ETV Bharat / entertainment

ಶುರುವಾಯ್ತು ಹೊಸಬರ "ಜರ್ನಿ" ಸಿನಿಮಾ; ನಿರೂಪಣೆಯಿಂದ ನಿರ್ದೇಶನದತ್ತ ಮುಖ ಮಾಡಿದ ಅಗ್ನಿ - ​ ETV Bharat Karnataka

ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳನ್ನು ಹೊತ್ತು ತರುತ್ತಿರುವ "ಜರ್ನಿ" ಸಿನಿಮಾವನ್ನು ಅಗ್ನಿ ಅವರು ನಿರ್ದೇಶನ ಮಾಡುತ್ತಿದ್ದಾರೆ.

"ಜರ್ನಿ" ಸಿನಿಮಾ
"ಜರ್ನಿ" ಸಿನಿಮಾ
author img

By ETV Bharat Karnataka Team

Published : Nov 26, 2023, 5:21 PM IST

ಇತ್ತೀಚೆಗೆ ಸ್ಯಾಂಡಲ್​ ವುಡ್​ನಲ್ಲಿ ಹೊಸಬರ ಅಬ್ಬರ ಜೋರಾಗಿದೆ. ಹಲವು ಹೊಸಬರು ಗುಣಮಟ್ಟದ, ಕಂಟೆಂಟ್​ವುಳ್ಳ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ. ದೊಡ್ಡ ಗೆಲುವು ಸಾಧಿಸದಿದ್ದರೂ ಪ್ರಶಂಸೆಯನ್ನು ಪಡೆದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗುವ ಮೂಲಕ ಹೊಸ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ತಯಾರಾಗುತ್ತಿರುವ ಸಿನಿಮಾ ಜರ್ನಿ. ಇತ್ತೀಚೆಗೆಷ್ಟೇ ಬೆಂಗಳೂರಿನ ಬಂಡೇ ಮಹಾಕಾಳಿ ಸನ್ನಿಧಿಯಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ.

ಒಂದಷ್ಟು ಸೀರಿಯಲ್​ಗಳಲ್ಲಿ ಡೈರೆಕ್ಷನ್ ವಿಭಾಗದಲ್ಲಿ ಕೆಲಸ ಮಾಡಿರುವ ಹಾಗೂ ನಿರೂಪಕನಾಗಿ ಗುರುತಿಸಿಕೊಂಡಿರುವ ಅಗ್ನಿ ನಿರ್ದೇಶಕರಾಗಿ ಜರ್ನಿ ಸಿನಿಮಾ ಮೂಲಕ ಚೊಚ್ಚಲ ಹೆಜ್ಜೆ ಇಡುತ್ತಿದ್ದಾರೆ. ಈ ಚಿತ್ರಕ್ಕೆ ತಾವೇ ಕಥೆ ಚಿತ್ರಕಥೆ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜರ್ನಿ ಚಿತ್ರದ ಮೂಲಕ ದಿನಿ ಎಂಬ ಯುವ ಪ್ರತಿಭೆ ನಾಯಕನಾಗಿ ಬಣ್ಣ ಹಚ್ಚುತ್ತಿದ್ದು, ಮುಖ್ಯ ಭೂಮಿಕೆಯಲ್ಲಿ ದಿನಿ, ಪೃಥ್ವಿ, ಸ್ಪೂರ್ತಿ, ಚೇತನ್ ದುರ್ಗ ಕಾಣಿಸಿಕೊಳ್ಳಲಿದ್ದಾರೆ.

5 ಜನ ಸ್ನೇಹಿತರ ನಡುವೆ ನಡೆಯುವ ಕಥೆ ಇದಾಗಿದ್ದು, ಕಾಲೇಜ್ ನಂತರ ದಿನಗಳನ್ನು ಇಟ್ಟುಕೊಂಡು ಮಾಡಿರುವ ಸಿನಿಮಾವಾಗಿದೆ. ಹಾಸನ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ನಿರ್ದೇಶಕನಾಗಿ ನನಗೆ ಇದು ಮೊದಲ ಸಿನಿಮಾ. ನಿರೂಪಕನಿಂದ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಡುತ್ತಿದ್ದೇನೆ ಎಂದು ನಿರ್ದೇಶಕ ಅಗ್ನಿ ಹೇಳಿದ್ದಾರೆ.

"ಜರ್ನಿ" ಸಿನಿಮಾ ತಂಡ

ನಾಯಕ ದಿನಿ ಮಾತನಾಡಿ, ಅಗ್ನಿ ಅವರು ಹೇಳಿದ ಕಥೆ ಇಷ್ಟವಾಯ್ತು. ಸಿನಿಮಾ ಶುರುವಾದಾಗಿನಿಂದ ಅಂತ್ಯದವರೆಗೂ ಮನರಂಜನೆ ಸಿಗುತ್ತದೆ. ಕ್ಲೈಮ್ಯಾಕ್ಸ್ ನಲ್ಲಿ ಪ್ರತಿಯೊಬ್ಬರು ಕಣ್ಣೀರು ಬರುತ್ತದೆ. ಕ್ಲೈಮ್ಯಾಕ್ಸ್​ಗೂ ಮುನ್ನ ಪ್ರತಿಯೊಬ್ಬರ ಮುಖದಲ್ಲಿ ನಗು ಇರುತ್ತದೆ. ಕಥೆ ಅದ್ಭುತವಾಗಿ ಮೂಡಿ ಬಂದಿದೆ. ನಮ್ಮಂತ ಹೊಸಬರಿಗೆ ನಿಮ್ಮ ಆಶೀರ್ವಾದ ಇರಲಿ ಎಂದರು.

ಜರ್ನಿ ಎಂಬ ಸಿನಿಮಾ ಒಂದೊಳ್ಳೆ ಯೂತ್ ಎಂಟರ್ ಟೈನರ್ ಸಿನಿಮಾ. ಕಾಮಿಡಿ ಜೊತೆಗೆ ಎಮೋಷನಲ್ ಮಿಶ್ರಣವನ್ನು ಹದವಾಗಿ ಬೆರೆಸಿ ಚಿತ್ರದ ಕಥೆ ಹೆಣೆಯಲಾಗಿದೆ. ನಿರ್ದೇಶಕ ಅಗ್ನಿ ಅವರು ಹರಿಪ್ರಸಾದ್ ನಾಯಕ್ ಜೊತೆಗೂಡಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅರುಣ್ ಕುಮಾರ್ ಬಿಟಿ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ ಜರ್ನಿ ಚಿತ್ರಕ್ಕಿದೆ. ಡಿಸೆಂಬರ್ ಮೊದಲ ವಾರದಂದು ಜರ್ನಿ ಸಿನಿಮಾದ ಚಿತ್ರೀಕರಣ ಆರಂಭವಾಲಿದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಮಾಹಿತಿಯನ್ನು ಒಂದೊಂದಾಗಿ ರಿವೀಲ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಇದನ್ನೂ ಓದಿ : ಡಾ.ರಾಜ್ ಕಪ್ ಕ್ರಿಕೆಟ್​: ನವೆಂಬರ್ 28ರಿಂದ ಡಿ.10 ರವರೆಗೆ ಟೂರ್ನಿ, ಜರ್ಸಿ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.