ETV Bharat / entertainment

'ಗರ್ಲ್​ ಗ್ಯಾಂಗ್'​ ಜೊತೆ ಪರಿಣಿತಿ ಚೋಪ್ರಾ ಮಾಲ್ಡೀವ್ಸ್​ ಪ್ರವಾಸ; ಜೊತೆಯಾದ ಅಮ್ಮ, ಅತ್ತೆ - etv bharat kannada

Parineeti Chopra: ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ತಮ್ಮ ಗರ್ಲ್​ ಗ್ಯಾಂಗ್​ ಜೊತೆ ಮಾಲ್ಡೀವ್ಸ್​ ಪ್ರವಾಸಕ್ಕೆ ತೆರಳಿದ್ದಾರೆ.

Parineeti Chopra shares pictures from Maldives vacation with Girl gang Photos
'ಗರ್ಲ್​ ಗ್ಯಾಂಗ್'​ ಜೊತೆ ಪರಿಣಿತಿ ಚೋಪ್ರಾ ಮಾಲ್ಡೀವ್ಸ್​ ಪ್ರವಾಸ; ಜೊತೆಯಾದ ಅಮ್ಮ, ಅತ್ತೆ
author img

By ETV Bharat Karnataka Team

Published : Nov 9, 2023, 7:17 PM IST

ಹಿಂದಿ ಚಿತ್ರರಂಗದ ಬ್ಯೂಟಿಫುಲ್​ ನಟಿ ಪರಿಣಿತಿ ಚೋಪ್ರಾ ಮಾಲ್ಡೀವ್ಸ್​ನಲ್ಲಿ ಎಂಜಾಯ್​ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ರಾಜಸ್ಥಾನದ ಉದಯಪುರದದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ್ ಚಡ್ಡಾ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದರು. ಇದೀಗ ಗೆಳತಿಯರನ್ನು ಕರೆದುಕೊಂಡು ಮಾಲ್ಡೀವ್ಸ್​ನಲ್ಲಿ ರಜಾ ದಿನವನ್ನು ಕಳೆಯುತ್ತಿದ್ದಾರೆ. ಅಲ್ಲಿನ ಖುಷಿಯ ಕ್ಷಣಗಳನ್ನು ನಟಿ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪರಿಣಿತಿ ಚೋಪ್ರಾ ಹೊಸದಾಗಿ ಮದುವೆಯಾದ ಸೆಲೆಬ್ರಿಟಿಗಳಲ್ಲಿ ಒಬ್ಬರು. ಅವರು ಪತಿ, ರಾಘವ್​ ಚಡ್ಡಾ ಜೊತೆ ಹನಿಮೂನ್​ ಹೋಗುವ ಬದಲು ತಮ್ಮ ಗರ್ಲ್​ ಗ್ಯಾಂಗ್​ ಜೊತೆ ಮಾಲ್ಡೀವ್ಸ್​ಗೆ ತೆರಳಿದ್ದಾರೆ. ಜೊತೆಗೆ ಪರಿಣಿತಿ ಅಮ್ಮ ಮತ್ತು ಅತ್ತೆ ಕೂಡ ಇದ್ದಾರೆ. ಅಲ್ಲಿ ಎಲ್ಲರೂ ಸೇರಿ ಎಂಜಾಯ್​ ಮಾಡುತ್ತಿರುವ ಬ್ಯೂಟಿಫುಲ್​ ಫೋಟೋವನ್ನು ನಟಿ ಶೇರ್​ ಮಾಡಿದ್ದಾರೆ.

ಮಾಲ್ಡೀವ್ಸ್​ ರಜೆಯ ಫೋಟೋವನ್ನು ಹಂಚಿಕೊಂಡ ನಂತರ ಪರಿಣಿತಿ ಚೋಪ್ರಾ ಸುಂದರವಾದ ಶೀರ್ಷಿಕೆಯನ್ನು ನೀಡಿದ್ದಾರೆ. "ನಿಮ್ಮ ತಾಯಿ ಮತ್ತು ಅತ್ತೆಯನ್ನು ಒಳಗೊಂಡ ಗರ್ಲ್ ಗ್ಯಾಂಗ್​ ಜೊತೆ ನೀವು ಪ್ರವಾಸಕ್ಕೆ ಹೋದಾಗ ಅತ್ಯುತ್ತಮ ಥ್ರೋಬ್ಯಾಕ್​ ಆಗಿದೆ. ಇಷ್ಟು ಸ್ವಾಗತ ಮತ್ತು ಆತಿಥ್ಯ ನೀಡಿದ್ದಕ್ಕಾಗಿ ಈ ವಿಶೇಷ ಸ್ಥಳಕ್ಕೆ ಧನ್ಯವಾದಗಳು. ಮತ್ತೆ ಇಲ್ಲಿಗೆ ಹಿಂತಿರುಗಲು ನಾವು ಎದುರು ನೋಡುತ್ತಿದ್ದೇವೆ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: RagNeeti wedding pictures: ಬಹುಕಾಲದ ಪ್ರೀತಿಗೆ ಮೂರು ಗಂಟಿನ ನಂಟು; ಅದ್ಧೂರಿಯಾಗಿ ಮದುವೆಯಾದ ರಾಘ್​ನೀತಿ

ಬಹುದಿನಗಳಿಂದ ಡೇಟಿಂಗ್​ನಲ್ಲಿದ್ದ ರಾಘ್​ನೀತಿ ಜೋಡಿ ಮೇ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ವಿದ್ಯಾಭ್ಯಾಸದ ಸಂದರ್ಭದಿಂದಲೇ ಪರಿಚಿತರಾಗಿದ್ದ ಇವರಿಬ್ಬರ ಡೇಟಿಂಗ್​ ವಿಚಾರ ಇದೇ ವರ್ಷದ ಮಾರ್ಚ್​​ನಲ್ಲಿ ಬೆಳಕಿಗೆ ಬಂದಿತ್ತು. ಪರಿಣಿತಿ ರಾಘವ್ ಮದುವೆ ಕಾರ್ಯಕ್ರಮಗಳು ರಾಜಸ್ಥಾನದ ಉದಯಪುರದಲ್ಲಿರುವ ಎರಡು ಐಶಾರಾಮಿ ಹೋಟೆಲ್​ಗಳಲ್ಲಿ ಬಹಳ ಅದ್ಧೂರಿಯಾಗಿ ಜರುಗಿತ್ತು.

ಸೆಪ್ಟೆಂಬರ್​ 23, 24ರಂದು ಕಾರ್ಯಕ್ರಮಗಳು ಜರುಗಿದವು. 24ರಂದು ವಧುವಿನ ಹಣೆಗೆ ವರ ಸಿಂಧೂರ ಹಚ್ಚುವ ಮೂಲಕ ಮದುವೆಯ ಪ್ರಮುಖ ಶಾಸ್ತ್ರವನ್ನು ಸಂಪನ್ನಗೊಳಿಸಿದರು. ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ರಾಘ್​ನೀತಿ ವಿವಾಹವಾದರು. ಸಮಾರಂಭಕ್ಕೆ ರಾಜಕೀಯ ಮತ್ತು ಸಿನಿಮಾ ಗಣ್ಯರು ಸಾಕ್ಷಿಯಾಗಿದ್ದರು. ಬಹುದಿನಗಳ ಪ್ರೀತಿಗೆ ಸೆ. 24ರಂದು ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದ್ದರು.

ಪರಿಣಿತಿ ಸಿನಿಮಾ; ಪರಿಣಿತಿ ಚೋಪ್ರಾ ಕೊನೆಯದಾಗಿ ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ ಜತೆ ಮಿಷನ್​ ರಾಣಿಗಂಜ್​ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಸಿನಿಮಾ ಬಿಡುಗಡೆ ಆಗಿದ್ದು, ಹೇಳಿಕೊಳ್ಳುವ ಮಟ್ಟಿಗೆ ಹಿಟ್ ಅನ್ನಿಸಲಿಲ್ಲ. ಮುಂದೆ ಅಮರ್​ ಸಿಂಗ್​ ಚಮ್ಕಿಲಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಇಮ್ತಿಯಾಜ್ ಅಲಿ ನಿರ್ದೇಶಿಸಿದ್ದಾರೆ. ದಿಲ್ಜಿತ್ ದೋಸಾಂಜ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ರಾಘ್​ನೀತಿ ಹೊಸ ವಿಡಿಯೋ: ರಾಘವ್​ ಪರಿಣಿತಿ ಲವ್​​ಸ್ಟೋರಿಯ ಇಂಟ್ರೆಸ್ಟಿಂಗ್​ ಕಹಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.