ETV Bharat / entertainment

ಪ್ರಭಾಸ್​ ಬಿಲ್ಲಾ ರೀ ರಿಲೀಸ್​.. ಅಭಿಮಾನಿಗಳು ಸಿಡಿಸಿದ ಪಟಾಕಿಯಿಂದ ಚಿತ್ರಮಂದಿರಕ್ಕೆ ಬೆಂಕಿ - Prabhas Billa re release

ತಮ್ಮ ಚಿಕ್ಕಪ್ಪ ಕೃಷ್ಣಂ ರಾಜು ಅವರ ನಿಧನದಿಂದಾಗಿ ಪ್ರಭಾಸ್​ ಈ ಬಾರಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದೇ ಇದ್ದರೂ, ತೆಲುಗು ರಾಷ್ಟ್ರಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಅಭಿಮಾನಿಗಳು ಪ್ರಭಾಸ್​ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

Actor Prabhas
ನಟ ಪ್ರಭಾಸ್​
author img

By

Published : Oct 23, 2022, 9:39 PM IST

ಅಮರಾವತಿ(ಆಂಧ್ರಪ್ರದೇಶ): ನಟ ಪ್ರಭಾಸ್ ಅವರ ಸಿನಿಮಾ ಪ್ರದರ್ಶನದ ವೇಳೆ ಅಭಿಮಾನಿಗಳು ಪಟಾಕಿ ಸಿಡಿಸಿದ್ದು, ಭಾನುವಾರ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತಾಡೆಪಲ್ಲಿಗುಡೆಂ ಪಟ್ಟಣದ ಚಿತ್ರಮಂದಿರದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಪ್ರಭಾಸ್​ ಹುಟ್ಟುಹಬ್ಬ ಆಚರಣೆ ಹಿನ್ನೆಲೆ ವೆಂಕಟ್ರಮಣ ಥಿಯೇಟರ್‌ನಲ್ಲಿ ಬಿಲ್ಲ ಚಿತ್ರ ಪ್ರದರ್ಶನದ ವೇಳೆ ಅಭಿಮಾನಿಗಳು ಉತ್ಸಾಹದಿಂದ ಪಟಾಕಿ ಸಿಡಿಸಿದ್ದಾರೆ.

ಈ ವೇಳೆ ಥಿಯೇಟರ್​ನಲ್ಲಿದ್ದ ಸೀಟುಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಜ್ವಾಲೆ ವೇಗವಾಗಿ ಹರಡಿಕೊಂಡ ಕಾರಣ ಪ್ರೇಕ್ಷಕರು ಭಯಭೀತರಾಗಿ ಹೊರಗೆ ಓಡಿದ್ದಾರೆ. ಅದೃಷ್ಟವಶಾತ್​ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಚಿತ್ರ ವೀಕ್ಷಿಸುತ್ತಿದ್ದ ಕೆಲವರ ಸಹಾಯದಿಂದ ಚಿತ್ರಮಂದಿರದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಅಭಿಮಾನಿಗಳು ಸಿಡಿಸಿದ ಪಟಾಕಿಯಿಂದ ಚಿತ್ರಮಂದಿರಕ್ಕೆ ಬೆಂಕಿ

ಪ್ರಭಾಸ್​ ಹಾಗೂ ಇತ್ತೀಚೆಗೆ ನಿಧನರಾದ ಪ್ರಭಾಸ್​ ಅವರ ಚಿಕ್ಕಪ್ಪ, ಹಿರಿಯ ನಟ ಕೃಷ್ಣಂ ರಾಜು ಅಭಿನಯದ ಬಿಲ್ಲಾ ಸಿನಿಮಾ ಪ್ರಭಾಸ್​ ಅವರ ಹುಟ್ಟುಹಬ್ಬದ ದಿನ ಇಂದು ಆಂಧ್ರಪ್ರದೇಶ ಹಾಗೂ ತೆಲಂಗಾಣದ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಿದೆ. ಅನುಷ್ಕಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಸಿನಿಮಾ 2009ರಲ್ಲಿ ಮೊದಲು ಬಿಡುಗಡೆಯಾಗಿತ್ತು. ಈ ಸಿನಿಮಾವನ್ನು ಕೃಷ್ಣಂ ರಾಜು ಅವರು ತಮ್ಮ ಸ್ವಂತ ಬ್ಯಾನರ್​ ಗೋಪಿಕೃಷ್ಣ ಮೂವೀಸ್​ ಅಡಿಯಲ್ಲಿ ನಿರ್ಮಾಣ ಮಾಡಿದ್ದರು.

ತಮ್ಮ ಚಿಕ್ಕಪ್ಪ ಕೃಷ್ಣಂ ರಾಜು ಅವರ ನಿಧನದಿಂದಾಗಿ ಪ್ರಭಾಸ್​ ಈ ಬಾರಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದೇ ಇದ್ದರೂ, ತೆಲುಗು ರಾಷ್ಟ್ರಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಅಭಿಮಾನಿಗಳು ಡಾರ್ಲಿಂಗ್​ ಪ್ರಭಾಸ್​ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಪ್ರಭಾಸ್ ಅವರ ಮುಂಬರುವ ಚಿತ್ರಗಳಾದ ಪ್ರಾಜೆಕ್ಟ್ ಕೆ ಮತ್ತು ಆದಿಪುರುಷ್ ನಿರ್ಮಾಪಕರು ಆಯಾ ಚಿತ್ರಗಳ ವಿಶೇಷ ಪೋಸ್ಟರ್‌ಗಳನ್ನು ರಿಲೀಸ್​ ಮಾಡುವ ಮೂಲಕ ಅಭಿಮಾನಿಗಳಿಗೆ ವಿಸೇಷ ಉಡುಗೊರೆ ನೀಡಿದ್ದಾರೆ. ಆದಿಪುರುಷ ಸಿನಿಮಾ ತಂಡ ಲಾರ್ಡ್​ ರಾಮನಾಗಿರುವ ಪ್ರಭಾಸ್​ ಅವರ ಹೊಸ ಪೋಸ್ಟರ್​ ಅನ್ನು ಬಿಡುಗಡೆ ಮಾಡಿದರೆ, ಪ್ರಾಜೆಕ್ಟ್ ಕೆ ಚಿತ್ರತಂಡ ಟೀಸರ್ ಪೋಸ್ಟರ್ ಅನ್ನು ಅನಾವರಣಗೊಳಿಸುವ ಮೂಲಕ ಶುಭಾಶಯ ಕೋರಿದೆ. ಪ್ರಶಾಂತ್​ ನೀಲ್​ ನಿರ್ದೇಶನದ ಸಲಾರ್​ ಸಿನಿಮಾದಲ್ಲೂ ಪ್ರಭಾಸ್​ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: ಮೊದಲ ದಿನವೇ ಬಾಕ್ಸ್ ಆಫೀಸ್​ನಲ್ಲಿ ಹೆಡ್​ ಬುಷ್​ ಕಮಾಲ್..​ ಅಭಿಮಾನಿಗಳಿಗೆ ಡಾಲಿ ಥ್ಯಾಂಕ್ಸ್​

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.