ETV Bharat / entertainment

ಆಸ್ಕರ್​ ವಿಜೇತ ಚಿತ್ರಗಳು ಓಟಿಟಿಯಲ್ಲಿ ಬಿಡುಗಡೆ: ಇಲ್ಲಿದೆ ಕಂಪ್ಲೀಟ್​ ಡಿಟೇಲ್ಸ್ - ಈಟಿವಿ ಭಾರತ ಕನ್ನಡ

2023 ನೇ ಸಾಲಿನ ಆಸ್ಕರ್​ ಪ್ರಶಸ್ತಿ ವಿಜೇತ ಚಿತ್ರಗಳು ಓಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಸ್ಟ್ರೀಮ್ ಆಗಲಿವೆ.

ott
ಆಸ್ಕರ್​ ವಿಜೇತ ಚಿತ್ರ
author img

By

Published : Mar 13, 2023, 4:33 PM IST

ಅಮೆರಿಕದ ಲಾಸ್​ ಏಂಜಲೀಸ್​ನ ಡಾಲ್ಫಿ ಥಿಯೇಟರ್​ನಲ್ಲಿ 2023 ನೇ ಸಾಲಿನ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಿತು. ಇಡೀ ವಿಶ್ವವೇ ಕಾಯುತ್ತಿದ್ದ ಅಕಾಡೆಮಿ ಪ್ರಶಸ್ತಿ ಈಗಾಗಲೇ ಘೋಷಣೆಯಾಗಿದ್ದು, ಭಾರತ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಆರ್​ಆರ್​ಆರ್​ ತೆಲುಗು ಚಿತ್ರದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ಮತ್ತು ಕಾರ್ತಿಕಿ ಗೊನ್ಸಾಲ್ವೆಸ್​ ಅವರ ದಿ ಎಲಿಫೆಂಟ್​ ವಿಸ್ಪರರ್ಸ್​ ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ಪ್ರಶಸ್ತಿಯನ್ನು ಗೆದ್ದಿವೆ.

ಇನ್ನುಳಿದಂತೆ ಅನೇಕ ವಿಭಾಗಳಲ್ಲಿ ಬೇರೆ ಬೇರೆ ಚಿತ್ರಗಳು ಪ್ರತಿಷ್ಠಿತ ಆಸ್ಕರ್​ ಪ್ರಶಸ್ತಿಯನ್ನು ಪಡೆದುಕೊಂಡಿವೆ. ಹೀಗಾಗಿ ಅನೇಕ ಸಿನಿ ಪ್ರೇಕ್ಷಕರು ಆಸ್ಕರ್ ಪ್ರಶಸ್ತಿ ಗೆದ್ದ ಚಿತ್ರಗಳು ಯಾವ ಓಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಸ್ಟ್ರೀಮ್ ಆಗಲಿವೆ ಎಂದು ಹುಡುಕಾಡುತ್ತಿದ್ದಾರೆ. ನೀವು ಕೂಡ ಈ ಮಾಹಿತಿಗಾಗಿ ತಡಕಾಡುತ್ತಿದ್ದೀರಾ? ಹಾಗಿದ್ದರೆ ಆಸ್ಕರ್​ ಚಲನಚಿತ್ರಗಳು ಬಿಡುಗಡೆಯಾಗುತ್ತಿರುವ ಓಟಿಟಿ ಪ್ಲಾಟ್​ಫಾರ್ಮ್​ಗಳ ಡಿಟೇಲ್ಸ್​ ಇಲ್ಲಿದೆ.

ಇದನ್ನೂ ಓದಿ: "RRR​ ಪ್ರತಿ ಭಾರತೀಯನ ಹೆಮ್ಮೆ": ಆಸ್ಕರ್​ ಪ್ರಶಸ್ತಿ ಸ್ವೀಕರಿಸಿ ಚಿತ್ರತಂಡ ಭಾವುಕ

ಆಸ್ಕರ್‌ನಲ್ಲಿ ಏಳು ಪ್ರಶಸ್ತಿಗಳನ್ನು ಗೆದ್ದು ದಾಖಲೆ ನಿರ್ಮಿಸಿರುವ 'ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್' ಚಿತ್ರ ಸೋನಿ ಲೈವ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಇನ್ನು 'ಆಲ್​ ಕ್ವೈಟ್​ ಆನ್​ ದಿ ವೆಸ್ಟರ್ನ್​ ಫ್ರಂಟ್'​ ಚಿತ್ರ ನೆಟ್​ಫ್ಲಿಕ್ಸ್​ನಲ್ಲಿ, ಬ್ಲ್ಯಾಕ್ ಪ್ಯಾಂಥರ್: ವಕಾಂಡ ಫಾರೆವರ್ ಚಿತ್ರ ಡಿಸ್ನಿ+ ಹಾಟ್​ಸ್ಟಾರ್​ನಲ್ಲಿ, ಅವತಾರ್​ 2 ಅಮೆಜಾನ್​ ಪ್ರೈಮ್​, ಆಪಲ್​ ಟಿವಿ ಮತ್ತು ಡಿಸ್ನಿ+ ಹಾಟ್​ಸ್ಟಾರ್​ನಲ್ಲಿ, ಟಾಪ್ ಗನ್ - ಮೇವರಿಕ್ ಡ್ರಾಮಾ ಚಿತ್ರ ಅಮೆಜಾನ್​ ಪ್ರೈಮ್​ ವಿಡಿಯೋದಲ್ಲಿ, ಆರ್​ಆರ್​ಆರ್​ ಚಿತ್ರ ಝೀ 5 ಮತ್ತು ಡಿಸ್ನಿ+ ಹಾಟ್​ಸ್ಟಾರ್​ನಲ್ಲಿ, ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರ ನೆಟ್​ಫ್ಲಿಕ್ಸ್​ನಲ್ಲಿ ಮತ್ತು ಪಿನೋಚ್ಚಿಯೋ ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಮ್​ ಆಗಲಿದೆ. ಆದರೆ ವುಮೆನ್​ ಟಾಕಿಂಗ್​, ನವಲ್ನಿ ಮತ್ತು ದಿ ವೇಲ್ ಚಿತ್ರಗಳು ಯಾವುದೇ ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಬಿಡುಗಡೆಯಾಗುತ್ತಿಲ್ಲ.

ಇದನ್ನೂ ಓದಿ: ಆಸ್ಕರ್ ಗೆದ್ದ ಆರ್​ಆರ್​ಆರ್​: ಜೂ.ಎನ್‌ಟಿಆರ್‌​, ರಾಮ್​ಚರಣ್​ ಹರ್ಷೋದ್ಗಾರ ಹೀಗಿತ್ತು..

ಭಾರತಕ್ಕೆ ಎರಡು ಪ್ರಶಸ್ತಿಗಳು: 95 ನೇ ಸಾಲಿನ ಅಕಾಡೆಮಿ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಆರ್​ಆರ್​ಆರ್​ ಚಿತ್ರದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್​ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಹಾಡನ್ನು ಚಂದ್ರಬೋಸ್​ ರಚಿಸಿದ್ದು ಮತ್ತು ಎಂಎಂ ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ನಾಟು ನಾಟು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ.

ಇನ್ನು ಕಾರ್ತಿಕಿ ಗೊನ್ಸಾಲ್ವೆಸ್​ ನಿರ್ದೇಶನದ ಸಿ ಎಲಿಫೆಂಟ್​ ವಿಸ್ಪರರ್ಸ್​ ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್​ ಪ್ರಶಸ್ತಿಯನ್ನು ಗೆದ್ದಿದೆ. ಇದೊಂದು ಭಾವನಾತ್ಮಕ ಕಿರುಚಿತ್ರವಾಗಿದ್ದು, ಆನೆಗಳ ಸಂರಕ್ಷಣೆ ಮತ್ತು ಪ್ರಾಣಿಗಳ ರಕ್ಷಣೆ ಕುರಿತ ಸಂದೇಶ ರವಾನಿಸಲಾಗಿದೆ. ಇವೆರಡು ಚಿತ್ರಗಳು ಭಾರತಕ್ಕೆ ಹೆಸರು ತಂದುಕೊಟ್ಟಿದ್ದು, ಇತಿಹಾಸ ಸೃಷ್ಟಿಸಿದೆ.

ಇದನ್ನೂ ಓದಿ: 'ಆರ್‌ಆರ್‌ಆರ್‌', 'ದ ಎಲಿಫೆಂಟ್‌ ವಿಸ್ಪರರ್ಸ್‌' ಆಸ್ಕರ್ ಸಾಧನೆ: ಪ್ರಧಾನಿ ಮೋದಿ ಅಭಿನಂದನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.