ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರ ಪತಿ ಮತ್ತು ಚಲನಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಿಕ್ಕಿ ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪತಿಗೆ ಹೆಚ್ಚು ಸ್ಪೆಷಲ್ ಆಗಿಯೇ ನಯನತಾರಾ ಬರ್ತ್ಡೇ ವಿಶ್ ಮಾಡಿದ್ದಾರೆ. ಈ ವಿಶೇಷ ದಿನದಂದು ವಿಘ್ನೇಶ್ ಜೊತೆಗಿನ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಜವಾನ್ ಸ್ಟಾರ್ ನಟಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ದೀರ್ಘ ಶೀರ್ಷಿಕೆಯೊಂದಿಗೆ ಪತಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
"ಹ್ಯಾಪಿ ಬರ್ತ್ಡೇ ಮೈ ಬ್ಲೆಸಿಂಗ್. ಈ ವಿಶೇಷ ದಿನದಂದು ನಾನು ನಿಮ್ಮ ಬಗ್ಗೆ ಬರೆಯಲು ಬಯಸುವುದು ತುಂಬಾ ಇದೆ. ಆದರೆ ನಾನು ಬರೆಯಲು ಪ್ರಾರಂಭಿಸಿದರೆ, ಅದನ್ನು ಕೆಲವು ವಿಷಯಗಳಲ್ಲಿ ನಿಲ್ಲಿಸಲು ಸಾಧ್ಯವಿಲ್ಲ. ನನ್ನ ಮೇಲಿನ ಪ್ರೀತಿಗಾಗಿ ನಾನು ನಿಮಗೆ ಆಭಾರಿಯಾಗಿದ್ದೇನೆ. ನಮ್ಮ ಸಂಬಂಧದ ಬಗ್ಗೆ ನಿಮಗಿರುವ ಗೌರವಕ್ಕೆ ನಾನು ತುಂಬಾ ಕೃತಜ್ಞಳಾಗಿದ್ದೇನೆ. ನೀವು ನನಗೆ ಎಲ್ಲಾ ಆಗಿದ್ದೀರಿ. ನಿಮ್ಮಂತೆ ಯಾರೂ ಇಲ್ಲ. ನನ್ನ ಜೀವನಕ್ಕೆ ಬಂದಿದ್ದಕ್ಕಾಗಿ, ಅದನ್ನು ತುಂಬಾ ಅರ್ಥಪೂರ್ಣ ಮತ್ತು ಸುಂದರವಾಗಿಸಿದ್ದಕ್ಕಾಗಿ ತುಂಬಾ ಥ್ಯಾಂಕ್ಸ್. ನೀವು ಏನೆಲ್ಲಾ ಮಾಡಿದ್ದೀರೋ ಅದೆಲ್ಲವೂ ಅತ್ಯುತ್ತಮ. ಹೃದಯಾಂತರಾಳದಿಂದ ನನ್ನ ಉಯಿರ್ ಜೀವನದಲ್ಲಿ ಎಲ್ಲಕ್ಕಿಂತಲೂ ಉತ್ತಮವಾಗಿರಲಿ ಎಂದು ನಾನು ಬಯಸುತ್ತೇನೆ. ನಿಮ್ಮ ಎಲ್ಲಾ ಕನಸುಗಳು ನಿಜವಾಗಲಿ. ದೇವರು ನಿಮ್ಮನ್ನು ಪ್ರಪಂಚದ ಎಲ್ಲಾ ಸಂತೋಷಗಳೊಂದಿಗೆ ಹಾರೈಸಲಿ. ಐ ಲವ್ ಯೂ" ಎಂದು ಸುದೀರ್ಘ ಪ್ರೀತಿಯ ಬರಹಗಳೊಂದಿಗೆ ಪತಿಗೆ ನಯನತಾರಾ ಬರ್ತ್ಡೇ ವಿಶ್ ಮಾಡಿದ್ದಾರೆ.
-
NAYANTHARA: NEW FILM TITLED ‘MANNANGATTI SINCE 1960’… Producer #SLakshmanKumar [#PrincePictures] unveils the #FirstLook motion poster of #Nayanthara starrer #MannangattiSince1960… Directed by #DudeVicky… Co-produced by #AVenkatesh… Filming begins soon.#Mannangatti
— taran adarsh (@taran_adarsh) September 18, 2023 " class="align-text-top noRightClick twitterSection" data="
🔗:… pic.twitter.com/87e6onFvFH
">NAYANTHARA: NEW FILM TITLED ‘MANNANGATTI SINCE 1960’… Producer #SLakshmanKumar [#PrincePictures] unveils the #FirstLook motion poster of #Nayanthara starrer #MannangattiSince1960… Directed by #DudeVicky… Co-produced by #AVenkatesh… Filming begins soon.#Mannangatti
— taran adarsh (@taran_adarsh) September 18, 2023
🔗:… pic.twitter.com/87e6onFvFHNAYANTHARA: NEW FILM TITLED ‘MANNANGATTI SINCE 1960’… Producer #SLakshmanKumar [#PrincePictures] unveils the #FirstLook motion poster of #Nayanthara starrer #MannangattiSince1960… Directed by #DudeVicky… Co-produced by #AVenkatesh… Filming begins soon.#Mannangatti
— taran adarsh (@taran_adarsh) September 18, 2023
🔗:… pic.twitter.com/87e6onFvFH
ಇದಕ್ಕೂ ಮುನ್ನ ನಯನತಾರಾ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದರು. ಈ ವಾರಾಂತ್ಯವನ್ನು ವಿಘ್ನೇಶ್ ಶಿವನ್ ಜೊತೆ ಸಂತೋಷದಿಂದ ಕಳೆದಿರುವ ಫೋಟೋ ಇದಾಗಿತ್ತು. ಇಬ್ಬರು ಕೇರಳದ ಕಡೆಗೆ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿನ ಪೂಲೊಂದರಲ್ಲಿ ಇಬ್ಬರು ಜೊತೆಯಾಗಿ ಟೈಮ್ ಸ್ಪೆಂಡ್ ಮಾಡಿರುವ ಸುಂದರ ಚಿತ್ರವಿದು. ನಯನತಾರಾ 'ಬ್ಲಿಸ್' ಎಂಬ ಕ್ಯಾಪ್ಶನ್ ಜೊತೆ ಫೋಟೋ ಹಂಚಿಕೊಂಡಿದ್ದರು.
ಮಾದರಿ ದಂಪತಿ.. 2015ರಲ್ಲಿ ವಿಜಯ್ ಸೇತುಪತಿ ನಟನೆಯ 'ನಾನುಂ ರೌಡಿ ದಾನ್' ಎಂಬ ಚಿತ್ರವನ್ನು ವಿಘ್ನೇಶ್ ನಿರ್ದೇಶಿಸಿದ್ದು, ನಯನತಾರಾ ನಟಿಸಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಸುಮಾರು ಏಳು ವರ್ಷಗಳಿಂದ ಪ್ರೀತಿಸುತ್ತಿದ್ದ ನಯನತಾರಾ ಮತ್ತು ವಿಘ್ನೇಶ್ ಶಿವನ್ 2022 ರ ಜೂನ್ 9 ರಂದು ಮದುವೆಯಾಗಿದ್ದರು. ಬಳಿಕ ಬಾಡಿಗೆ ತಾಯ್ತನದ ಮೂಲಕ ಅಕ್ಟೋಬರ್ 9 ರಂದು ಇಬ್ಬರು ಗಂಡು ಮಕ್ಕಳನ್ನು ಸ್ವಾಗತಿಸಿದರು.
-
Bliss😇 #WikkyNayan pic.twitter.com/xl5Ih5Q7As
— Nayanthara✨ (@NayantharaU) September 17, 2023 " class="align-text-top noRightClick twitterSection" data="
">Bliss😇 #WikkyNayan pic.twitter.com/xl5Ih5Q7As
— Nayanthara✨ (@NayantharaU) September 17, 2023Bliss😇 #WikkyNayan pic.twitter.com/xl5Ih5Q7As
— Nayanthara✨ (@NayantharaU) September 17, 2023
ಸಿನಿಮಾ ವಿಚಾರವಾಗಿ ನೋಡುವುದಾದರೆ, ನಟಿ ನಯನತಾರಾ ಪ್ರಸ್ತುತ ಶಾರುಖ್ ಖಾನ್ ಜೊತೆ ನಟಿಸಿದ 'ಜವಾನ್' ಸಿನಿಮಾದ ಯಶ್ಸಸ್ಸಿನಲ್ಲಿ ಮುಳುಗಿದ್ದಾರೆ. ಅವರ ಮುಂದಿನ ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಅನ್ನು ತಯಾರಕರು ಸೋಮವಾರ ಹಂಚಿಕೊಂಡಿದ್ದಾರೆ. ಮನ್ನಂಗಟ್ಟಿ: ಸಿನ್ಸ್ 1960 ಸಿನಿಮಾವನ್ನು ಡ್ಯೂಡ್ ವಿಕ್ಕಿ ಬರೆದು ನಿರ್ದೇಶಿಸಿದ್ದಾರೆ. ಶೀಘ್ರದಲ್ಲೇ ಚಿತ್ರ ತೆರೆಗೆ ಬರುವ ನಿರೀಕ್ಷೆಯಿದೆ. ಆದರೆ ಬಿಡುಗಡೆ ದಿನಾಂಕ ಇನ್ನೂ ಫಿಕ್ಸ್ ಆಗಿಲ್ಲ.