ETV Bharat / entertainment

ಪಠಾಣ್​: ಥಿಯೇಟರ್​ನಲ್ಲಿ ಸಿಗದ ದೃಶ್ಯಗಳು ಒಟಿಟಿಯಲ್ಲಿ - Pathaan latest news

ಏಪ್ರಿಲ್ 24 ರಂದು ಒಟಿಟಿಯಲ್ಲಿ ಪಠಾಣ್ ಪ್ರಸಾರವಾಗಲಿದೆ.

Pathaan on OTT
ಪಠಾಣ್ ಒಟಿಟಿ
author img

By

Published : Mar 10, 2023, 5:42 PM IST

ವಿವಾದಗಳ ನಡುವೆಯೇ ತೆರೆ ಕಂಡ ಬಾಲಿವುಡ್ ಸಿನಿಮಾ ಪಠಾಣ್​ ಕಂಡ ಯಶಸ್ಸು ಅಭೂತಪೂರ್ವ. ಬಾಲಿವುಡ್​ ಬಹುಬೇಡಿಕೆ ತಾರೆಯರಾದ ಶಾರುಖ್​ ಖಾನ್​​, ದಿಪೀಕಾ ಪಡುಕೋಣೆ, ಜಾನ್​ ಅಬ್ರಹಾಂ ನಟನೆಯ ಈ ಸೂಪರ್​ ಹಿಟ್​ ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿ ಭರ್ಜರಿ ಗೆಲುವು ಕಂಡಿದ್ದಾರೆ. ​

'ಪಠಾಣ್' ಚಿತ್ರ ಆರು ವಾರಗಳಲ್ಲಿ ವಿಶ್ವದಾದ್ಯಂತ 1,000 ಕೋಟಿ ರೂ.ಗೂ ಹೆಚ್ಚು ವ್ಯವಹಾರ ನಡೆಸಿದೆ. ಇನ್ನೂ 'ಪಠಾಣ್' ಚಿತ್ರಮಂದಿರಗಳಲ್ಲಿ ಓಡುತ್ತಿದೆ. ಶೀಘ್ರದಲ್ಲಿಯೇ ಪ್ರತಿ ಮನೆಯಲ್ಲೂ ಪ್ರಸಾರವಾಗಲಿದೆ ಪಠಾಣ್​. ಹೌದು, 'ಪಠಾಣ್' ಏಪ್ರಿಲ್ 24 ರಂದು ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಇದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಆದ್ರೀಗ 'ಪಠಾಣ್' ಕುರಿತು ಹೊಸ ಅಪ್‌ಡೇಟ್ ಒಂದು ಬಂದಿದೆ. ಥಿಯೇಟರ್‌ಗಳಲ್ಲಿ ಪ್ರದರ್ಶನಗೊಂಡ 'ಪಠಾಣ್' ಅನ್ನು ಒಟಿಟಿನಲ್ಲಿ ತೋರಿಸಲಾಗುವುದಿಲ್ಲ. ಬದಲಿಗೆ ಚಿತ್ರಮಂದಿರಗಳಲ್ಲಿ ನೋಡದ ದೃಶ್ಯಗಳನ್ನು OTTನಲ್ಲಿ ತೋರಿಸಲಾಗುತ್ತದೆ.

ಅಮೆಜಾನ್ ಪ್ರೈಮ್‌ನಲ್ಲಿ ಪಠಾಣ್​: 'ಪಠಾಣ್' ಏಪ್ರಿಲ್ 24ರಂದು ಒಟಿಟಿ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್‌ನಲ್ಲಿ ರಿಲೀಸ್ ಆಗಲಿದೆ. ಆದರೆ ಅದಕ್ಕೂ ಮೊದಲು ಚಿತ್ರ ತಯಾರಕರು ದೊಡ್ಡ ಘೋಷಣೆ ಮಾಡಿದ್ದಾರೆ. 'ಪಠಾಣ್' ಚಿತ್ರದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಈ ಮಾಹಿತಿ ನೀಡಿದ್ದಾರೆ. ಹಾಗಾಗಿ ಥಿಯೇಟರ್‌ನಲ್ಲಿ ಚಿತ್ರವನ್ನು ವೀಕ್ಷಿಸಿರುವ ಜನರು ಕೂಡ 'ಪಠಾಣ್' ಅನ್ನು ಒಟಿಟಿಯಲ್ಲೂ ನೋಡಲಿದ್ದಾರೆ.

ಪಠಾಣ್ ವಿಸ್ತೃತ ಆವೃತ್ತಿ: ವರದಿಗಳ ಪ್ರಕಾರ, ಸಿದ್ಧಾರ್ಥ್ ಆನಂದ್ ಇತ್ತೀಚಿನ ಸಂದರ್ಶನದಲ್ಲಿ ಪಠಾಣ್‌ನ ಒಟಿಟಿ ಆವೃತ್ತಿಯು ಇನ್ನಷ್ಟು ಯಶಸ್ವಿಯಾಗಲಿದೆ ಎಂದು ಸುಳಿವು ನೀಡಿದ್ದಾರೆ. ಒಟಿಟಿಯಲ್ಲಿ ಪಠಾಣ್‌ನ ವಿಸ್ತೃತ ಆವೃತ್ತಿ ಲಭ್ಯವಾಗಲಿದೆ, ಅಂದರೆ ಚಲನಚಿತ್ರವನ್ನು ಹೆಚ್ಚು ಸಮಯ ತೋರಿಸಲಾಗುತ್ತದೆ, ಇದರಲ್ಲಿ ಹೆಚ್ಚು ಸಾಹಸ ದೃಶ್ಯಗಳನ್ನು ನೋಡಬಹುದು ಎಂದು ತಿಳಿಸಿದ್ದಾರೆ.

ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಎಸ್​ಆರ್​ಕೆ: ಇನ್ನೂ ಬಾಲಿವುಡ್ ಕಿಂಗ್​ ಖಾನ್​ ಶಾರುಖ್ ತಮ್ಮ ಆ್ಯಕ್ಷನ್ ಥ್ರಿಲ್ಲರ್ ಪಠಾಣ್​ ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಚಿತ್ರವು ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿದೆ. ಈ ಹಿನ್ನೆಲೆ ಇತ್ತೀಚೆಗಷ್ಟೇ ಶಾರುಖ್​ ಖಾನ್​ ಅವರು ಸಾಮಾಜಿಕ ಜಾಲತಾಣದ ಮೂಲಕ ಚಲನಚಿತ್ರಕ್ಕೆ ಬೆಂಬಲಿಸಿದವರಿಗೆ ಧನ್ಯವಾದ ಸಲ್ಲಿಸಿದ್ದರು.

ಇದನ್ನೂ ಓದಿ: ಆಸ್ಕರ್​​ ವೇದಿಕೆಯಲ್ಲಿ RRR​ ಭಾರತವನ್ನು ಹೃದಯದಲ್ಲಿಟ್ಟುಕೊಂಡು ಹೆಜ್ಜೆ ಹಾಕಲಿದೆ: ಜೂ.ಎನ್​​ಟಿಆರ್​

"ಇದು ವ್ಯವಹಾರ ಅಲ್ಲ, ಇದು ಖಂಡಿತವಾಗಿಯೂ ವೈಯಕ್ತಿಕ ವಿಷಯ" ಎಂದು ಟ್ವೀಟ್ ಮಾಡಿದ್ದ ನಟ ಶಾರುಖ್​, ಪ್ರೇಕ್ಷಕರನ್ನು ಮನೋರಂಜಿಸುವುದು ತಮ್ಮ (ಕಲಾವಿದರ) ಕೆಲಸ ಎಂದು ತಿಳಿಸಿದ್ದರು. ವೈಯಕ್ತಿಕವಾಗಿ ತೆಗೆದುಕೊಳ್ಳದಿದ್ದರೆ, ಅದು ಕೆಲಸ ಮಾಡುವುದಿಲ್ಲ ಎಂದೂ ಸಹ ಹೇಳಿದ್ದರು. ಪಠಾಣ್‌ಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ, ವಿಶ್ವಾಸ ಇನ್ನೂ ಜೀವಂತವಾಗಿದೆ ಎಂದು ಸಾಬೀತುಪಡಿಸಿರುವ ತಮ್ಮ ಚಿತ್ರತಂಡಕ್ಕೆ ಧನ್ಯವಾದ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: ತೇಜ್​​ರಾನ್​ ಬ್ರೇಕ್​​ ಅಪ್​ ವದಂತಿಗೆ ಫುಲ್​ ಸ್ಟಾಪ್​ ಇಟ್ಟ ನಟಿ ತೇಜಸ್ವಿ ಪ್ರಕಾಶ್​

ಶಾರುಖ್​ ಅವರ ಮುಂದಿನ ಚಿತ್ರ ಜವಾನ್​ ಈ ಸಾಲಿನಲ್ಲೇ ಬಿಡುಗಡೆ ಆಗಲಿದೆ. ಪಠಾಣ್​ ಯಶಸ್ಸಿನ ಬಳಿಕ ಅಭಿಮಾನಿಗಳು ಈ ಚಿತ್ರದ ಮೇಲೂ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜವಾನ್ ಶೂಟಿಂಗ್​​ ಅಂತಿಮ ಘಟ್ಟಕ್ಕೆ ತಲುಪಿದೆ. ಇತ್ತೀಚೆಗಷ್ಟೇ ಮುಂಬೈನಲ್ಲಿ 9 ದಿನಗಳ ಶೂಟಿಂಗ್​ ನಡೆದಿದೆ. ಮುಂಬೈನಲ್ಲಿ ನಡೆದ ಚಿತ್ರೀಕರಣದಲ್ಲಿ, ಶಾರುಖ್​​ ಖಾನ್ ಮತ್ತು ನಯನತಾರಾ ಭಾಗಿಯಾಗಿದ್ದು, ಮುಂದಿನ ಹಂತದ ಶೂಟಿಂಗ್​ ರಾಜಸ್ಥಾನದಲ್ಲಿ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.