (@prakashraaj) November 25, 2022Didn’t expect this from you @akshaykumar ..having said that @RichaChadha is more relevant to our country than you sir. #justasking https://t.co/jAo5Sg6rQF
— Prakash Raj (@prakashraaj) November 25, 2022
ರಿಚಾ ಚಡ್ಡಾ ಟ್ವೀಟ್ ವಿವಾದ: ಭಾರತ ಮತ್ತು ಚೀನಾ ನಡುವೆ 2020 ರಲ್ಲಿ ಗಾಲ್ವಾನ್ ಘರ್ಷಣೆಯಲ್ಲಿ ಹಲವಾರು ಭಾರತೀಯ ಯೋಧರು ವೀರ ಮರಣವನ್ನಪ್ಪಿದ್ದರು. ಇತ್ತೀಚೆಗೆ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಹೇಳಿಕೆ ನೀಡಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಹಿಂಪಡೆಯಲು ಭಾರತೀಯ ಸೇನೆ ಸಿದ್ಧವಾಗಿದೆ ಎಂದಿದ್ದರು. ಅದರ ಸ್ಕ್ರೀನ್ಶಾಟ್ ಅನ್ನು ಬಳಸಿದ ರಿಚಾ "ಗಾಲ್ವಾನ್ ಸೇಯ್ಸ್ ಹಾಯ್' ಎಂದು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು.
-
Yes we stand with you @RichaChadha … we understand what you meant https://t.co/2ehUx2v46Y
— Prakash Raj (@prakashraaj) November 25, 2022 " class="align-text-top noRightClick twitterSection" data="
">Yes we stand with you @RichaChadha … we understand what you meant https://t.co/2ehUx2v46Y
— Prakash Raj (@prakashraaj) November 25, 2022Yes we stand with you @RichaChadha … we understand what you meant https://t.co/2ehUx2v46Y
— Prakash Raj (@prakashraaj) November 25, 2022
ಇದನ್ನೂ ಓದಿ: ರಿಚಾ ಚಡ್ಡಾ ವಿವಾದಿತ ಟ್ವೀಟ್.. ಕ್ಷಮೆ ಕೋರಿದ ಬಾಲಿವುಡ್ ನಟಿ
ನಟಿಯ ಈ ಪೋಸ್ಟ್ ಗಾಲ್ವಾನ್ಗೆ ಹೋಗಿ ಯುದ್ಧ ಮಾಡಿ, ಗಾಲ್ವಾನ್ ನಿಮ್ಮನ್ನು ಕರೆಯುತ್ತಿದೆ ಎಂಬ ರೀತಿಯ ಅರ್ಥ ಬರುವಂತಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿವಾದಕ್ಕೆ ಕಾರಣವಾಯಿತು. ಈ ವಿವಾದಾತ್ಮಕ ಟೀಕೆ ಹಿನ್ನೆಲೆಯಲ್ಲಿ ನಟಿಯನ್ನು ಬಂಧಿಸಿ, ಕೇಸ್ ದಾಖಲಿಸಬೇಕು ಎಂದು ಒತ್ತಾಯ ಕೇಳಿ ಬಂದಿತ್ತು. ಬಳಿಕ ನಟಿ ರಿಚಾ ಚಡ್ಡಾ ಕ್ಷಮೆಯಾಚಿಸಿ ಸ್ಪಷ್ಟನೆ ನೀಡಿದ್ದರು.