ETV Bharat / entertainment

ಪರಿಣಿತಿ-ರಾಘವ್​ ವಿವಾಹ: ಸೂಫಿ ನೈಟ್ ಈವೆಂಟ್​ ವಿಡಿಯೋ ವೈರಲ್​ - Parineeti Raghav wedding

Parineeti Chopra Raghav Chadha: ನಟಿ ಪರಿಣಿತಿ ಚೋಪ್ರಾ ಹಾಗೂ ಸಂಸದ ರಾಘವ್​ ಚಡ್ಡಾ ಜೋಡಿಯ ಮದುವೆ ಸಮಾರಂಭದ ಸೂಫಿ ನೈಟ್ ಈವೆಂಟ್​ ವಿಡಿಯೋ ವೈರಲ್​ ಆಗಿದೆ.

Parineeti Chopra Raghav Chadha
ಪರಿಣಿತಿ ರಾಘವ್​ ಮದುವೆ
author img

By ETV Bharat Karnataka Team

Published : Sep 21, 2023, 12:12 PM IST

ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಹಾಗೂ ಸಂಸದ ರಾಘವ್​ ಚಡ್ಡಾ ಅವರ ಮದುವೆ ದಿನ ಸಮೀಪಿಸುತ್ತಿದೆ. ಶಾಸ್ತ್ರ, ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿವೆ. ಮದುವೆಯ ಪ್ರಮುಖ ಕಾರ್ಯಕ್ರಮಗಳು ಸೆಪ್ಟೆಂಬರ್​ 23 ಮತ್ತು 24 ರಂದು ನಡೆಯಲಿದೆ. ಸೆ.24 ರಂದು ಉದಯಪುರದ ಅದ್ಧೂರಿ ವೇದಿಕೆಯಲ್ಲಿ ಇವರು ಪತಿ-ಪತ್ನಿಯರಾಗಲಿದ್ದಾರೆ. ಈ ಮೂಲಕ ಬಹುದಿನಗಳ ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಲಿದ್ದಾರೆ. ಹೀಗಾಗಿ, ಮತ್ತೊಂದು ಅದ್ಧೂರಿ ಮದುವೆಗೆ ಬಾಲಿವುಡ್​ ಸಾಕ್ಷಿಯಾಗಲಿದ್ದು, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗಿಯಾಗಲಿದ್ದಾರೆ.

ಸೆಪ್ಟೆಂಬರ್​ 24 ರಂದು ಹೋಟೆಲ್​ ಲೀಲಾ ಪ್ಯಾಲೆಸ್​ನಲ್ಲಿ ಇಬ್ಬರು ಅದ್ಧೂರಿಯಾಗಿ ಹಸೆಮಣೆ ಏರಲಿದ್ದಾರೆ. ಮದುವೆಯ ಎಲ್ಲಾ ಸಿದ್ಧತೆಗಳು ಈಗಾಗಲೇ ಬಹುತೇಕ ಪೂರ್ಣಗೊಂಡಿವೆ. ಜನಪ್ರಿಯ ಜೋಡಿಯ ವಿವಾಹಕ್ಕೆ ಸಂಬಂಧಿಸಿದ ಫೋಟೋಗಳು, ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ರಾರಾಜಿಸುತ್ತಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

Parineeti Chopra Raghav Chadha
ಪರಿಣಿತಿ - ರಾಘವ್​ ವೈರಲ್​ ಫೋಟೋ

ನಟಿ ಮತ್ತು ಸಂಸದ ಯಾವಾಗ ಫೋಟೋಗಳನ್ನು ಹಂಚಿಕೊಳ್ಳುತ್ತಾರೆಂದು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇದೀಗ ದೆಹಲಿಯಲ್ಲಿ ನಡೆದಿರುವ ಸೂಫಿ ನೈಟ್ (ಸಂಗೀತ ಕಾರ್ಯಕ್ರಮ)​ ಈವೆಂಟ್​ನ ಫೋಟೋ, ವಿಡಿಯೋಗಳು ಹೊರಬಿದ್ದಿವೆ. ವಿಡಿಯೋಗಳಲ್ಲಿ ಪರಿಣಿತಿ ಚೋಪ್ರಾ, ರಾಘವ್​ ಚಡ್ಡಾ ಅಥವಾ ಗ್ಲೋಬಲ್​ ಐಕಾನ್​​ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿಲ್ಲ. ಆದ್ರೆ ಗ್ಲೋಬಲ್​ ಐಕಾನ್​​ ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ ಭಾಗಿಯಾಗಿದ್ದಾರೆ.

'ರಾಗ್​ನೀತಿ' ವಿವಾಹ ಸಂಭ್ರಮದ ಭಾಗವಾಗಿರುವ ಸೂಫಿ ನೈಟ್​ ಅನ್ನು ಸೆಪ್ಟೆಂಬರ್​ 20ರ (ನಿನ್ನೆ, ಬುಧವಾರ) ರಾತ್ರಿ ದೆಹಲಿಯಲ್ಲಿ ಆಯೋಜಿಸಲಾಗಿತ್ತು. ವರ, ಆಮ್​ ಆದ್ಮಿ ಪಾರ್ಟಿ ಲೀಡರ್​​ ರಾಘವ್​ ಚಡ್ಡಾ ನಿವಾಸದಲ್ಲಿ ಸಂಗೀತ ಕಾರ್ಯಕ್ರಮವಿತ್ತು. ಕುಟುಂಬಸ್ಥರು, ಆಪ್ತರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ಹರ್ಭಜನ್ ಸಿಂಗ್​ ಕೂಡ ಕಾಣಿಸಿಕೊಂಡರು.

ಇದನ್ನೂ ಓದಿ: ಪರಿಣಿತಿ ರಾಘವ್​ ಮದುವೆ: ಶಾಸ್ತ್ರಗಳು ಶುರು - ರಾಗ್​ನೀತಿ ಫೋಟೋ ವೈರಲ್​​

ನಿನ್ನೆ ನವದೆಹಲಿಯ ಗುರುದ್ವಾರಕ್ಕೆ ಭೇಟಿ ಕೊಟ್ಟಿರುವ ಫೋಟೋಗಳು ವೈರಲ್​ ಆಗಿವೆ. ಅರ್ದಾಸ್​ ಮತ್ತು ಕೀರ್ತನ್‌ನಲ್ಲಿ​ (ಪೂಜಾ ಪ್ರಕಾರ) ಭಾಗಿಯಾಗಿ ದೇವರ ಆಶೀರ್ವಾದ ಪಡೆದಿದ್ದಾರೆ. ಗುರುದ್ವಾರದ ಹಿರಿಯರಿಂದ ಆಶೀರ್ವಾದ ಪಡೆದಿದ್ದು, ಫೋಟೋಗಳು ವೈರಲ್​​ ಆಗಿವೆ. ಸೂಫಿ ನೈಟ್​ ಈವೆಂಟ್​ನಲ್ಲಿ ಜನಪ್ರಿಯ ಹಾಡುಗಳು ಸದ್ದು ಮಾಡಿವೆ. ನವಜೀವನಕ್ಕೆ ಕಾಲಿಡುತ್ತಿರುವ ಜೋಡಿಗೆ ಎಲ್ಲೆಡೆಯಿಂದ ಶುಭ ಹಾರೈಕೆಗಳು ಹರಿದುಬರುತ್ತಿವೆ.

ಇದನ್ನೂ ಓದಿ: 'ರಾಗ್‌ನೀತಿ' ಮದುವೆ ಸಂಭ್ರಮ ಹೇಗಿದೆ ಗೊತ್ತಾ?: ವೆಡ್ಡಿಂಗ್​ ಥೀಮ್​, ಸಂಗೀತ, ಆರತಕ್ಷತೆಯ ಸಂಪೂರ್ಣ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.