ಈ ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಮಿಂಚಬೇಕು ಅನ್ನೋದು ಅದೆಷ್ಟೊ ಹೊಸ ಪ್ರತಿಭೆಗಳ ಕನಸಾಗಿರುತ್ತೆ. ಈಗ ಇಂತಹದ್ದೇ ಕನಸು ಪರ್ಸೋನಾ ಮಿಸೆಸ್ ಇಂಡಿಯಾ 2022ರ ವಿಜೇತೆಯಾದ ಹೇಮಾ ನಿರಂಜನ್ ಅವರದ್ದು. ಇತ್ತೀಚೆಗೆ ನಡೆದ ಪ್ರತಿಷ್ಠಿತ ಪರ್ಸೋನಾ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ 33 ಜನರನ್ನು ಹಿಂದಿಕ್ಕೆ ಹೇಮಾ ನಿರಂಜನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಹೊಳೆನರಸೀಪುರದ ಸಾಂಪ್ರದಾಯಿಕ ಮನೆತನದಲ್ಲಿ ಬೆಳೆದ ನಾನು ವಿವಾಹವಾದ ನಂತರ ಪತಿಯ ಸಹಕಾರದಿಂದ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಶಿಕ್ಷಕರಾಗಿದ್ದ ತಂದೆ ಈ ರೀತಿ ಫ್ಯಾಷನ್ ಶೋಗಳ ಬಗ್ಗೆ ಅಷ್ಟು ಬೆಂಬಲ ನೀಡುತ್ತಿರಲಿಲ್ಲ. ಆದರೆ ಇದು ನನ್ನ ಕನಸಾಗಿತ್ತು ಎಂದು ಹೇಮಾ ನಿರಂಜನ್ ಹೇಳುತ್ತಾರೆ.
ಪರ್ಸೋನಾ ಮಿಸೆಸ್ ಇಂಡಿಯಾ ಸ್ಪರ್ಧೆಗೆ ಸೌದರ್ಯ ಒಂದೇ ಪರಿಗಣನೆ ಆಗಲ್ಲ. ವಿವಿಧ ರೀತಿಯ ಪರೀಕ್ಷೆಗಳನ್ನು ಈ ಸ್ಪರ್ಧೆಯಲ್ಲಿ ಎದುರಿಸಬೇಕಾಗುತ್ತದೆ. ಇದಕ್ಕಾಗಿ ಬೇರೆ ಬೇರೆ ರೀತಿಯಲ್ಲಿ ತಯಾರಿ ನಡೆಸಿದ್ದೇನೆ. ಈ ಸ್ಪರ್ಧೆಗಾಗಿ ಆರು ಕೆಜಿ ದೇಹದ ತೂಕವನ್ನು ಇಳಿಸಿದ್ದೇನೆ ಎಂದರು.
ಮುಂದಿನ ಕನಸುಗಳ ಬಗ್ಗೆ ಮಾತನಾಡಿದ ಅವರು, ಸಿನಿಮಾರಂಗದಲ್ಲಿ ಅವಕಾಶ ಸಿಕ್ಕರೆ ನಟಿಸುವ ಆಸೆ ಇದೆ. ಕಿಚ್ಚ ಸುದೀಪ್ ನನ್ನ ಇಷ್ಟದ ಹೀರೋ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಬೇಕು ಎಂಬ ಆಸೆ ಬಹುದಿನಗಳಿಂದ ಇದೆ ಎಂದರು.
ಇದನ್ನೂ ಓದಿ : ದೇವರ ರೂಪದಲ್ಲಿ ಕೋಟ್ಯಾಂತರ ಅಭಿಮಾನಿಗಳಿಗೆ ದರ್ಶನ ಕೊಟ್ಟ ಪವರ್ ಸ್ಟಾರ್