ಶಾರುಖ್ ಖಾನ್, ನಟಿ ದೀಪಿಕಾ ಪಡುಕೋಣೆ, ನಟ ಜಾನ್ ಅಬ್ರಹಾಂ ಅಭಿನಯದ ಪಠಾಣ್ ಸಿನಿಮಾ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಜೊತೆಗೆ ಥಿಯೇಟರ್ನ ಹೊರಗೂ ಪ್ರತಿಭಟನೆಯ ಧೂಳೆದ್ದಿದೆ. ನಾಲ್ಕು ವರ್ಷಗಳ ಬಳಿಕ ಆ್ಯಕ್ಷನ್ ಅವತಾರದಲ್ಲಿ ಬಾಲಿವುಡ್ ಕಿಂಗ್ ಖಾನ್ ಅಬ್ಬರಿಸಿದ್ದು ಅಭಿಮಾನಿಗಳು ಮೆಚ್ಚುಗೆಯ ಮಳೆ ಸುರಿಸಿದ್ದಾರೆ. ನಿರೀಕ್ಷೆಯಂತೆ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುವಲ್ಲಿ ಪಠಾಣ್ ಯಶಸ್ವಿ ಆಗಿದೆ.
-
#Pathaan Day 1 India 🇮🇳 opening ₹ 54 Crs Nett..
— Ramesh Bala (@rameshlaus) January 26, 2023 " class="align-text-top noRightClick twitterSection" data="
A new All-time record.. 🔥
Early estimates..
">#Pathaan Day 1 India 🇮🇳 opening ₹ 54 Crs Nett..
— Ramesh Bala (@rameshlaus) January 26, 2023
A new All-time record.. 🔥
Early estimates..#Pathaan Day 1 India 🇮🇳 opening ₹ 54 Crs Nett..
— Ramesh Bala (@rameshlaus) January 26, 2023
A new All-time record.. 🔥
Early estimates..
55 ಕೋಟಿ ರೂಪಾಯಿ ಕಲೆಕ್ಷನ್: ನಿನ್ನೆ ಸುಮಾರು 100 ದೇಶಗಳಲ್ಲಿ ಬಿಡುಗಡೆ ಕಂಡಿರುವ ಪಠಾಣ್ ಸಿನಿಮಾ 55 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಚಿತ್ರ ತಯಾರಕರು ಘೋಷಿಸಿದ್ದಾರೆ. ಸಿನಿಮಾ ಪ್ರೊಡಕ್ಷನ್ ಹೌಸ್ ಯಶ್ ರಾಜ್ ಫಿಲ್ಮ್ಸ್ (YRF) ಪ್ರಕಾರ, ಚಿತ್ರದ ಮೊದಲ ದಿನದ ಸಂಗ್ರಹವು 55 ಕೋಟಿ ರೂಪಾಯಿಗಳಷ್ಟಿದೆ. ಇದು ಹಿಂದಿ ಚಿತ್ರವೊಂದಕ್ಕೆ ಅತಿ ಹೆಚ್ಚು ಗಳಿಕೆ ಆಗಿದೆ. ಚೇತರಿಕೆ ಮಾರ್ಗದಲ್ಲಿದ್ದ ಬಾಲಿವುಡ್ಗೆ ಪಠಾಣ್ ಯಶಸ್ಸು ಆನೆಬಲ ಬಂದಂತಾಗಿದೆ. ಅಲ್ಲದೇ ಮೊದಲ ದಿನದ ಕಲೆಕ್ಷನ್ ಕೆಜಿಎಫ್ ದಾಖಲೆಯುನ್ನೂ ಪುಡಿ ಮಾಡಿದೆ.
ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ನಾಲ್ಕು ವರ್ಷಗಳ ನಂತರ ಶಾರುಖ್ ಸಿನಿರಂಗಕ್ಕೆ ಮರಳಿರುವುದನ್ನು ಸೂಚಿಸಿದೆ. ಅವರ ಹಿಂದಿನ ಚಿತ್ರ ಝೀರೋ 2018ರಲ್ಲಿ ತೆರೆ ಕಂಡಿತ್ತು. ರಜಾ ದಿನವಲ್ಲದಿದ್ದರೂ ಪಠಾಣ್ ಈ ಮಟ್ಟಿಗೆ ಕಲೆಕ್ಷನ್ ಮಾಡಿರುವುದು ದೊಡ್ಡ ದಾಖಲೆ ಎಂದು ಯಶ್ ರಾಜ್ ಫಿಲ್ಮ್ಸ್ ಹೇಳಿದೆ.
-
2023 STARTS WITH A BANG…
— taran adarsh (@taran_adarsh) January 26, 2023 " class="align-text-top noRightClick twitterSection" data="
⭐️ Non-holiday
⭐️ Midweek release [Wed]
Yet, #Pathaan embarks on a HISTORIC START… BIGGEST *DAY 1* EVER… East. West. North. South. #PathaanMania grips the nation… Wed ₹ 55 cr. #India biz. #Hindi version. #Tamil + #Telugu: ₹ 2 cr pic.twitter.com/hRoDS42wC4
">2023 STARTS WITH A BANG…
— taran adarsh (@taran_adarsh) January 26, 2023
⭐️ Non-holiday
⭐️ Midweek release [Wed]
Yet, #Pathaan embarks on a HISTORIC START… BIGGEST *DAY 1* EVER… East. West. North. South. #PathaanMania grips the nation… Wed ₹ 55 cr. #India biz. #Hindi version. #Tamil + #Telugu: ₹ 2 cr pic.twitter.com/hRoDS42wC42023 STARTS WITH A BANG…
— taran adarsh (@taran_adarsh) January 26, 2023
⭐️ Non-holiday
⭐️ Midweek release [Wed]
Yet, #Pathaan embarks on a HISTORIC START… BIGGEST *DAY 1* EVER… East. West. North. South. #PathaanMania grips the nation… Wed ₹ 55 cr. #India biz. #Hindi version. #Tamil + #Telugu: ₹ 2 cr pic.twitter.com/hRoDS42wC4
ಇದನ್ನೂ ಓದಿ: ಮರಾಠಿ ಸಿನಿಮಾಗಳ ಮೇಲೆ ಪಠಾಣ್ ಪರಿಣಾಮ: ಚಿತ್ರಮಂದಿರಗಳ ಮಾಲೀಕರಿಗೆ ಎಂಎನ್ಎಸ್ ಎಚ್ಚರಿಕೆ!!
ಮಂಗಳವಾರದವರೆಗೆ, ಪಠಾಣ್ ಮುಂಗಡ ಬುಕ್ಕಿಂಗ್‌ನಲ್ಲಿ 4.19 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದ್ದು, ಮೊದಲ ದಿನ ಶೇ.80ರಷ್ಟು ಮಂದಿ ಸಿನಿಮಾ ವೀಕ್ಷಿಸಿದ್ದಾರೆ. ಬೆಳಗ್ಗೆ 6 ಅಥವಾ 7 ಗಂಟೆಗೆ ಪ್ರಾರಂಭವಾದ ಮಾರ್ನಿಂಗ್ ಶೋಗೂ ಅಧಿಕ ಸಂಖ್ಯೆಯ ಪ್ರೇಕ್ಷಕರು ಹಾಜರಾಗಿದ್ದಾರೆ. ಬುಧವಾರ ಮಧ್ಯರಾತ್ರಿ 12.30ರ ನಂತರದ ಪ್ರದರ್ಶನವನ್ನು ಸಹ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ಪಠಾಣ್ ವಿವಾದ: ಬಜರಂಗದಳದ ಕೆಲ ಘೋಷಣೆಗಳ ವಿರುದ್ಧ ಧ್ವನಿ ಎತ್ತಿದ ಜನರ ಗುಂಪು!!
ಕೆಜಿಎಫ್-2 ದಾಖಲೆ ಬ್ರೇಕ್: 14 ಏಪ್ರಿಲ್ 2022 ರಂದು ಬಿಡುಗಡೆ ಕಂಡ ಕೆಜಿಎಫ್ 2 ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಚಿತ್ರದ ಹಿಂದಿ ಅವತರಣಿಕೆ ಮೊದಲ ದಿನವೇ 53.95 ಕೋಟಿ ಗಳಿಸಿತ್ತು. ಕೆಜಿಎಫ್ ಚಾಪ್ಟರ್ 2 ನಂತರ ಸಿದ್ಧಾರ್ಥ್ ಆನಂದ್ ಅಭಿನಯದ ವಾರ್ ಚಿತ್ರವು ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಆರಂಭಿಕ ಕಲೆಕ್ಷನ್ ಮಾಡಿತ್ತು. 2 ಅಕ್ಟೋಬರ್ 2019 ರಂದು ಬಿಡುಗಡೆ ಕಂಡ ವಾರ್ ಚಿತ್ರವು ಮೊದಲ ದಿನ 53.35 ಕೋಟಿ ರೂಪಾಯಿ ವ್ಯವಹಾರ ಮಾಡಿತ್ತು. ಆದರೆ, ಈಗ ಪಠಾಣ್ ಈ ದೊಡ್ಡ ಚಿತ್ರಗಳ ದಾಖಲೆಗಳನ್ನು ಪುಡಿ ಮಾಡಿದೆ. ಒಂದೇ ದಿನದಲ್ಲಿ 55 ಕೋಟಿ ಗಳಿಸುವ ಮೂಲಕ ಪಠಾಣ್ ದಾಖಲೆ ಬರೆದಿದೆ.
ಇದನ್ನೂ ಓದಿ: ಪೆಪ್ಸಿ ಜಾಹೀರಾತಿಗೆ ರಾಕಿಂಗ್ ಸ್ಟಾರ್ ಯಶ್ ಪಡೆದ ಸಂಭಾವನೆ ಎಷ್ಟು ಗೊತ್ತಾ?