ETV Bharat / entertainment

ಸಾವಿರ ಕೋಟಿ ಸನಿಹದಲ್ಲಿ ಪಠಾಣ್..​ ಚಿತ್ರತಂಡದಿಂದ ಪ್ರೇಕ್ಷಕರಿಗೆ ಭರ್ಜರಿ ಆಫರ್​ - ಪಠಾಣ್ ಲೇಟೆಸ್ಟ್ ನ್ಯೂಸ್

ಪಠಾಣ್ ಟಿಕೆಟ್​ ದರ ಕಡಿಮೆ ಮಾಡಲಾಗಿದೆ. 110 ರೂಪಾಯಿಗೆ ಪಠಾಣ್​​ ಟಿಕೆಟ್‌ ಖರೀದಿಸುವ ಮೂಲಕ ಈ ಶುಕ್ರವಾರ ಆಚರಿಸೋಣ ಎಂದು ಚಿತ್ರ ತಯಾರಕರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

Pathaan ticket price
ಪಠಾಣ್ ಟಿಕೆಟ್​ ಬೆಲೆ
author img

By

Published : Feb 16, 2023, 12:39 PM IST

Updated : Feb 16, 2023, 12:54 PM IST

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಆಕ್ಷನ್​​ ಅವತಾರದ ಬ್ಲಾಕ್ ಬಸ್ಟರ್ ಚಿತ್ರ ಪಠಾಣ್ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. 21 ದಿನಗಳಲ್ಲಿ ಚಿತ್ರ ವಿಶ್ವದಾದ್ಯಂತ 963 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಭಾರತದಲ್ಲಿ 600 ಕೋಟಿ, ವಿದೇಶಗಳಲ್ಲಿ 363 ಕೋಟಿ ರೂಪಾಯಿ ಗಳಿಸಿದ್ದು, 1,000 ಕೋಟಿ ರೂಪಾಯಿ ಗಡಿಯಲ್ಲಿದೆ.

ಇನ್ನೂ ಥಿಯೇಟರ್‌ಗಳಲ್ಲಿ 'ಪಠಾಣ್' ಸಿನಿಮಾ ನೋಡದ ಶಾರುಖ್ ಖಾನ್ ಅಭಿಮಾನಿಗಳಿಗೆ ಮತ್ತು ಈ ಚಿತ್ರವನ್ನು ಥಿಯೇಟರ್‌ನಲ್ಲೇ ನೋಡಬೇಕೆಂದು ಬಯಸುವ ಸಿನಿ ಪ್ರಿಯರಿಗೆ ಚಿತ್ರತಂಡ ಗುಡ್ ಕೊಟ್ಟಿದೆ. ಚಿತ್ರದ ಟಿಕೆಟ್ ದರವನ್ನು ಇಳಿಕೆ ಮಾಡುವ ಮೂಲಕ ಅಭಿಮಾನಿಗಳ ಮೊಗದಲ್ಲಿ ಸಂತಸ ತರಿಸಿದ್ದಾರೆ ಚಿತ್ರದ ನಿರ್ಮಾಪಕರು.

ಪಠಾಣ್​ ನಿರ್ಮಾಪಕರು ಸಾಮಾಜಿಕ ಜಾಲತಾಣದಲ್ಲಿ ಪ್ರೇಕ್ಷಕರೊಂದಿಗೆ ಒಳ್ಳೆಯ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಯಶ್ ರಾಜ್ ಬ್ಯಾನರ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್, ಟ್ವಿಟರ್​​ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, 'ಪಠಾಣ್ ಡೇ ಇನ್‌ಕಮಿಂಗ್, ಪಠಾಣ್ ರಾಷ್ಟ್ರೀಯ ಬಾಕ್ಸ್ ಆಫೀಸ್‌ನಲ್ಲಿ ರೂ 500 ಕೋಟಿ ರೂ. ದಾಟಿದೆ. PVR, INOX ಸೇರಿದಂತೆ ಇತರೆ ಎಲ್ಲಾ ಚಿತ್ರಮಂದಿರಗಳಲ್ಲಿ ಕೇವಲ 110 ರೂಪಾಯಿಗೆ ಪಠಾಣ್​​ ಟಿಕೆಟ್‌ಗಳನ್ನು ಖರೀದಿಸುವ ಮೂಲಕ ಈ ಶುಕ್ರವಾರವನ್ನು ಆಚರಿಸೋಣ' ಎಂದು ಬರೆದಿದೆ.

ಬಾಲಿವುಡ್​ ಬಹುಬೇಡಿಕೆ ನಟರಾದ ಶಾರುಖ್​ ಖಾನ್​, ದೀಪಿಕಾ ಪಡಿಕೋಣೆ, ಜಾನ್​ ಅಬ್ರಹಾಂ ನಟನೆಯ ಪಠಾಣ್ ಚಿತ್ರ ಜನವರಿ 25 ರಂದು ತೆರೆ ಕಂಡಿತು. ಭಾರತದಲ್ಲಿ 600 ಕೋಟಿ, ವಿದೇಶಗಳಲ್ಲಿ 363 ಕೋಟಿ ರೂಪಾಯಿ ಸೇರಿ 21 ದಿನಗಳಲ್ಲಿ ಪಠಾಣ್​​ ವಿಶ್ವದಾದ್ಯಂತ 963 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ವಿವಾದಗಳ ನಡುವೆ ತೆರೆಕಂಡ ಸಿನಿಮಾ ಗಳಿಕೆಯಲ್ಲಿ ದಾಖಲೆಗಳನ್ನು ಬ್ರೇಕ್​ ಮಾಡಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಬಿಡುಗಡೆಗೂ ಮುನ್ನ ಬೇಶರಂ ರಂಗ್​ ಹಾಡಿನ ವಿಚಾರವಾಗಿ ಸಾಕಷ್ಟು ಟೀಕೆಗೊಳಗಾಗಿತ್ತು. ಆದ್ರೆ ಚಿತ್ರ ಕಂಡ ಯಶಸ್ಸು ಮಾತ್ರ ಅಭೂತ ಪೂರ್ವ.

ಇದನ್ನೂ ಓದಿ: ರಿಷಬ್​ ಶೆಟ್ಟಿಗೆ ದಾದಾ ಸಾಹೇಬ್​ ಫಾಲ್ಕೆ ಚಿತ್ರೋತ್ಸವ ಪ್ರಶಸ್ತಿ

ಸುಮಾರು ಮೂರು ದಶಕಕ್ಕೂ ಹೆಚ್ಚು ಕಾಲ ಸಿನಿರಂಗದಲ್ಲಿ ಗುರುತಿಸಿಕೊಂಡಿರುವ ಶಾರುಖ್​ ಖಾನ್​​ ರೊಮ್ಯಾಂಟಿಕ್ ಹೀರೋ ಎಂದೇ ಖ್ಯಾತಿ ಗಳಿಸಿದ್ದರು. ಆ್ಯಕ್ಷನ್​ ಹೀರೋ ಆಗಬೇಕೆಂದು ಕನಸು ಹೊತ್ತು ಬಂದ ಇವರು ಆಗಿದ್ದು ಮಾತ್ರ ಲವರ್​ ಬಾಯ್​. ರೊಮ್ಯಾಂಟಿಕ್ ಹೀರೋ ಎಂದೇ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆದ್ರೆ ನಟ ಶಾರುಖ್ ಖಾನ್ ಈ ಪಠಾಣ್‌ ಚಿತ್ರದಲ್ಲಿ ಸಂಪೂರ್ಣ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ರಗಡ್​ ಲುಕ್​​ ಅನ್ನು ಪ್ರೇಕ್ಷಕರು ಸಹ ಮೆಚ್ಚಿಕೊಂಡಿದ್ದಾರೆ. ಶಾರುಖ್​ ಖಾನ್​ ಹಾಗೂ ಜಾನ್ ಅಬ್ರಹಾಂ ನಡುವೆ ನಡೆಯುವ ಸಾಹಸಮಯ ದೃಶ್ಯಗಳು ಮೈನವಿರೇಳಿಸುವಂತಿದೆ.

ಇದನ್ನೂ ಓದಿ: "ನಾನು ಅವರಿಂದ ಕಲಿಯಬೇಕಿದೆ" ಎಂದು ಕಿಂಗ್​ ಖಾನ್​ ಹೇಳಿದ್ದು ಯಾರ ಬಗ್ಗೆ?

ಬಾಯ್ಕಾಟ್​​ ಬಿಸಿ ನಡುವೆ ಪಠಾಣ್​ ಬಿಡುಗಡೆ ಆಯಿತು. ಮೊದಲೆರಡು ದಿನ ಕೂಡ ಹಲವೆಡೆ ಪ್ರತಿಭಟನೆಗಳು ಜೋರಾಗಿಯೇ ಇತ್ತು. ಆದ್ರೆ ಚಿತ್ರದ ಕಲೆಕ್ಷನ್ ಮಾತ್ರ ಎಲ್ಲರ ಹುಬ್ಬೇರುವಂತೆ ಮಾಡಿದೆ. ಈಗಾಗಲೇ 963 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿರುವ ಪಠಾಣ್​ 1,000 ಕೋಟಿಯತ್ತ ಚಿತ್ತ ಹರಿಸಿದೆ.

Last Updated : Feb 16, 2023, 12:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.