ETV Bharat / entertainment

ನಟಿ ಪರಿಣಿತಿ ಚೋಪ್ರಾ ಮನೆ ಬಳಿ ಕಾಣಿಸಿಕೊಂಡ ಭಾವಿ ಪತಿ ರಾಘವ್ ಚಡ್ಡಾ - ಪರಿಣಿತಿ ರಾಘವ್ ಫೋಟೋ

ನಟಿ ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ್ ಚಡ್ಡಾ ಜೋಡಿ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ.

Parineeti Chopra, Raghav Chadha spotted at bandra
ಪರಿಣಿತಿ ಚೋಪ್ರಾ ಮನೆ ಬಳಿ ಕಾಣಿಸಿಕೊಂಡ ರಾಘವ್ ಚಡ್ಡಾ
author img

By

Published : Jul 13, 2023, 3:34 PM IST

Updated : Jul 13, 2023, 3:43 PM IST

ಮಾರ್ಚ್ ತಿಂಗಳಿನಿಂದ ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್​ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಜೋಡಿ ಡೇಟಿಂಗ್​​, ನಿಶ್ಚಿತಾರ್ಥ, ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ನಟಿ ಇತ್ತೀಚೆಗೆ ತಮ್ಮ ಭಾವಿ ಪತಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಅವರ ಹಲವು ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಅಭಿಮಾನಿಗಳು ಈ ಜೋಡಿಗೆ ಪ್ರೀತಿಯ ಮಳೆಗರೆದಿದ್ದಾರೆ.

ಮುಂಬೈನ ಬಾಂದ್ರಾದ ಮನೆ ಬಳಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಒಟ್ಟಿಗೆ ಕಾಣಿಸಿಕೊಂಡರು. ವಿಡಿಯೋಗಳಲ್ಲಿ, ಲವ್​ ಬರ್ಡ್ಸ್ ನಟಿಯ ಮನೆಯಿಂದ ಹೊರಬರುತ್ತಿರುವುದನ್ನು ಕಾಣಬಹುದು. ರಾಘವ್ ಚಡ್ಡಾ ಮುಗುಳ್ನಗುತ್ತಾ ಪಾಪರಾಜಿಗಳತ್ತ ಕೈ ಬೀಸಿದ್ದು, ಪರಿಣಿತಿ ತಮ್ಮ ಮುಖವನ್ನು ಮರೆಮಾಚಿಕೊಂಡರು. ಬಳಿಕ ಕಾರಿನಲ್ಲಿ ಒಟ್ಟಿಗೆ ತೆರಳಿದರು. ಮುಂಬೈನಲ್ಲಿ ಇಂದು ಮುಂಜಾನೆ ಸಹ ಪರಿಣಿತಿ ಅವರು ಕಾಣಿಸಿಕೊಂಡಿದ್ದಾರೆ. ಆದರೆ ಪಾಪರಾಜಿಗಳಿಗೆ ಸ್ಪಂದಿಸಿಲ್ಲ, ಕ್ಯಾಮರಾಗಳಿಗೆ ಪೋಸ್​ ಕೊಟ್ಟಿಲ್ಲ. ಇದಕ್ಕೂ ಮುನ್ನ, ಶೀಘ್ರದಲ್ಲೇ ವಿವಾಹವಾಗಲಿರುವ ಈ ಜೋಡಿ ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿತ್ತು.

ಇಶಕ್​ಝಾದೆ ಮತ್ತು ಸಂದೀಪ್ ಔರ್ ಪಿಂಕಿ ಫರಾರ್‌ನಂತಹ ಚಿತ್ರಗಳಲ್ಲಿ ನಟಿಸಿರುವ ಪರಿಣಿತಿ ಚೋಪ್ರಾ ಉದ್ಯಮಿಯಾಗಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಇನ್​ಸ್ಟಾಗ್ರಾಮ್​ನಲ್ಲಿ ನಟಿ ಹೂಡಿಕೆದಾರರಾಗುವುದಾಗಿ ಘೋಷಿಸಿದ್ದರು. ಇದರ ಜೊತೆಗೆ ಸದ್ಯ ಕೆಲ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ ಈ ಜೋಡಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಶ್ರೀ ಹರ್ಮಂದಿರ್ ಸಾಹಿಬ್‌ನಲ್ಲಿ ಕ್ಲಿಕ್ಕಿಸಿದ್ದ ಫೋಟೋಗಳನ್ನು ಶೇರ್ ಮಾಡಿದ್ದರು. ಉಪಯೋಗಿಸಿದ್ದ ಪಾತ್ರೆಗಳನ್ನು ತೊಳೆಯುವ ಮೂಲಕ ಈ ಜೋಡಿ ಅಲ್ಲಿ ತಮ್ಮ ಸೇವೆಯನ್ನೂ ಸಲ್ಲಿಸಿದೆ. ಪರಿಣಿತಿ ಅವರು ಬಿಳಿ ಕುರ್ತಾ ಧರಿಸಿದ್ದರೆ, ರಾಘವ್ ನೆಹರೂ ಕೋಟ್‌ನೊಂದಿಗೆ ಕುರ್ತಾ-ಪೈಜಾಮಾ ಧರಿಸಿದ್ದರು.

ಇದನ್ನೂ ಓದಿ: 'ಆಹಾರದಲ್ಲಿ ಟೊಮೆಟೊ ಬಳಕೆ ಕಡಿಮೆ ಮಾಡಿದ್ದೇವೆ': ಸಿರಿವಂತ ನಟ ಸುನೀಲ್ ಶೆಟ್ಟಿ ಹೇಳಿಕೆ!

ಪರಿಣಿತಿ ಮತ್ತು ರಾಘವ್ ಮೇ 13 ರಂದು ನವದೆಹಲಿಯ ಕಪುರ್ತಲಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೇ ಸಾಲಿನಲ್ಲಿ ಹಸೆಮಣೆ ಏರಲಿದ್ದಾರೆ ಎಂಬ ವರದಿಗಳಿವೆ. ಸದ್ಯದ ಮಾಹಿತಿ ಪ್ರಕಾರ ಉದಯಪುರದ ಐಷಾರಾಮಿ ಪ್ಯಾಲೆಸ್ ಹೋಟೆಲ್ 'ದಿ ಒಬೆರಾಯ್ ಉದಯ್​​​ವಿಲಾಸ್‌'ನಲ್ಲಿ ಮದುವೆ ನಡೆಯಲಿದೆಯಂತೆ.

ಇದನ್ನೂ ಓದಿ: ಸಿಟಾಡೆಲ್​ ಶೂಟಿಂಗ್​ ಕಂಪ್ಲೀಟ್​​: ಸಿನಿಮಾಗಳಿಂದ ಬ್ರೇಕ್​ ಪಡೆದು ಚಿಕಿತ್ಸೆಗೆ ತೆರಳುವರಾ ಸಮಂತಾ?

ನಟಿ ಪರಿಣಿತಿ ಚೋಪ್ರಾ ಕೊನೆಯದಾಗಿ ಉಂಚೈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಅನುಪಮ್ ಖೇರ್, ಬೋಮನ್ ಇರಾನಿ ಮತ್ತು ನೀನಾ ಗುಪ್ತಾ ಅವರೊಂದಿಗೆ ಕಾಣಿಸಿಕೊಂಡರು. ಅಮರ್ ಸಿಂಗ್ ಚಮ್ಕಿಲಾ ಸೇರಿದಂತೆ ಬ್ಯುಸಿ ಶೆಡ್ಯೂಲ್​ ಅನ್ನು ಹೊಂದಿದ್ದಾರೆ. ಇದರಲ್ಲಿ ಅವರು ದಿಲ್ಜಿತ್ ದೋಸಾಂಜ್ ಅವರೊಂದಿಗೆ ನಟಿಸಲಿದ್ದಾರೆ. ಇಮ್ತಿಯಾಜ್ ಅಲಿ ನಿರ್ದೇಶನದ ಈ ಚಿತ್ರವು ಪಂಜಾಬಿ ಸಂಗೀತಗಾರ ಅಮರ್ ಸಿಂಗ್ ಚಮ್ಕಿಲಾ ಅವರ ಜೀವನವನ್ನು ಆಧರಿಸಿದೆ.

Last Updated : Jul 13, 2023, 3:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.