ETV Bharat / entertainment

ರಾಘವ್ ಚಡ್ಡಾ ಜೊತೆ ಮದುವೆ ವದಂತಿ: ಮೌನ ಮುರಿದ ಪರಿಣಿತಿ ಚೋಪ್ರಾ - ಪರಿಣಿತಿ ರಾಘವ್ ಎಂಗೇಜ್​ಮೆಂಟ್

ರಾಘವ್ ಚಡ್ಡಾ ಜೊತೆ ಮದುವೆ ವದಂತಿ ವಿಚಾರವಾಗಿ ಸಂದರ್ಶನವೊಂದರಲ್ಲಿ ನಟಿ ಪರಿಣಿತಿ ಚೋಪ್ರಾ ಮಾತನಾಡಿದ್ದಾರೆ.

Parineeti Chopra Raghav Chadha
ಪರಿಣಿತಿ ಚೋಪ್ರಾ ರಾಘವ್ ಚಡ್ಡಾ
author img

By

Published : Apr 19, 2023, 6:47 PM IST

ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಮದುವೆ ವದಂತಿ ಕಳೆದೊಂದು ತಿಂಗಳಿನಿಂದ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ನಟಿ ಮತ್ತು ರಾಜಕಾರಣಿಯ ಫೋಟೋ, ವಿಡಿಯೋಗಳು ವೈರಲ್​ ಆಗುತ್ತಲೇ ಇವೆ. ಈಗಾಗಲೇ ರಾಜಕೀಯ ಮತ್ತು ಚಿತ್ರರಂಗದ ಕೆಲ ಗಣ್ಯರು ಈ ಜೋಡಿಗೆ ಅಭಿನಂದನೆ ತಿಳಿಸುವ ಮೂಲಕ ಗಾಳಿಸುದ್ದಿ ನಿಜವೆಂದು ಪರೋಕ್ಷವಾಗಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಊಹಾಪೋಹಗಳನ್ನು ಹೇಗೆ ಎದುರಿಸುತ್ತಿದ್ದಾರೆ ಎಂಬುದನ್ನು ಇದೀಗ ಪರಿಣಿತಿ ಚೋಪ್ರಾ ತಿಳಿಸಿದ್ದಾರೆ. ''ಪ್ರತಿಯೊಬ್ಬರೂ ನಿಮ್ಮ ಖಾಸಗಿ ಜೀವನದಲ್ಲಿ ಆಸಕ್ತಿ ಹೊಂದಿರುವಾಗ ಅದು ನಿಮಗೆ ಕೆಲವೊಮ್ಮೆ ವಿಚಿತ್ರ ಎನಿಸಬಹುದು" ಎಂದು ತಿಳಿಸಿದ್ದಾರೆ. ಅಲ್ಲದೇ, ''ಯಾರೂ ಅನುಚಿತವಾಗಿ ಅಥವಾ ಅಗೌರವಯುತವಾಗಿ ವರ್ತಿಸುವವರೆಗೆ ನನ್ನ ಸಂಬಂಧದ ಬಗ್ಗೆ ಸ್ಪಷ್ಟಪಡಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ತಿಳಿಸಿದರು.

"ಮಾಧ್ಯಮಗಳು ನನ್ನ ಜೀವನದ ಬಗ್ಗೆ ಚರ್ಚಿಸುವ ಮತ್ತು ತೀರಾ ವೈಯಕ್ತಿಕವಾಗಿ ಮಾತನಾಡುವುದರ ನಡುವೆ ಒಂದು ಅಂತರ / ಗೆರೆ ಇದೆ. ಸದ್ಯ ಯಾವುದೇ ತೊಂದರೆ ಇಲ್ಲ. ಏನಾದರು ಸಂಭವಿಸಿದರೆ ನಾನು ಪ್ರತಿಕ್ರಿಯಿಸಿ ತಪ್ಪು ತಿಳುವಳಿಕೆಗಳನ್ನು ದೂರ ಮಾಡುತ್ತೇನೆ. ಹಾಗೆ ಮಾಡುವ ಅಗತ್ಯ ಇಲ್ಲದಿದ್ದರೆ ನಾನು ಮಾಡುವುದಿಲ್ಲ" ಎಂದು ತಿಳಿಸಿದರು.

ಈ ವದಂತಿಗಳನ್ನು ಸಕಾರಾತ್ಮಕವಾಗಿಯೇ ವೀಕ್ಷಿಸಲು ಪ್ರಯತ್ನಿಸುತ್ತೇನೆ. "ಜನರು ನನ್ನ ಬಗ್ಗೆ ಆಸಕ್ತಿ ಹೊಂದಿಲ್ಲದಿದ್ದರೆ, ಅದು ನಾನು ನಟಿನಾಗಿ ಸಾಧಿಸಲು ಪ್ರಯತ್ನಿಸಿದ್ದನ್ನು ಸಾಧಿಸುವಲ್ಲಿ ವಿಫಲಳಾದೆ ಎಂದು ಸೂಚಿಸುತ್ತದೆ. ಏಕೆಂದರೆ ಯಶಸ್ವಿ ನಟರು ಪ್ರಸಿದ್ಧರಾಗುತ್ತಾರೆ. ಪ್ರತಿಯೊಬ್ಬರ ಮನೆಯ ಭಾಗವಾಗುತ್ತಾರೆ. ಜನರ ಜೀವನದ, ಕೊಠಡಿ ಸಂಭಾಷಣೆಯ, ಸುದ್ದಿಯ, ಸುದ್ದಿ ಚಾನೆಲ್​ಗಳ, ಡಿಜಿಟಲ್ ಮಾಧ್ಯಮಗಳ, ಪಾಪರಾಜಿ ಸಂಸ್ಕೃತಿಯ ಒಂದು ಭಾಗ ಆಗುತ್ತಾರೆ ಎಂದು ತಿಳಿಸಿದರು. ಮಿತಿ ಮೀರುವವರೆಗೂ ಸ್ಪಂದನೆ ಅಗತ್ಯ ಇಲ್ಲ'' ಎಂದು ಕೂಡ ತಿಳಿಸಿದರು.

ಪದೇ ಪದೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುವುದರ ಬಗ್ಗೆ ಉಲ್ಲೇಖಿಸಿ, "ನಾನು ಕೆಲಸಕ್ಕಾಗಿ ವೈಯಕ್ತಿಕ ಬದುಕನ್ನು ಅಥವಾ ವೈಯಕ್ತಿಕ ಜೀವನಕ್ಕಾಗಿ ಕೆಲಸವನ್ನು ಎಂದಿಗೂ ತ್ಯಾಗ ಮಾಡುವುದಿಲ್ಲ. ನಾನು ಯಾವಾಗಲೂ ಎರಡರ ನಡುವೆ ಸಮತೋಲನವನ್ನು ಸಾಧಿಸಲು ಪ್ರಯತ್ನಿಸುತ್ತೇನೆ. ಆಗಾಗ್ಗೆ ವಿಮಾನ ನಿಲ್ದಾಣಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಜನರು ನನ್ನ ಚಟುವಟಿಕೆಗಳ ಬಗ್ಗೆ ಕೇಳುತ್ತಿದ್ದರು. ಆದರೆ ನಾನು ಆರೋಗ್ಯಕರವಾಗಿ ಈ ಎರಡನ್ನೂ ಹೇಗೆ ನಿರ್ವಹಿಸುತ್ತಿದ್ದೇನೆ ಎಂದು ಅವರು ಎಂದಿಗೂ ಗ್ರಹಿಸಲಿಲ್ಲ" ಎಂದು ತಿಳಿಸಿದರು.

ಇದನ್ನೂ ಓದಿ: 'ವೀಕೆಂಡ್​​ ವಿತ್​ ರಮೇಶ್'​​ನಲ್ಲಿ ಮಂಡ್ಯ ರಮೇಶ್, ಅವಿನಾಶ್​: ಶೋ ವೀಕ್ಷಿಸಲು ಅಭಿಮಾನಿಗಳ ಕಾತರ

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ ದಿನಗಳಿಂದಲೂ ಪರಿಚಿತರು. ಒಂದೇ ಕಡೆ ವಿದ್ಯಾಭ್ಯಾಸ ಮಾಡಿದ ಹಿನ್ನೆಲೆಯಲ್ಲಿ ಬಹು ಸಮಯದಿಂದ ಸ್ನೇಹಿತರಾಗಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿಯೂ ಒಬ್ಬರನ್ನೊಬ್ಬರು ಅನುಸರಿಸುತ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಅವರು ಒಟ್ಟಿಗೆ ರೆಸ್ಟೋರೆಂಟ್‌ ಬಳಿ ಕಾಣಿಸಿಕೊಂಡಿದ್ದರಿಂದ ಮದುವೆ ವದಂತಿ ಹಬ್ಬಿದೆ. ನಂತರ ದೆಹಲಿ ವಿಮಾನ ನಿಲ್ದಾಣದಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡರು. ಹೀಗಾಗಿ ಮದುವೆ ವದಂತಿಗೆ ರೆಕ್ಕೆ ಪುಕ್ಕ ಬಂದಿದೆ.

ಇದನ್ನೂ ಓದಿ: ಐಷಾರಾಮಿ ಮನೆ ಖರೀದಿಸಿದ ರಿಯಲ್​ ಸ್ಟಾರ್​:'ಅದೃಷ್ಟದ ಹುಡುಕಾಟ'ದಲ್ಲಿ ಉಪ್ಪಿ!

ಪಾಪರಾಜಿಗಳು ಕೂಡಾ ಪರಿಣಿತಿ ಚೋಪ್ರಾ ಮೇಲೆ ಒಂದು ಕಣ್ಣಿಟ್ಟಿದ್ದಾರೆ. ನಟಿ ಎಲ್ಲೇ ಹೋದರೂ ಪಾಪರಾಜಿಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚಿನ ವಿಡಿಯೋವೊಂದರ ಪ್ರಕಾರ, ಪಾಪರಾಜಿಗಳು ನಿಮ್ಮ ಮದುವೆ ಯಾವಾಗ ಎಂದು ನಟಿ ಬಳಿ ಪ್ರಶ್ನಿಸಿದ್ದಾರೆ. ಒಮ್ಮೆ ಮುಗುಳ್ನಕ್ಕು ನಾಚಿದರು. ಕ್ಯಾಮರಾಗೆ ಪೋಸ್ ಕೊಟ್ಟು ಹಿಂತಿರುಗುವ ವೇಳೆ, ಮತ್ತೆ ಮತ್ತೆ ಅದೇ ಪ್ರಶ್ನೆಯನ್ನು ಕೇಳಲಾಯಿತು. ಅದಕ್ಕೆ ತಮ್ಮ ಸಿಬ್ಬಂದಿಯ ಕಡೆಗೆ ತಿರುಗಿ "ಅವರು ಹುಚ್ಚರಾಗಿದ್ದಾರೆ" ಎಂದು ಹೇಳುತ್ತಾ ನಟಿ ಮುನ್ನಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.