ETV Bharat / entertainment

ಬಹುನಿರೀಕ್ಷಿತ 'ವುಲ್ಫ್' ಚಿತ್ರದ ಟೀಸರ್​ ರಿಲೀಸ್​: ಪ್ರಭುದೇವ ಹೊಸ ಲುಕ್​ಗೆ ಫ್ಯಾನ್ಸ್​ ಫಿದಾ! - etv bharat kannada

Wolf teaser: ಇಂಡಿಯನ್​ ಮೈಕಲ್​ ಜಾಕ್ಸನ್ ನಟನೆಯ 'ವುಲ್ಫ್' ಚಿತ್ರದ ಟೀಸರ್​ ಬಿಡುಗಡೆಯಾಗಿದೆ.

wolf
'ವುಲ್ಫ್'
author img

By

Published : Aug 4, 2023, 11:24 AM IST

ಭಾರತೀಯ ಚಿತ್ರರಂಗದ ನಿರ್ದೇಶಕ, ನೃತ್ಯ ನಿರ್ದೇಶಕ, ನರ್ತಕ ಹಾಗೂ ಇಂಡಿಯನ್​ ಮೈಕಲ್​ ಜಾಕ್ಸನ್​ ಅಂತಲೇ ಫೇಮಸ್​ ಆಗಿರುವ ನಟ ಪ್ರಭುದೇವ. ಬಹಳ ವರ್ಷಗಳ ನಂತರ ಮತ್ತೆ ಕನ್ನಡ ಚಿತ್ರಗಳಲ್ಲಿ ನಟಿಸುತ್ತಿರುವ ಪ್ರಭುದೇವ ಅವರು, ಇದೀಗ ಸಂದೇಶ್​ ಪ್ರೊಡಕ್ಷನ್ಸ್​ ಅಡಿಯಲ್ಲಿ 'ವುಲ್ಫ್' ಎಂಬ ಸಿನಿಮಾ ಮಾಡುತ್ತಿರುವುದು ಈಗಾಗಲೇ ಗೊತ್ತಿರುವ ವಿಚಾರ. ಈ ಚಿತ್ರದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ನೋಡುಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ​

  • " class="align-text-top noRightClick twitterSection" data="">

ಡ್ಯಾನ್ಸಿಂಗ್​ ಸ್ಟಾರ್​ ಪ್ರಭುದೇವ, ಅನುಸೂಯ ಭಾರಧ್ವಾಜ್​, ಲಕ್ಷ್ಮೀ ರೈ, ವಸಿಷ್ಠ ಸಿಂಹ, ಅಂಜು ಕುರಿಯನ್​ ಮುಂತಾದ ಖ್ಯಾತ ತಾರೆಯರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 'ವುಲ್ಫ್' ಚಿತ್ರ ತಾಂತ್ರಿಕ ಕೆಲಸಗಳನ್ನು ಮುಗಿಸಿ ಇದೀಗ ಮೊದಲ ಹಂತವಾಗಿ ಚಿತ್ರತಂಡ ಟೀಸರ್​ ಅನ್ನು ಬಿಡುಗಡೆಗೊಳಿಸಿದೆ. ಈ ಮೂಲಕ 'ವುಲ್ಫ್' ಟೀಮ್​ ಪ್ರಚಾರ ಕಾರ್ಯ ಆರಂಭಿಸಿದೆ.

ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ವಿಭಿನ್ನವಾದ ಕಥಾ ಹಂದರ ಇಟ್ಟುಕೊಂಡು 'ವುಲ್ಫ್' ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಇದೇ ತಿಂಗಳ 16 ರಂದು ನಿರ್ಮಾಪಕ ಸಂದೇಶ್​ ನಾಗರಾಜ್​ ಅವರ ಹುಟ್ಟುಹಬ್ಬವಿದೆ. ಈ ದಿನದಂದು ಅಭಿಜಾತ ಕಲಾವಿದ ವಿಜಯ ಸೇತುಪತಿ ಹಾಡಿರುವ ಈ ಚಿತ್ರದ ಮೊದಲ ಲಿರಿಕಲ್​ ವಿಡಿಯೋ ಕೂಡ ಬಿಡುಗಡೆಯಾಗಲಿದೆ. ಈ ಹಾಡಿನ ಮೇಲೆ ಜನರಲ್ಲಿ ಮುಗಿಲೆತ್ತರದ ನಿರೀಕ್ಷೆಯಿದೆ.

ಇದನ್ನೂ ಓದಿ: ಅಕ್ರಮವಾಗಿ ಭಾರತಕ್ಕೆ ಬಂದ ಸೀಮಾ ಹೈದರ್​​ಗೆ ಸಿನಿಮಾ ಚಾನ್ಸ್​.. ಬಾಲಿವುಡ್​ ಚಿತ್ರದಲ್ಲಿ 'ರಾ' ಏಜೆಂಟ್ ಪಾತ್ರ?

'ವುಲ್ಫ್' ಚಿತ್ರವನ್ನು ವಿನು ವೆಂಕಟೇಶ್​ ನಿರ್ದೇಶನ ಮಾಡಿದ್ದಾರೆ. ಖ್ಯಾತ ಛಾಯಾಗ್ರಾಹಕ ಅರುಳ್​ ವಿನ್ಸೆಂಟ್​ ಛಾಯಾಗ್ರಹಣ, ಖ್ಯಾತ ತಾರೆ ಜಯಸುಧಾ ಅವರ ಪುತ್ರ, ಖ್ಯಾತ ಸಂಗೀತ ನಿರ್ದೇಶಕ ಅಮರೀಶ್​ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಪ್ರೊಡಕ್ಷನ್​ ಎಕ್ಸಿಕ್ಯೂಟಿವ್​ ಆಗಿ ಪ್ರಸಾದ್​ ಬಿ ಎನ್​ ಮತ್ತು ಕಾಮರಾಜು ಕಾರ್ಯ ನಿರ್ವಹಿಸಿದ್ದಾರೆ. ಸಂದೇಶ್​ ನಾಗರಾಜ್​ ಅವರು ಸಂದೇಶ್​ ಪ್ರೊಡಕ್ಷನ್ಸ್​ ಅಡಿ ನಿರ್ಮಿಸಿದ್ದಾರೆ. ಈ ಸಂಸ್ಥೆ ನಿರ್ಮಾಣದ 30ನೇ ಚಿತ್ರ ಇದಾಗಿದೆ. 'ವುಲ್ಫ್' ಚಿತ್ರ ಕನ್ನಡ, ತಮಿಳು, ಹಿಂದಿ, ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಪ್ರಭುದೇವ ಅವರು ಬಹುಭಾಷೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಹಿಂದಿ, ತಮಿಳು ಮತ್ತು ತೆಲುಗು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇತ್ತೀಚೆಗೆ ನಿರ್ದೇಶಕರಾಗಿ ಸೂಪರ್‌ ಸ್ಟಾರ್ ಸಲ್ಮಾನ್ ಖಾನ್ ಅವರ ರಾಧೆ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ವಾಂಟೆಡ್ (2009), ರೌಡಿ ರಾಥೋರ್ (2012), ರಾಮಯ್ಯ ವಸ್ತವಯ್ಯ (2013), ಆರ್ ರಾಜ್​ಕುಮಾರ್ (2014) ಸೇರಿದಂತೆ ಮುಂತಾದ ಹಿಂದಿ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ನಿರ್ದೇಶನ ಮತ್ತು ನೃತ್ಯ ಸಂಯೋಜನೆಯ ಜೊತೆಗೆ, ಅವರು ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್​ ಜೊತೆ 'ಕರಟಕ ದಮನಕ' ಸಿನಿಮಾದಲ್ಲಿ ಪ್ರಭುದೇವ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಯೋಗರಾಜ್​ ಭಟ್​ ನಿರ್ದೇಶಿಸುತ್ತಿದ್ದಾರೆ.

ಇದನ್ನೂ ಓದಿ: ರಾಜಮೌಳಿ - ಮಹೇಶ್​ ಬಾಬು ಸಿನಿಮಾ: ಟಾಲಿವುಡ್​​ ಪ್ರಿನ್ಸ್​ ಬರ್ತ್​ಡೇಯಂದು ಅಭಿಮಾನಿಗಳಿಗೆ ಬಿಗ್​ ಸರ್ಪ್ರೈಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.