ETV Bharat / entertainment

ತಮಿಳು ನಟ ಸಿದ್ಧಾರ್ಥ್ ಸಿನಿಮಾ ಪ್ರಚಾರಕ್ಕೆ ಅಡ್ಡಿ: ಕನ್ನಡಿಗರ ಪರವಾಗಿ ಕ್ಷಮೆಯಾಚಿಸಿದ ಪ್ರಕಾಶ್ ರಾಜ್!

author img

By ETV Bharat Karnataka Team

Published : Sep 29, 2023, 3:31 PM IST

Updated : Sep 29, 2023, 3:59 PM IST

Prakash Raj apologies to Siddharth: ಬೆಂಗಳೂರಿನಲ್ಲಿ ನಿನ್ನೆ ಸಿದ್ಧಾರ್ಥ್ ಸಿನಿಮಾ ಪ್ರಚಾರಕ್ಕೆ ಅಡ್ಡಿಪಡಿಸಿದ್ದ ವಿಚಾರವಾಗಿ ನಟ ಪ್ರಕಾಶ್ ರಾಜ್ ಕನ್ನಡಿಗರ ಪರವಾಗಿ ಕ್ಷಮೆಯಾಚಿಸಿದ್ದಾರೆ.

Prakash Raj apologies to Siddharth
ಸಿದ್ಧಾರ್ಥ್ ಬಳಿ ಕ್ಷಮೆಯಾಚಿಸಿದ ಪ್ರಕಾಶ್ ರಾಜ್

ಕಾವೇರಿ ಕಿಚ್ಚು ಹೆಚ್ಚಾಗಿದೆ. ಹೋರಾಟಗಳು ಮುಂದುವರೆದಿದೆ. ಕನ್ನಡ ತಾರೆಯರು ಸಹ ಕಾವೇರಿಗಾಗಿ ದನಿ ಎತ್ತಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮ ಖಂಡಿಸಿ ಇಂದು ಕರ್ನಾಟಕ ಬಂದ್​​​ ಆಗಿದೆ. ತಮಿಳು ನಟ ಸಿದ್ಧಾರ್ಥ್ ಅವರ ಮೇಲೂ ಕಾವೇರಿ ಕಾವು ತಟ್ಟಿದ್ದು, ಕನ್ನಡಿಗರ ಪರವಾಗಿ ನಟ ಪ್ರಕಾಶ್ ರಾಜ್​ ಕ್ಷಮೆಯಾಚಿಸಿದ್ದಾರೆ.

  • Instead of questioning all the political parties and its leaders for failing to solve this decades old issue.. instead of questioning the useless parliamentarians who are not pressurising the centre to intervene.. Troubling the common man and Artists like this can not be… https://t.co/O2E2EW6Pd0

    — Prakash Raj (@prakashraaj) September 28, 2023 " class="align-text-top noRightClick twitterSection" data=" ">

ಕನ್ನಡಿಗರ ಪರವಾಗಿ ಕ್ಷಮೆಯಾಚಿಸಿದ ಪ್ರಕಾಶ್ ರಾಜ್: ಗುರುವಾರದಂದು ತಮಿಳು ನಟ ಸಿದ್ಧಾರ್ಥ್ ಅವರು ತಮ್ಮ ಚಿತ್ತ (Chithha) ಸಿನಿಮಾ ಪ್ರಮೋಶನ್​ ಸಲುವಾಗಿ ಬೆಂಗಳೂರಿಗೆ ಆಗಮಿಸಿದ್ದರು. ಮಲ್ಲೇಶ್ವರಂನ ಎಸ್​ಆರ್​ವಿ ಥಿಯೇಟರ್​ನಲ್ಲಿ ಸಿನಿಮಾ ಸಂಬಂಧ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಆದ್ರೆ ಅಲ್ಲಿಗೆ ಆಗಮಿಸಿದ ಕನ್ನಡಪರ ಹೋರಾಟಗಾರರು ತಮಿಳು ಸಿನಿಮಾ ಪ್ರೆಸ್​ಮೀಟ್​ಗೆ ವಿರೋಧ ವ್ಯಕ್ತಪಡಿಸಿದ್ದರು.​​ ತಮಿಳು ತಾರೆಯ ಸಿನಿಮಾ ಪ್ರಚಾರ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದ ಹಿನ್ನೆಲೆ, ನಟ ಸಿದ್ಧಾರ್ಥ್‌ ಅವರಲ್ಲಿ ಕನ್ನಡಿಗರ ಪರವಾಗಿ ನಟ, ರಾಜಕಾರಣಿ ಪ್ರಕಾಶ್ ರಾಜ್ ಕ್ಷಮೆಯಾಚಿಸಿದ್ದಾರೆ. ಪ್ರತಿಭಟನಾಕಾರರು ಕಲಾವಿದರನ್ನು ನಿಂದಿಸುವ ಬದಲಾಗಿ ಚುನಾಯಿತ ಅಧಿಕಾರಿಗಳಲ್ಲಿ ದೂರು ಸಲ್ಲಿಸಬೇಕು ಎಂದು ಸಾಮಾಜಿಕ ಜಾಲತಾಣ X (ಹಿಂದಿನ ಟ್ವಿಟರ್​) ನಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಮನವಿ ಮಾಡಿದ್ದಾರೆ.

ಪ್ರಕಾಶ್ ರಾಜ್​ ಟ್ವೀಟ್: ತಮಿಳು ನಟ ಸಿದ್ಧಾರ್ಥ್ ಅವರ ಪ್ರೆಸ್​ಮೀಟ್​​ಗೆ ಸಂಬಂಧಿಸಿದ ವಿಡಿಯೋವನ್ನು ಎಕ್ಸ್​​ನಲ್ಲಿ ಶೇರ್ ಮಾಡಿರುವ ನಟ ಪ್ರಕಾಶ್ ರಾಜ್​, ''ಕಾವೇರಿ ನಮ್ಮದು. ಹೌದು, ನಮ್ಮದೇ. ಆದರೆ, ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲಾರದ ಎಲ್ಲಾ ಅಸಮರ್ಥ ರಾಜಕೀಯ ಪಕ್ಷಗಳನ್ನು, ನಾಯಕರನ್ನು ಪ್ರಶ್ನಿಸದೇ..... ಕೇಂದ್ರ ಸರ್ಕಾರಕ್ಕೆ ಒತ್ತಡ ತರದ ಸಂಸದರನ್ನು ತರಾಟೆಗೆ ತೆಗೆದುಕೊಳ್ಳದೇ.. ಹೀಗೆ ಅಸಹಾಯಕ ಜನಸಾಮಾನ್ಯರನ್ನು, ಕಲಾವಿದರನ್ನು ಹಿಂಸಿಸುವುದು ತಪ್ಪು. ಒಬ್ಬ ಕನ್ನಡಿಗನಾಗಿ ಸಹ್ರುದಯ ಕನ್ನಡಿಗರ ಪರವಾಗಿ ಸಿದ್ಧಾರ್ಥ್ ಅವರೇ ಕ್ಷಮಿಸಿ'' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕೈಮುಗಿಯುವ ಎಮೋಜಿಯನ್ನೂ ಹಾಕಿದ್ದಾರೆ.

#ಕಾವೇರಿನಮ್ಮದು .. ಹೌದು .. ನಮ್ಮದೇ.. ಆದರೆ .. ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲಾರದ ಎಲ್ಲಾ ಅಸಮರ್ಥ ರಾಜಕೀಯ ಪಕ್ಷಗಳನ್ನು .. ನಾಯಕರನ್ನು ಪ್ರಶ್ನಿಸದೆ.. ಕೇಂದ್ರ ಸರ್ಕಾರಕ್ಕೆ ಒತ್ತಡ ತರದ ನಾಲಾಯಕ್ ಸಂಸದರನ್ನು ತರಾಟೆಗೆ ತೆಗೆದುಕೊಳ್ಳದೆ.. ಹೀಗೆ ಅಸಹಾಯಕ ಜನಸಾಮಾನ್ಯರನ್ನು.. ಕಲಾವಿದರನ್ನು ಹಿಂಸಿಸುವುದು ತಪ್ಪು ..ಒಬ್ಬ ಕನ್ನಡಿಗನಾಗಿ… https://t.co/O2E2EW6Pd0

— Prakash Raj (@prakashraaj) September 28, 2023 " class="align-text-top noRightClick twitterSection" data=" ">

ಇದನ್ನೂ ಓದಿ: ತಮಿಳು ನಟ ಸಿದ್ಧಾರ್ಥ್​ಗೆ ತಟ್ಟಿದ 'ಕಾವೇರಿ' ಬಿಸಿ.. 'ಚಿಕ್ಕು' ಪ್ರೆಸ್​ಮೀಟ್​ಗೆ ಕನ್ನಡ ಹೋರಾಟಗಾರರ ವಿರೋಧ

ಬೆಂಗಳೂರಿನಲ್ಲಿ ನಿನ್ನೆ ಸಿದ್ಧಾರ್ಥ್ ತಮ್ಮ ಚಿತ್ತ ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದ ವೇಳೆ ಕೆಲ ಕನ್ನಡ ಪರ ಪ್ರತಿಭಟನಾಕಾರರು ಸ್ಥಳಕ್ಕೆ ಆಗಮಿಸಿ, ಘೋಷಣೆಗಳನ್ನು ಕೂಗುವ ಮೂಲಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು. ಹೋರಾಟಗಾರರು ನಟನನ್ನು ಸ್ಥಳದಿಂದ ಹೊರಾಡುವಂತೆ ಒತ್ತಾಯಿಸಿದರು. ಕಾವೇರಿ ಜಲ ವಿವಾದದ ಮಧ್ಯೆ ನಿಮ್ಮ ಚಿತ್ರ ಪ್ರಚಾರಕ್ಕೆ ಸರಿಯಾದ ಸಮಯವಲ್ಲ ಎಂದು ಹೋರಾಟಗಾರರು ತಿಳಿಸಿದರು. ಬಳಿಕ ಸಿದ್ಧಾರ್ಥ್ ಅಲ್ಲಿಂದ ತೆರಳಿದರು.

ಇದನ್ನೂ ಓದಿ: 'ಕಾವೇರಿ'ದ ಬಂದ್: ಸ್ಯಾಂಡಲ್​ವುಡ್​ ನಟ-ನಟಿಯರಿಂದ ಪ್ರತಿಭಟನೆ... ಶಿವಣ್ಣ, ಉಪೇಂದ್ರ, ದರ್ಶನ್, ಶ್ರೀನಾಥ್ ಸೇರಿ ಹಲವರು ಭಾಗಿ

ಕ್ಷಮೆಯಾಚಿಸಿದ ಶಿವಣ್ಣ: ಕಾವೇರಿಗಾಗಿ ಇಂದು ಕರ್ನಾಟಕ ಬಂದ್​ ಆಗಿದೆ. ನಟ ಶಿವ ರಾಜ್​ಕುಮಾರ್ ನೇತೃತ್ವದಲ್ಲಿ ಕನ್ನಡ ಚಿತ್ರರಂಗದಿಂದ ಗುರುರಾಜ್ ಕಲ್ಯಾಣ ಮಂಟಪದಲ್ಲಿ ಹೋರಾಟ ನಡೆಯಿತು. ಸ್ಯಾಂಡಲ್​ವುಡ್​ ಸ್ಟಾರ್ಸ್ ಭಾಗಿ ಆಗಿದ್ದರು. ಈ ವೇಳೆ ಶಿವಣ್ಣ ಕೂಡ ನಟ ಸಿದ್ಧಾರ್ಥ್ ಬಳಿ ಕ್ಷಮೆ ಕೇಳಿದ್ದಾರೆ.

ಕಾವೇರಿ ಕಿಚ್ಚು ಹೆಚ್ಚಾಗಿದೆ. ಹೋರಾಟಗಳು ಮುಂದುವರೆದಿದೆ. ಕನ್ನಡ ತಾರೆಯರು ಸಹ ಕಾವೇರಿಗಾಗಿ ದನಿ ಎತ್ತಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮ ಖಂಡಿಸಿ ಇಂದು ಕರ್ನಾಟಕ ಬಂದ್​​​ ಆಗಿದೆ. ತಮಿಳು ನಟ ಸಿದ್ಧಾರ್ಥ್ ಅವರ ಮೇಲೂ ಕಾವೇರಿ ಕಾವು ತಟ್ಟಿದ್ದು, ಕನ್ನಡಿಗರ ಪರವಾಗಿ ನಟ ಪ್ರಕಾಶ್ ರಾಜ್​ ಕ್ಷಮೆಯಾಚಿಸಿದ್ದಾರೆ.

  • Instead of questioning all the political parties and its leaders for failing to solve this decades old issue.. instead of questioning the useless parliamentarians who are not pressurising the centre to intervene.. Troubling the common man and Artists like this can not be… https://t.co/O2E2EW6Pd0

    — Prakash Raj (@prakashraaj) September 28, 2023 " class="align-text-top noRightClick twitterSection" data=" ">

ಕನ್ನಡಿಗರ ಪರವಾಗಿ ಕ್ಷಮೆಯಾಚಿಸಿದ ಪ್ರಕಾಶ್ ರಾಜ್: ಗುರುವಾರದಂದು ತಮಿಳು ನಟ ಸಿದ್ಧಾರ್ಥ್ ಅವರು ತಮ್ಮ ಚಿತ್ತ (Chithha) ಸಿನಿಮಾ ಪ್ರಮೋಶನ್​ ಸಲುವಾಗಿ ಬೆಂಗಳೂರಿಗೆ ಆಗಮಿಸಿದ್ದರು. ಮಲ್ಲೇಶ್ವರಂನ ಎಸ್​ಆರ್​ವಿ ಥಿಯೇಟರ್​ನಲ್ಲಿ ಸಿನಿಮಾ ಸಂಬಂಧ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಆದ್ರೆ ಅಲ್ಲಿಗೆ ಆಗಮಿಸಿದ ಕನ್ನಡಪರ ಹೋರಾಟಗಾರರು ತಮಿಳು ಸಿನಿಮಾ ಪ್ರೆಸ್​ಮೀಟ್​ಗೆ ವಿರೋಧ ವ್ಯಕ್ತಪಡಿಸಿದ್ದರು.​​ ತಮಿಳು ತಾರೆಯ ಸಿನಿಮಾ ಪ್ರಚಾರ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದ ಹಿನ್ನೆಲೆ, ನಟ ಸಿದ್ಧಾರ್ಥ್‌ ಅವರಲ್ಲಿ ಕನ್ನಡಿಗರ ಪರವಾಗಿ ನಟ, ರಾಜಕಾರಣಿ ಪ್ರಕಾಶ್ ರಾಜ್ ಕ್ಷಮೆಯಾಚಿಸಿದ್ದಾರೆ. ಪ್ರತಿಭಟನಾಕಾರರು ಕಲಾವಿದರನ್ನು ನಿಂದಿಸುವ ಬದಲಾಗಿ ಚುನಾಯಿತ ಅಧಿಕಾರಿಗಳಲ್ಲಿ ದೂರು ಸಲ್ಲಿಸಬೇಕು ಎಂದು ಸಾಮಾಜಿಕ ಜಾಲತಾಣ X (ಹಿಂದಿನ ಟ್ವಿಟರ್​) ನಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಮನವಿ ಮಾಡಿದ್ದಾರೆ.

ಪ್ರಕಾಶ್ ರಾಜ್​ ಟ್ವೀಟ್: ತಮಿಳು ನಟ ಸಿದ್ಧಾರ್ಥ್ ಅವರ ಪ್ರೆಸ್​ಮೀಟ್​​ಗೆ ಸಂಬಂಧಿಸಿದ ವಿಡಿಯೋವನ್ನು ಎಕ್ಸ್​​ನಲ್ಲಿ ಶೇರ್ ಮಾಡಿರುವ ನಟ ಪ್ರಕಾಶ್ ರಾಜ್​, ''ಕಾವೇರಿ ನಮ್ಮದು. ಹೌದು, ನಮ್ಮದೇ. ಆದರೆ, ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲಾರದ ಎಲ್ಲಾ ಅಸಮರ್ಥ ರಾಜಕೀಯ ಪಕ್ಷಗಳನ್ನು, ನಾಯಕರನ್ನು ಪ್ರಶ್ನಿಸದೇ..... ಕೇಂದ್ರ ಸರ್ಕಾರಕ್ಕೆ ಒತ್ತಡ ತರದ ಸಂಸದರನ್ನು ತರಾಟೆಗೆ ತೆಗೆದುಕೊಳ್ಳದೇ.. ಹೀಗೆ ಅಸಹಾಯಕ ಜನಸಾಮಾನ್ಯರನ್ನು, ಕಲಾವಿದರನ್ನು ಹಿಂಸಿಸುವುದು ತಪ್ಪು. ಒಬ್ಬ ಕನ್ನಡಿಗನಾಗಿ ಸಹ್ರುದಯ ಕನ್ನಡಿಗರ ಪರವಾಗಿ ಸಿದ್ಧಾರ್ಥ್ ಅವರೇ ಕ್ಷಮಿಸಿ'' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕೈಮುಗಿಯುವ ಎಮೋಜಿಯನ್ನೂ ಹಾಕಿದ್ದಾರೆ.

  • #ಕಾವೇರಿನಮ್ಮದು .. ಹೌದು .. ನಮ್ಮದೇ.. ಆದರೆ .. ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲಾರದ ಎಲ್ಲಾ ಅಸಮರ್ಥ ರಾಜಕೀಯ ಪಕ್ಷಗಳನ್ನು .. ನಾಯಕರನ್ನು ಪ್ರಶ್ನಿಸದೆ.. ಕೇಂದ್ರ ಸರ್ಕಾರಕ್ಕೆ ಒತ್ತಡ ತರದ ನಾಲಾಯಕ್ ಸಂಸದರನ್ನು ತರಾಟೆಗೆ ತೆಗೆದುಕೊಳ್ಳದೆ.. ಹೀಗೆ ಅಸಹಾಯಕ ಜನಸಾಮಾನ್ಯರನ್ನು.. ಕಲಾವಿದರನ್ನು ಹಿಂಸಿಸುವುದು ತಪ್ಪು ..ಒಬ್ಬ ಕನ್ನಡಿಗನಾಗಿ… https://t.co/O2E2EW6Pd0

    — Prakash Raj (@prakashraaj) September 28, 2023 " class="align-text-top noRightClick twitterSection" data=" ">

ಇದನ್ನೂ ಓದಿ: ತಮಿಳು ನಟ ಸಿದ್ಧಾರ್ಥ್​ಗೆ ತಟ್ಟಿದ 'ಕಾವೇರಿ' ಬಿಸಿ.. 'ಚಿಕ್ಕು' ಪ್ರೆಸ್​ಮೀಟ್​ಗೆ ಕನ್ನಡ ಹೋರಾಟಗಾರರ ವಿರೋಧ

ಬೆಂಗಳೂರಿನಲ್ಲಿ ನಿನ್ನೆ ಸಿದ್ಧಾರ್ಥ್ ತಮ್ಮ ಚಿತ್ತ ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದ ವೇಳೆ ಕೆಲ ಕನ್ನಡ ಪರ ಪ್ರತಿಭಟನಾಕಾರರು ಸ್ಥಳಕ್ಕೆ ಆಗಮಿಸಿ, ಘೋಷಣೆಗಳನ್ನು ಕೂಗುವ ಮೂಲಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು. ಹೋರಾಟಗಾರರು ನಟನನ್ನು ಸ್ಥಳದಿಂದ ಹೊರಾಡುವಂತೆ ಒತ್ತಾಯಿಸಿದರು. ಕಾವೇರಿ ಜಲ ವಿವಾದದ ಮಧ್ಯೆ ನಿಮ್ಮ ಚಿತ್ರ ಪ್ರಚಾರಕ್ಕೆ ಸರಿಯಾದ ಸಮಯವಲ್ಲ ಎಂದು ಹೋರಾಟಗಾರರು ತಿಳಿಸಿದರು. ಬಳಿಕ ಸಿದ್ಧಾರ್ಥ್ ಅಲ್ಲಿಂದ ತೆರಳಿದರು.

ಇದನ್ನೂ ಓದಿ: 'ಕಾವೇರಿ'ದ ಬಂದ್: ಸ್ಯಾಂಡಲ್​ವುಡ್​ ನಟ-ನಟಿಯರಿಂದ ಪ್ರತಿಭಟನೆ... ಶಿವಣ್ಣ, ಉಪೇಂದ್ರ, ದರ್ಶನ್, ಶ್ರೀನಾಥ್ ಸೇರಿ ಹಲವರು ಭಾಗಿ

ಕ್ಷಮೆಯಾಚಿಸಿದ ಶಿವಣ್ಣ: ಕಾವೇರಿಗಾಗಿ ಇಂದು ಕರ್ನಾಟಕ ಬಂದ್​ ಆಗಿದೆ. ನಟ ಶಿವ ರಾಜ್​ಕುಮಾರ್ ನೇತೃತ್ವದಲ್ಲಿ ಕನ್ನಡ ಚಿತ್ರರಂಗದಿಂದ ಗುರುರಾಜ್ ಕಲ್ಯಾಣ ಮಂಟಪದಲ್ಲಿ ಹೋರಾಟ ನಡೆಯಿತು. ಸ್ಯಾಂಡಲ್​ವುಡ್​ ಸ್ಟಾರ್ಸ್ ಭಾಗಿ ಆಗಿದ್ದರು. ಈ ವೇಳೆ ಶಿವಣ್ಣ ಕೂಡ ನಟ ಸಿದ್ಧಾರ್ಥ್ ಬಳಿ ಕ್ಷಮೆ ಕೇಳಿದ್ದಾರೆ.

Last Updated : Sep 29, 2023, 3:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.