ETV Bharat / entertainment

25 ದಿನ ಪೂರೈಸಿದ 'ಡೇರ್ ಡೆವಿಲ್ ಮುಸ್ತಫಾ'...ಚಿತ್ರವನ್ನು ಕೊಂಡಾಡಿದ ಪ್ರಕಾಶ್ ರೈ​ - ಡಾಲಿ ಪಿಕ್ಚರ್ಸ್

ಮೇ 19 ರಂದು ತೆರೆಕಂಡ ಪೂರ್ಣಚಂದ್ರ ತೇಜಸ್ವಿ ಅವರ ಕಥೆಯಾಧಾರಿತ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಬಹುಭಾಷಾ ನಟ ಪ್ರಕಾಶ್​ ರೈ ಕೂಡ ಚಿತ್ರವನ್ನು ಮೆಚ್ಚಿಕೊಂಡು ಸಿನಿಮಾ ಕುರಿತು ಒಂದಿಷ್ಟು ಮಾತುಗಳನ್ನಾಡಿದ್ದಾರೆ.

Dare Devil Mustafa
ಪ್ರಕಾಶ್​ ರೈ ಡೇರ್​ ಡೆವಿಲ್​ ಮುಸ್ತಫಾ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.
author img

By

Published : Jun 13, 2023, 7:11 AM IST

Updated : Jun 13, 2023, 7:58 AM IST

ಡೇರ್ ಡೆವಿಲ್ ಮುಸ್ತಫಾ ಸಿನಿಮಾ ಕುರಿತು ಪ್ರಕಾಶ್ ರೈ​ ಹೇಳಿಕೆ

ಬೆಂಗಳೂರು: ಕೆಲ‌ ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಜೊತೆಗೆ ಸಿನಿ ಪ್ರಿಯರಿಂದ ಹಿಡಿದು ಸಿನಿಮಾ ವಿಮರ್ಶಕರವರೆಗೆ ಅಪಾರ ಮೆಚ್ಚುಗೆ ಪಡೆಯುತ್ತಿರುವ ಚಿತ್ರ ಡೇರ್ ಡೆವಿಲ್ ಮುಸ್ತಾಫಾ. ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ಅರ್ಪಿಸಿದ್ದು, ಕೆ ಆರ್ ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ಚಿತ್ರವನ್ನು ವಿತರಿಸಿದ್ದು, ರಾಜ್ಯ ಅಲ್ಲದೆ ವಿದೇಶಗಳಲ್ಲಿಯೂ ಮೆಚ್ಚುಗೆ ಪಡೆದು ಡೇರ್ ಡೆವಿಲ್ ಮುಸ್ತಾಫ ಒಟ್ಟು ಯಶಸ್ವಿ 25 ದಿನಗಳನ್ನು ಪೂರೈಯಿಸಿದೆ.

ಪೂರ್ಣಚಂದ್ರ ತೇಜಸ್ವಿ ಅವರ ಕಥೆಯಾಧಾರಿತ ಈ ಚಿತ್ರವನ್ನು ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೇ ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳೇ ನಿರ್ಮಿಸಿರುವ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ಬಹುಭಾಷೆ ನಟ ಪ್ರಕಾಶ್ ರೈ ನೋಡಿ ಮೆಚ್ಚಿಕೊಂಡಿದ್ದಾರೆ.

ಹೌದು ನಟ ಪ್ರಕಾಶ್ ರೈ ಡೇರ್ ಡೆವಿಲ್ ಮುಸ್ತಫಾ ಚಿತ್ರದ ಕಥೆಯಿಂದ ಹಿಡಿದು, ಸಂಗೀತ, ನಿರ್ದೇಶನ ಅಲ್ಲದೇ ಯುವ ಕಲಾವಿದರ ಅಭಿನಯದ ಬಗ್ಗೆ ಕೊಂಡಾಡಿದ್ದಾರೆ. ಇನ್ನು ಪೂರ್ಣಚಂದ್ರ ತೇಜಸ್ವಿಯವರು ಹಾಗೂ ಕುವೆಂಪು ಅವರು ನಮಗೆ ಕನ್ನಡದ ಬಗ್ಗೆ ನೀಡಿರುವ ಕೊಡುಗೆಯನ್ನು ಸ್ಮರಿಸಿದರು. ಈ ಸಿನಿಮಾವನ್ನು ನಮ್ಮಂಥ ನಟರುಗಳು ಮಾಡಬೇಕಾದ ಚಿತ್ರ.

ಇಂತಹ ಸಿನಿಮಾವನ್ನು ಯುವ ನಟರು ಅಭಿನಯಿಸುವ‌ ಮೂಲಕ ಸಮಾಜದಲ್ಲಿ ನಾವೆಲ್ಲ ಒಂದೇ ಎಂಬ ಭಾವನೆಯನ್ನು ಮೂಡಿಸಿದ್ದು, ಅವರ ಪ್ರಯತ್ನವನ್ನು ಎಲ್ಲರೂ ಮೆಚ್ಚವಂಥದ್ದು ಎಂದು ಪ್ರಕಾಶ್ ರೈ ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ, ಪೂರ್ಣ ಚಂದ್ರ ತೇಜಸ್ವಿ ಪ್ರಪಂಚದಲ್ಲಿ ಪಯಣಿಸಿರುವ ಪ್ರೇಕ್ಷಕ ಪ್ರಭು, ಇದು ಹೃದಯ ಬೆಸೆಯುವ ಕಥೆ. ಪ್ರತಿಯೊಬ್ಬರು ಇಂತಹ ಚಿತ್ರ ಮಿಸ್ ಮಾಡದೇ ನೋಡಬೇಕು ಎಂದು ಅಭಿಪ್ರಾಯ ಪಟ್ಟರು.

ಇದನ್ನೂ ಓದಿ: ತೇಜಸ್ವಿ ಕಟೌಟ್ ಮುಂದೆ ಕುಣಿದಾಗ ಸಿಕ್ಕ ಸಂತೋಷ ಇನ್ನೆಲ್ಲೂ ಸಿಗಲಿಲ್ಲ: ಡಾಲಿ ಧನಂಜಯ್

ಚಿತ್ರದಲ್ಲಿ ಯುವ ನಟರಾದ ಶಿಶಿರ್‌ ಬೈಕಾಡಿ, ಆದಿತ್ಯ ಅಶ್ರೀ, ಅಭಯ್‌, ಸುಪ್ರೀತ್‌ ಭಾರದ್ವಾಜ್‌, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್‌. ಉಮೇಶ್‌, ಮಂಡ್ಯ ರಮೇಶ್‌, ಮೈಸೂರ್‌ ಆನಂದ್‌, ಸುಂದರ್‌ ವೀಣಾ, ನಾಗಭೂಷಣ್‌, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ.

ರಾಹುಲ್‌ ರಾಯ್‌ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್‌ ಶ್ಯಾಮ್‌ ಸಂಗೀತವಿದೆ. ಸಿನಿಮಾಮರ ಬ್ಯಾನರ್‌ನಲ್ಲಿ ಡೇರ್ ಡೆವಿಲ್ ಮುಸ್ತಾಫಾ ನಿರ್ಮಾಣವಾಗಿದೆ. ಕನ್ನಡಿಗರು ಬಿಗಿದಪ್ಪಿ ಕೊಂಡಾಡುತ್ತಿರುವ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ಕಣ್ತುಂಬಿಕೊಂಡು ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ.‌

ಕಳೆದ ಆರೇಳು ತಿಂಗಳಿನಿಂದ ಥಿಯೇಟರ್​ನಲ್ಲಿ ಯಾವ ಸಿನಿಮಾಗೂ‌ ಸಿಗದ ರೆಸ್ಪಾನ್ಸ್ ಮುಸ್ತಾಫಾನ ಪಾಲಾಗಿದೆ. ಬೆಂಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರು ಸೇರಿದಂತೆ 40 ಸೆಂಟರ್​ಗಳಲ್ಲಿ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಇದನ್ನೂ ಓದಿ: ಕನ್ನಡಿಗರನ್ನು ಚಿತ್ರಮಂದಿರಕ್ಕೆ ಕರೆತರುವಲ್ಲಿ ಯಶ ಕಂಡ 'ಡೇರ್​ಡೆವಿಲ್ ಮುಸ್ತಾಫಾ' ಚಿತ್ರತಂಡ

Last Updated : Jun 13, 2023, 7:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.