ಓ ಮೈ ಗಾಡ್ 2 ಮತ್ತು ಗದರ್ 2 ಎರಡೂ ಕೂಡ 2023ರ ಬಾಲಿವುಡ್ ಬಹುನಿರೀಕ್ಷಿತ ಚಿತ್ರಗಳು. ಈ ಸಿನಿಮಾಗಳು ಒಂದೇ ದಿನ ತೆರೆಕಂಡು, ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ಬಡಿಸಿದೆ. ಈ ಎರಡೂ ಚಿತ್ರಗಳು ಬಾಲಿವುಡ್ ಕ್ಷೇತ್ರದ ಬ್ಲಾಕ್ ಬಸ್ಟರ್ ಸಿನಿಮಾದ ಸೀಕ್ವೆಲ್ಗಳು. ಪಾತ್ರ ವಹಿಸಿರುವವರೂ ಕೂಡ ಸೂಪರ್ ಸ್ಟಾರ್ಸ್. ಅಂದ ಮೇಲೆ ನಿರೀಕ್ಷೆ ಕೊಂಚ ಹೆಚ್ಚೇ ಅಲ್ವೇ?.
ಗದರ್ 2 VS ಓಎಂಜಿ 2: ನಿರೀಕ್ಷೆಯಂತೆ ಸನ್ನಿ ಡಿಯೋಲ್ ಮತ್ತು ಅಮಿಷಾ ಪಟೇಲ್ ಅಭಿನಯದ ಗದರ್ 2 ಬಾಕ್ಸ್ ಆಫೀಸ್ನಲ್ಲಿ ಯಶಸ್ಸಿನಲೆ ಎಬ್ಬಿಸಿದೆ. ಸಿನಿಮಾ ಬಿಡುಗಡೆಗೂ ಮುನ್ನ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ ಓ ಮೈ ಗಾಡ್ 2 ಕೊಂಚ ಹಿನ್ನೆಡೆ ಸಾಧಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಅಮಿತ್ ರೈ ನಿರ್ದೇಶನದ ಈ ಚಿತ್ರವೂ ಕೂಡ ಉತ್ತಮ ಪ್ರದರ್ಶನ ಮುಂದುವರಿಸಿದೆ. ಗದರ್ 2 ಸ್ವಾತಂತ್ರ್ಯ ದಿನಾಚರಣೆಯಂದು 56 ಕೋಟಿ ರೂ. ಗಳಿಸುವ ಮೂಲಕ ದಾಖಲೆ ಸೃಷ್ಟಿಸಿದ್ದರೆ, ಅಕ್ಕಿ, ಪಂಕಜ್ ತ್ರಿಪಾಠಿ, ಯಾಮಿ ಗೌತಮ್ ನಟನೆಯ ಓಎಂಜಿ 2 ಕೂಡ ಪ್ರಭಾವಶಾಲಿ ಅಂಶಿ ಅಂಶ ಹೊಂದಿದೆ.
ಓಎಂಜಿ 2 ಒಟ್ಟು ಕಲೆಕ್ಷನ್: ನಿನ್ನೆ ಅಂದರೆ ಸ್ವಾತಂತ್ರ್ಯ ದಿನಾಚರಣೆಯಂದು ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯ ಓ ಮೈ ಗಾಡ್ನ ಸೀಕ್ವೆಲ್ ಓಎಂಜಿ 2 ಸಿನಿಮಾ 18.5 ಕೋಟಿ ರೂ. ಗಳಿಸುವಲ್ಲಿ ಯಶ ಕಂಡಿದೆ. ಬಿಡುಗಡೆ ಆದ ಬಳಿಕ ಸಿನಿಮಾದ ಅತ್ಯಧಿಕ ಕಲೆಕ್ಷನ್ ಸಂಖ್ಯೆ ಇದಾಗಿದೆ. ಈ ಮೂಲಕ ಸಿನಿಮಾ ತೆರೆಕಂಡು 5 ದಿನಗಳಲ್ಲಿ 73.67 ಕೋಟಿ ರೂ. ಕಲೆಕ್ಷನ್ ಮಾಡಿದೆ. ಗದರ್ 2ಗೆ ಹೋಲಿಸಿದರೆ ಈ ಸಂಖ್ಯೆ ಕೊಂಚ ಕಡಿಮೆ ಎನಿಸಿದರೂ, ಸಿನಿಮಾ ಯಶಸ್ಸಿಗೆ ಇಷ್ಟು ಸಂಪಾದನೆ ಹೆಚ್ಚೇ ಎನ್ನಬಹುದು.
ಇದನ್ನೂ ಓದಿ: Jailer Collection: ವಿಶ್ವಾದ್ಯಂತ ಜೈಲರ್ ಅಬ್ಬರ - 400 ಕೋಟಿ ಗಳಿಕೆಯತ್ತ ರಜಿನಿ ಸಿನಿಮಾ!
ಓ ಮೈ ಗಾಡ್ 2 ದಿನನಿತ್ಯದ ಸಂಪಾದನೆ: ಸತತ ಹಿನ್ನೆಡೆ ಅನುಭವಿಸಿದ್ದ ನಟ ಅಕ್ಷಯ್ ಕುಮಾರ್ ಅವರು ಬಹುನಿರೀಕ್ಷೆಯೊಂದಿಗೆ ಈ ಸಿನಿಮಾ ಬಿಡುಗಡೆಗೊಳಿಸಿದರು. ತೆರೆಕಂಡ ಮೊದಲ ದಿನ ಚಿತ್ರ 10,26 ಕೊಟಿ ರೂ. ಕಲೆಕ್ಷನ್ ಮಾಡಿತು. ಎರಡನೇ ದಿನ 15.3 ಕೋಟಿ ರೂ., ಮೂರನೇ ದಿನ 17,55 ಕೋಟಿ ರೂ., ನಾಲ್ಕನೇ ದಿನ 12 ಕೋಟಿ ರೂ. ಗಳಿಸಿತ್ತು. ಐದನೇ ದಿನ ಸ್ವಾತಂತ್ರ್ಯ ದಿನದ ರಜೆಯನ್ನು ಸದುಪಯೋಗಪಡಿಸಿಕೊಂಡ ಸಿನಿಮಾ 18.5 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಯಿತು. ಸಿನಿಮಾ ಇಂಡಸ್ಟ್ರಿ ಟ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ ಚಿತ್ರ ಮಂಗಳವಾರದಂದು ಶೇ. 74.37 ರಷ್ಟು ಆಕ್ಯುಪೆನ್ಸಿ ದರ ಹೊಂದಿತ್ತು.
ಇದನ್ನೂ ಓದಿ: Gadar 2: ಹುಬ್ಬೇರಿಸುವಂತಿದೆ ಗದರ್ 2 ಕಲೆಕ್ಷನ್ - ಸೂಪರ್ಹಿಟ್ ಸಿನಿಮಾ ವೀಕ್ಷಿಸಿದ ಕಾರ್ತಿಕ್ ಆರ್ಯನ್
ಸನ್ನಿ ಡಿಯೋಲ್ ಮತ್ತು ಅಮಿಷಾ ಪಟೇಲ್ ಪ್ರಮುಖ ಪಾತ್ರದಲ್ಲಿರುವ ಗದರ್ 2 ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯಂದು 56.50 ಕೋಟಿ ರೂ. ಸಂಗ್ರಹ ಮಾಡುವ ಮೂಲಕ ಕಳೆದ ಐದು ದಿನಗಳಲ್ಲಿ 231.50 ಕೋಟಿ ರೂ. ಕಲೆಕ್ಷನ್ ಮಾಡಿದೆ.