ETV Bharat / entertainment

ಸರ್ವರಿಗೂ ಸಮಪಾಲು, ಸಮಬಾಳು ಸಂದೇಶ ಸಾರಿದ ತೋತಾಪುರಿ 2: ಸಿನಿಮಾ ಮೆಚ್ಚಿದ ಪ್ರೇಕ್ಷಕರು - jaggesh

ತೋತಾಪುರಿ 2 ಸಿನಿಮಾ ಉತ್ತಮ ಪ್ರತಿಕ್ರಿಯೆ ಸ್ವೀಕರಿಸುತ್ತಿದೆ.

Totapuri 2 movie
ತೋತಾಪುರಿ 2
author img

By ETV Bharat Karnataka Team

Published : Sep 30, 2023, 7:00 PM IST

ತೋತಾಪುರಿ 2 ಸಿನಿಮಾದ ದೃಶ್ಯ

ಜಗತ್ತೇ ಒಂದು ಮನೆ, ನಾವೆಲ್ಲ ಒಂದೇ ಸೂರಿನಡಿ ಬದುಕುತ್ತಿರುವವರು ಎನ್ನುವ ಭಾವೈಕ್ಯತೆಯ ಸಂದೇಶವನ್ನು ಹೊತ್ತು ತಂದಿದ್ದ ತೋತಾಪುರಿ ಸಿನಿಮಾ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದು ಯಶಸ್ವಿಯಾಗಿತ್ತು. ಇದರ ಸೀಕ್ವೆಲ್​ - ತೋತಾಪುರಿ 2 ಸಿನಿಮಾ ಇದೇ ಸೆ. 28ರಂದು‌ ರಾಜ್ಯಾದ್ಯಂತ ಬಿಡುಗಡೆ ಆಗಿ‌ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.

ಚಿತ್ರದಲ್ಲಿ ಒಂದು ಅದ್ಭುತ ಸಂದೇಶವಿದೆ. ಜಾತಿ-ಧರ್ಮಕ್ಕೂ ಹೆಚ್ಚಾಗಿ ಮನುಷ್ಯ ಸಂಬಂಧವೇ ಬಹಳ ಮುಖ್ಯ ಎಂದು ಹೇಳಲಾಗಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಇರಬೇಕು ಎಂಬ ಸಂದೇಶವಿದೆ. ಒಂದು ಸನ್ನಿವೇಶದಲ್ಲಿ ಕೆಳವರ್ಗದ ನಂಜಮ್ಮನನ್ನ ದೇವಸ್ಥಾನದ ಒಳಗೆ ಬಿಡಲು ಮೇಲು ವರ್ಗದವರು ವಿರೋಧ ವ್ಯಕ್ತಪಡಿಸುತ್ತಾರೆ. ಆಗ ಜಗ್ಗೇಶ್ ಸಂವಿಧಾನ ಶಿಲ್ಪಿ ಅಂಬೇಡ್ಕರ್​ ಪ್ರತಿಮೆ ಮುಂದೆ ನಿಂತು ಸಾಯಬ್ರೇ ಸಂವಿಧಾನವನ್ನು ಬಹಳ‌ ಹೆಮ್ಮೆಯಿಂದ ಬರೆದಿದ್ದೀರ. ಆಗ ಜಾತಿ ಅಂದ್ರೆ ಗಂಡು ಹೆಣ್ಣು ಅಷ್ಟೇ ಅಂತ ಬರೆದಿದ್ದರೆ, ಇತಿಹಾಸ ಸೃಷ್ಟಿ ಮಾಡುಬಹುದಿತ್ತು ಅಲ್ವಾ ಅಂತಾ ಜಗ್ಗೇಶ್ ಅವರು ಅಂಬೇಡ್ಕರ್ ಪ್ರತಿಮೆ ಬಳಿ ಪ್ರಶ್ನೆ ಕೇಳುತ್ತಾರೆ. ಈ ಒಂದು ಸನ್ನಿವೇಶ ನೋಡುಗರ‌ನ್ನು ಭಾವುಕರನ್ನಾಗಿಸಿದೆ.

ಚಿತ್ರದಲ್ಲಿ ಈರೇಗೌಡನಾಗಿ ಜಗ್ಗೇಶ್ ಕಾಣಿಸಿಕೊಂಡಿದ್ದಾರೆ. ಮುಸ್ಲಿಂ ಹುಡುಗಿ ಶಕೀಲ ಬಾನು ಪಾತ್ರದಲ್ಲಿ ಅದಿತಿ ಪ್ರಭುದೇವ ಗಮನ‌ ಸೆಳೆಯುತ್ತಾರೆ. ಚಿತ್ರದ ಕೊನೆಗೆ ನಾರಾಯಣ್‍ ಪಿಳ್ಳೈ ಎಂಬ ಪಾತ್ರದಲ್ಲಿ ಧನಂಜಯ್ ಆಗಮನವಾಗುತ್ತೆ. ನಾರಾಯಣ್‍ ಪಿಳ್ಳೈ ಮತ್ತು ವಿಕ್ಟೋರಿಯಾ ಪಾತ್ರಧಾರಿ ಸುಮನ್ ರಂಗನಾಥ್ ಅವರ ಪ್ರೇಮಕಥೆಯೂ ಸಿನಿಮಾದಲ್ಲಿ ಇದೆ. ಜಾತಿ ಸಂಘರ್ಷಗಳ ಮಧ್ಯೆ ಈರೇಗೌಡ ಮತ್ತು ಶಕೀಲ ಬಾನು ಒಂದಾಗುವ ಮೂಲಕ ಜೋಡಿಯ ಪ್ರೇಮಕಥೆ ಸುಖಾಂತ್ಯವಾಗುತ್ತದೆ. ನಾನು,‌ ನನ್ನದು ಅಂತ ಹೇಳುವ ಸಮಾಜದಲ್ಲಿ ತೋತಾಪುರಿ 2 ಚಿತ್ರ ಹಾಸ್ಯದ ಮೂಲಕ ಜನರ ಪರಿವರ್ತನೆಗೆ ಕಾರಣವಾಗಿದೆ ಎಂಬುದು ಸಿನಿಮಾ ವೀಕ್ಷಿಸಿದರವರ ಪೈಕಿ ಹಲವರ ಅಭಿಪ್ರಾಯ.

ಇದನ್ನೂ ಓದಿ: ಮಾಫಿಯಾ: ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮುಗಿಸಿದ ಅದಿತಿ ಪ್ರಭುದೇವ - ನವೆಂಬರ್ ಕೊನೆಗೆ ಸಿನಿಮಾ ಬಿಡುಗಡೆ

ವಿಜಯ್ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಚಿತ್ರದಲ್ಲಿ ಜಗ್ಗೇಶ್, ಅದಿತಿ ಪ್ರಭುದೇವ, ಧನಜಂಯ್ ಹಾಗೂ ಸುಮನ್ ರಂಗನಾಥ್ ಅಲ್ಲದೇ ದತ್ತಣ್ಣ, ವೀಣಾ ಸುಂದರ್, ಹೇಮಾದತ್‌ ತಮ್ಮ ಪಾತ್ರಗಳಲ್ಲಿ ಮಿಂಚಿದ್ದಾರೆ. ಅರುಣ್ ಆಂಡ್ರ್ಯೂ ಸಂಗೀತ, ನಿರಂಜನ್ ಬಾಬು ಕ್ಯಾಮರಾ ಕೈ ಚಳಕ ತೋತಾಪುರಿ 2 ಚಿತ್ರದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಗೋವಿಂದಾಯ ನಮಃ, ಶ್ರಾವಣಿ ಸುಬ್ರಮಣ್ಯ, ಶಿವಲಿಂಗ ಅಂತಹ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿರೋ ನಿರ್ಮಾಪಕ ಕೆ ಎ ಸುರೇಶ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸದ್ಯ ಕಾಮಿಡಿ ಜೊತೆಗೆ ಸಂದೇಶವನ್ನ ಒಳಗೊಂಡಿರುವ ತೋತಾಪುರಿ 2 ಸಿನಿಮಾಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಇದನ್ನೂ ಓದಿ: ಕಪ್ಪೆರಾಗ ಸಾಕ್ಷ್ಯಚಿತ್ರಕ್ಕೆ ಗ್ರೀನ್​ ಆಸ್ಕರ್​ ಪ್ರಶಸ್ತಿ: ಅಭಿನಂದನೆ ತಿಳಿಸಿದ ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.